🌺 ಪ್ರತಿಮಾನಾಟಕದ ಒಂದು ಸುಮ 🌺
*अद्य खलु अवगच्छामि पित्रा मे दुष्करं कृतम् | कीदृशस्तनयस्नेहो भ्रातृस्नेहोयमीदृश: ||*
_ಭರತನು ಬಂದ ಸಮಾಚಾರ ರಾಮನಿಗೆ ತಿಳಿಯಿತು. ತಮ್ಮನ ಪ್ರೀತಿಯನ್ನು ಕಂಡು ರಾಮನಿಗೆ ಮಾತೇ ಹೊರಡುತ್ತಿಲ್ಲ. ಮೈಥಿಲಿಗೆ ಹೀಗೆ ಹೇಳುತ್ತಿದ್ದಾನೆ. ಭರತನು ನನ್ನನ್ನು ನೋಡಲು ಬಂದಿದ್ದರಿಂದ ಇಂದು ನನಗೆ ಒಂದು ವಿಷಯ ಮನದಟ್ಟಾಯಿತು. ನನ್ನ ತಂದೆ ದಶರಥ ನಿಜವಾಗಿಯೂ ಕಷ್ಟದ ಕೆಲಸವನ್ನು ಮಾಡಿದ್ದಾರೆ. ಮಗನನ್ನು ದೂರ ಕಳುಹಿಸಿ ಅದೂ ರಾಜ್ಯಭ್ರಂಶನನ್ನಾಗಿಸಿ ಎಷ್ಟು ದುಃಖ ಅನುಭವಿಸಿರಬಹುದು. ನಾನೇನೋ ಕಾಲಿಗೆರಗಿ ಆಣತಿಯೆಂದು ವನಕ್ಕೆ ಹೊರಟೆ. ಅಪ್ಪ ಆ ಘೋರ ದುಃಖಹೇತುವಾದ ವರಗಳನ್ನು ನೀಡಲಾದರೂ ಹೇಗೆ ಸಮರ್ಥನಾದನು. ಪ್ರಾಣ ಉಳಿಸಿಕೊಂಡು ಇರುವುದು ನಿಜಕ್ಕೂ ಆಶ್ಚರ್ಯಕರ. ( ರಾಮನಿಗೆ ಅಪ್ಪನ ಮರಣ ಇನ್ನೂ ತಿಳಿದಿಲ್ಲ.) ಭ್ರಾತೃಸ್ನೇಹವೇ ಇಷ್ಟು ಬಲವಾಗಿರಬೇಕಾದರೆ, ನನ್ನನ್ನು ಕಾಣಲೆಂದೇ ತನ್ನ ಕೈಗೆ ಅನಾಯಾಸವಾಗಿ ವಿರೋಧಿಗಳಿಲ್ಲದೆ ಒದಗಿ ಬಂದ ಸಮೃದ್ಧ ರಾಜ್ಯವನ್ನು ಅಧಿಕಾರವನ್ನು ಬಿಟ್ಟು ಬಂದ ಭರತನು ಬರುವಂತಹ ಸೆಳೆತ ಇಲ್ಲಿದ್ದರೆ, ಅಪ್ಪ - ಮಗನ ಸ್ನೇಹ ಇನ್ನೆಷ್ಟಿದ್ದೀತು. ಮಗನನ್ನು ದೂರ ಕಳುಹಿಸಿಯೂ ಅಷ್ಟು ಕಾಲ ಬದುಕಿದ ನನ್ನ ಅಪ್ಪನ ಧೈರ್ಯ ನಿಜಕ್ಕೂ ಅಸಾಮಾನ್ಯವಾದುದು. ಅದರಲ್ಲೂ ಪ್ರಿಯಪುತ್ರನ ಪರಿತ್ಯಾಗವು ಸಹಿಸಲು ಅಶಕ್ಯ. ಅಂತಹ ಪುತ್ರಸ್ನೇಹದಿಂದ ವಂಚಿತನಾದ ಅಪ್ಪನ ಗತಿ ಏನಾಗಿರಬೇಡ! ಭರತನಿಗೆ ಅಣ್ಣನನ್ನು ಬಿಟ್ಟು ಒಂದು ದಿನ ಆಳಲು ಮನ ಒಪ್ಪದೇ ಓಡೋಡಿ ಬಂದಿದ್ದಾನೆ.ದಶರಥನ ಸಹನೆ ನಿಜಕ್ಕೂ ಶ್ಲಾಘ್ಯ. ಅಪ್ಪ- ಅಮ್ಮಂದಿರು ವಯಸ್ಸಾದ ಮೇಲೆ ಕಿರಿಕಿರಿ ಮಾಡುವರೆಂದು ವೃದ್ಧಾಶ್ರಮಕ್ಕಟ್ಟುವ ಇಂದಿನ ಮಕ್ಕಳು ಅವರ ಮನದ ದುಗುಡವನ್ನು ಎಂದಿಗೂ ಅರಿಯಲಾರರು. ಅವರು ಯಂತ್ರಗಳಂತೆ ನಿರ್ಭಾವುಕರಾಗಿ ನೊಟು ಎಣಿಸುವ ಕೆಲಸವನ್ನೇ ಮಾಡುವರೇನೋ! ಮಕ್ಕಳ ಮೇಲಿನ ಪೋಷಕರ ಪ್ರೀತಿ ಅಗಾಧವಾದುದು._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ