🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು🌾📗
ಭಾಗ-೧೪
*ರಕ್ಷಸಾಂ ಕಾಮರೂಪಾಣಾಂ ವಿಜ್ಞಾನೇ ಕಾ ಗತಿರ್ಮಮ*
_ಸೀತೆಯ ಮಾತಿದು. ಮಾರುತಿಯು ಮರುತನಂತೆ ಗಿಡಮರಗಳನ್ನು ನಾಶಮಾಡಲು ತೊಡಗಿದಾಗ ಭಯಭೀತರಾದ ರಾಕ್ಷಸಿಯರು ನಿನ್ನೊಡನೆ ಮಾತನಾಡಿದ ಕಪಿ ಯಾರವನು ಎಂದು ಪ್ರಶ್ನಿಸುತ್ತಾರೆ. ಆಗ ಸೀತೆ ಬುದ್ಧಿವಂತಿಕೆಯಿಂದ ನುಡಿಯುವ ಮಾತು. ಸದಾ ಸತ್ಯ ನುಡಿಯಬೇಕು. ಆಪತ್ಕಾಲದಲ್ಲಿ ಆಪತ್ತಿನಿಂದ ತಪ್ಪಿಸಿಕೊಳ್ಳುವ ಸತ್ಯ ನುಡಿಯಬೇಕು. ಸೀತೆ ಒಂದು ವೇಳೆ ಈಗಲೇ ಹನುಮನ ಚರಿತ್ರೆಯನ್ನು ಅರುಹಿದರೆ ರಾವಣ ಜಾಗೃತನಾಗಿ ಧ್ವಂಸಕಾರ್ಯ ಆಗದೇ ಹೋದೀತು. ಅವಳಿಗೂ ಬೇಡದ ವಿಚಾರಣೆಯ ತೊಂದರೆ. ಇದನ್ನು ತಪ್ಪಿಸಲು ಉಪಾಯದಿಂದ ನಿಮ್ಮ ಮಾಯಾವಿಗಳ ಮಾಯಾ ಮೋಹಗಳು ನನಗೆ ಹೇಗೇ ತಾನೇ ತಿಳಿಯಬೇಕು ಎನ್ನುತ್ತಾಳೆ. ನಾವೂ ಕೂಡ ಸಮಯ ಸಂದರ್ಭ ನೋಡಿ ಮಾತನ್ನಾಡುವುದನ್ನು ಸೀತೆಯಿಂದ ಕಲಿಯಬೇಕು. ಅವಳಾಡಿದ ಮಾತು ಸತ್ಯವೇ ಆಗಿತ್ತು.
ಮುಂದುವರಿದು ಈ ಮಾತನ್ನು ಹೇಳುವಳು.
*ಯೂಯಮೇವಾಭಿಜಾನೀತ ಯೋಯಂ ಯದ್ವಾ ಕರಿಷ್ಯತಿ ಅಹಿರೇವ ಹ್ಯಹೇಃ ಪಾದಾನ್ವಿಜಾನಾತಿ ನ ಸಂಶಯಃ*
ಇವನಾರು, ಏನು ಮಾಡುವನು ಎಂಬುದೆಲ್ಲವ ನೀವೇ ಬಲ್ಲಿರಿ, ಹಾವಿನ ಹೆಜ್ಜೆ ಹಾವಿಗೇ ತಿಳಿಯುವುದು ಹೊರತು ಮನುಷ್ಯರಿಗಲ್ಲ. ನಿಮ್ಮ ರಾಕ್ಷಸರ ದುಷ್ಕೃತ್ಯಗಳ ಬಗೆಗೆ ನಿಮಗೇ ಹೆಚ್ಚಿನ ಮಾಹಿತಿ ಇರುತ್ತದೆ. ಇಲ್ಲಿ ಸರ್ಪಕ್ಕೆ ಹೋಲಿಕೆ ಮಾಡಿದ್ದು ವಿಷಯುಕ್ತರಾಗಿರುತ್ತಾರೆ ಎಂಬ ಅರ್ಥದಲ್ಲಿ. ಹೀಗೆ ತನಗೆ ಕಪಿಯ ಬಗೆಗೆ ಗೊತ್ತಿದ್ದರೂ ಸೀತೆ ಆಪತ್ತಿನಿಂದ ಪಾರಾಗಲು ಈ ಮಧ್ಯಮ ಮಾರ್ಗ ಬಳಸುತ್ತಾಳೆ. ಅಷ್ಟಾಗಿ ಸತ್ಯ ಹೇಳಿದರೆ ರಾಕ್ಷಸಿಯರು ಕೊಂದೇ ಬಿಡಬಹುದು.
ಇನ್ನು ಸುಳ್ಳು ಎಂದಿಗೂ ನುಡಿಯಬಾರದು. ಆದರೆ ಕೆಲವು ಸಂದರ್ಭಗಳಲ್ಲಿ ಅದು ಅಷ್ಟೇನೂ ದೋಷವಾಗದು.
*ವಿವಾಹಕಾಲೇ ರತಿಸಂಪ್ರಯೋಗೇ ಪ್ರಾಣಾತ್ಯಯೇ ಸರ್ವಧನಾಪಹಾರೇ, ಮಿತ್ರಸ್ಯ ಚಾರ್ಥೇಪ್ಯನೃತಂ ವದೇಯುಃ ಪಂಚಾನೃತಾನ್ಯಾಹುರಪಾಕೃತಾನಿ*
_ವಿವಾಹಕಾಲ, ರತಿಸಮಯ, ಪ್ರಾಣಕ್ಕೆ ಆಪತ್ತು, ಧನಾಪಹಾರ, ಮಿತ್ರನಿಗಾಗಿ ಸುಳ್ಳು ಹೇಳಬಹುದೆನ್ನುವುದು ಧರ್ಮಶಾಸ್ತ್ರ. ವಿವಾಹದ ಸಮಯದಲ್ಲಿ ವರದಕ್ಷಿಣೆಯ ವಿಷಯದಲ್ಲೋ ಊಟ ಮುಂತಾದ ವಿಷಯಗಳಲ್ಲಿ ಸಣ್ಣ ಸಣ್ಣ ವಿಷಯಗಳಲ್ಲಿ ಮದುವೆಯೇ ನಿಂತು ಹೋಗುವ ಸಂದರ್ಭ ಎದುರಾದಾಗ ಅದನ್ನು ಸುಳ್ಳಿನಿಂದ ನಿಭಾಯಿಸಬೇಕು. ( ಅನವಶ್ಯಕವಾಗಿ ಅಥವಾ ವಧು ವರರ ಗುಣಾವಗುಣಗಳ ಬಗೆಗೆ ಸುಳ್ಳಾಡಿದರೆ ನರಕವೇ ಗತಿ) ಇನ್ನು ರತಿಯ ಸಮಯದಲ್ಲಿ ಯಾರೋ ಕರೆಯುವರು ಅಥವಾ ಇನ್ನೇನೋ ಕೆಲಸ ಬಂದೊದಗಿತೆಂದಾದರೆ ಅದನ್ನು ಸುಳ್ಳಾಡಿ ನಿವಾರಿಸಿಕೊಳ್ಳಬೇಕು. ಇಲ್ಲದಿದ್ದರೆ ದೇವಶಾಪ ದೊರೆತೀತು. ಇನ್ನು ಸತ್ಯ ನುಡಿದರೆ ಪ್ರಾಣವೇ ಹೋದೀತೆಂದಾದಲ್ಲಿ ಸುಳ್ಳಾಡಬೇಕು. ಆ ಸಮಯದಲ್ಲೂ ಸತ್ಯ ಹೇಳಿದರೆ ಮೂರ್ಖತನವಾದೀತು. ಇನ್ನು ತನ್ನ ಧನವನ್ನು ( ನ್ಯಾಯವಾಗಿ ಅರ್ಜಿಸಿದ್ದು ಮಾತ್ರ , ಅನ್ಯಾಯದ ಧನದ ಮೇಲೆ ಸ್ವಾಮಿತ್ವವೇ ಇಲ್ಲ) ಯಾರಾದರೂ ಅಪಹರಿಸುತ್ತಾರೆಂದಾಗ ಸುಳ್ಳಾಡಿ ಉಳಿಸಿಕೊಳ್ಳಬೇಕು. ಏಕೆಂದರೆ ಜೀವನ ದೈನ್ಯದಿಂದ ನಡೆಸಬಾರದು. ಕೊನೆಯದಾಗಿ ಆಪ್ತಮಿತ್ರನಿಗೆ ಆಪತ್ತು ಒದಗಿದಾಗ ಅವನ ಪ್ರಾಣರಕ್ಷಣೆಗಾಗಿ ಸುಳ್ಳಾಡಬಹುದು. ಇಲ್ಲಿ ಪ್ರಕೃತ ಸೀತೆಗೆ ಹನುಮನೇ ಧ್ವಂಸ ಮಾಡುತ್ತಿದ್ದಾನೆಂದು ಸಹಜವಾಗಿ ತಿಳಿದಿಲ್ಲ. ಅವಳು ಅನುಮಾನ ಪಡಬಹುದಷ್ಟೇ. ಮುಂದೆ ರಾಕ್ಷಸಿಯರ ಮಾತಿನಿಂದ ಅವಳಿಗೆ ತಿಳಿಯುತ್ತದೆ. ಹಾಗಾಗಿ ಸುಳ್ಳಾಡದೇ ಜಾಣತನದಿಂದ ಪರಿಸ್ಥಿತಿ ನಿಭಾಯಿಸಿದಳು. ಸೀತೆಯ ರೀತಿ ನಮಗೆಲ್ಲ ಮಾರ್ಗದರ್ಶಕವಾಗಬೇಕು._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ