📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು📗🌾
ಭಾಗ-೨೦
*ಸಾಧುರ್ವಾ ಯದಿ ವಾಸಾಧುಃ ಪರೈರೇಷ ಸಮರ್ಪಿತಃ ಬ್ರುವನ್ಪರಾರ್ಥಂ ಪರವಾನ್ನ ದೂತೋ ವಧಮರ್ಹತಿ*
_ವಿಭೀಷಣ ದೂತನ ಅವಧ್ಯತ್ವವನ್ನು ಮತ್ತೆ ಸಮರ್ಥಿಸಿಕೊಳ್ಳುತ್ತಾನೆ. ಇವನು ಶಿಷ್ಟನಿರಲಿ, ದುಷ್ಟನಿರಲಿ ಏನಿದ್ದರೂ ಬೇರೆಯವರಿಂದ ಕಳುಹಿಸಲ್ಪಟ್ಟವನು. ಅವರ ಆಜ್ಞಾನುವರ್ತಿಯಾಗಿ ಅವರ ಪ್ರಯೋಜನವನ್ನೇ ಹೇಳುವನು. ಹಾಗಾಗಿ ಪರಪ್ರಚೋದನೆಗೊಳಗಾದ ಇವನನ್ನು ನಾವು ವಧಿಸುವುದು ತರವಲ್ಲ. ಒಂದು ವೇಳೆ ಸ್ವಂತ ಬುದ್ಧಿಯಿಂದ ಇವನಾಗೇ ಬಂದು ನಾಶವೆಸಗಿದ್ದರೆ ಆಗ ವಧಿಸಬಹುದಿತ್ತು. ಆದರೆ ಇವನೆಷ್ಟಿದ್ದರೂ ದೂತ. ಒಂದು ವೇಳೆ ಇವನು ಹತನಾದರೆ ಬೇರೆ ಯಾವನೂ ಇವನಂತೆ ಇಲ್ಲಿಗೆ ಬರಲೂ ಸಾಧ್ಯವಿಲ್ಲ. ಶತ್ರುಗಳಿಗೆ ನಮ್ಮ ಸುದ್ದಿ ಮುಟ್ಟಿಸಲಾದರೂ ಇವನು ಬದುಕಿರಬೇಕು.ಹೀಗೆ ಬಹಳ ತರ್ಕಬದ್ಧವಾಗಿ ವಿಭೀಷಣ ಧರ್ಮವನ್ನು ಪ್ರತಿಪಾದಿಸುತ್ತಾನೆ. ಯಾವುದು ಪರಹಿತವೊ ಅದೇ ಸತ್ಯ ಅದೇ ಧರ್ಮ. ವಿಭೀಷಣ ಪರಹಿತವನ್ನೇ ಕಂಡು ಧರ್ಮಿಷ್ಠನಾದ._
*ಯದ್ಯಸ್ತಿ ಪತಿಶುಶ್ರೂಷಾ ಯದ್ಯಸ್ತಿ ಚರಿತಂ ತಪಃ ಯದಿ ಚಾಸ್ತ್ಯೇಕಪತ್ನೀತ್ವಂ ಶೀತೋ ಭವ ಹನೂಹತಃ*
_ಹನುಮನ ಬಾಲಕ್ಕೆ ಬೆಂಕಿ ಹಚ್ಚಿದ ವಿಷಯ ರಾಕ್ಷಸಿಯರ ಮುಖೇನ ಸೀತೆಗೆ ತಿಳಿಯುತ್ತದೆ. ಅವಳು ಯಾವ ರೀತಿಯಿಂದಲೂ ಆ ಸಮಯದಲ್ಲಿ ಮಾರುತಿಗೆ ಸಹಾಯ ಮಾಡಲು ಅಸಮರ್ಥಳಾಗಿದ್ದಳು. ಆದರೂ ಅವಳ ಕರುಣೆ ನೋಡಿ. ಯಜ್ಞೇಶ್ವರನೇ, ನಾನೇನಾದರೂ ಇಷ್ಟು ಕಾಲ ರಾಮನ ಶುಶ್ರೂಷೆಯನ್ನು ಮಾಡಿದ್ದು ಸತ್ಯವಾದರೆ , ತಪಸ್ಸನ್ನು ಆಚರಿಸಿದ್ದರೆ ( ಋಷಿಗಳಂತೆ ಕಾಡಿನಲ್ಲಿ ತಪ ಆಚರಿಸದಿದ್ದರೂ ಸೀತೆಯ ದಿನಚರಿಯೇ ತಪಸ್ಸಾಗಿತ್ತು.) ನನ್ನಲ್ಲಿ ಪಾತಿವ್ರತ್ಯ ಇದ್ದದ್ದೇ ಹೌದಾದರೆ, ( ಪರಪುರುಷರನ್ನು ಎಂದಿಗೂ ಕಾಮದೃಷ್ಟಿಯಿಂದ ನೋಡದಿರುವುದು ಹಾಗೂ ಅಂತಹ ಯೋಚನೆಗಳು ಬರದಿರುವುದೇ ಪಾತಿವ್ರತ್ಯ, ರಾಮನೂ ಹೀಗೆಯೇ ವ್ರತವನ್ನು ಹೊಂದಿದ್ದ. ಸೀತೆಗೂ ಲಕ್ಷ್ಮಣನಿಗೂ ಸಂಬಂಧ ಕಲ್ಪಿಸುವ ಮೂರ್ಖರು ಇದನ್ನು ಓದಿಲ್ಲವೇನೋ!) ನೀನು ಹನುಮನನ್ನು ಸುಡದಿರು. ಅವನ ಅಂಗಾಂಗಗಳಲ್ಲಿ ಶೀತನಾಗಿರು. *ಸಾಧುಹಿತಂ* ಎಂದರೆ ಇದೇ ಆಗಿದೆ. ಸಜ್ಜನರು ಕಷ್ಟದಲ್ಲಿದ್ದಾಗ ಯಾವ ಮಾರ್ಗದಿಂದಾದರೂ ಅವರ ಕಷ್ಟಕ್ಕೆ ಪರಿಹಾರ ಹುಡುಕುವುದು. ಸೀತೆ ಸ್ವತಃ ಬಂಧಿಯಾಗಿದ್ದರೂ, ರಾವಣನಿಂದ ಪೀಡಿತಳಾಗಿದ್ದರೂ, ಅಸ್ವತಂತ್ರಳಾಗಿದ್ದರೂ ಮಾರುತಿಯ ಕಷ್ಟವನ್ನು ಕಂಡು ಮರುಗುತ್ತಾಳೆ. ನಮಗಾದರೆ ನಮ್ಮ ನಮ್ಮ ಕಷ್ಟಗಳು ಮಾತ್ರ ಕಾಣುತ್ತವೆ. ಇನ್ನೊಬ್ಬರ ಕಷ್ಟಕ್ಕೆ ದೂರದಲ್ಲಿದ್ದರೂ ಕೂಡಲೇ ಸ್ಪಂದಿಸುವ ಬುದ್ಧಿ ಸೀತೆಯೇ ಕರುಣಿಸಬೇಕಷ್ಟೇ. ಸಹಜವಾಗಿ ಯಾರಾದರೂ ಕಷ್ಟಪಡುತ್ತಿದ್ದರೂ ನಮಗೇನು, ಅಥವಾ ನಮ್ಮವನಲ್ಲ, ನಾವೇಕೆ ತೊಂದರೆ ಮೈಗೆಳೆದುಕೊಳ್ಳುವುದು ಎಂದೆಲ್ಲ ಯೋಚಿಸಿ ಸುಮ್ಮನಿರುತ್ತೇವೆ. ಸೀತೆಯ ಈ ನಡೆ ನಮಗೆಲ್ಲ ಆದರ್ಶ._
*ಯದಿ ಕಶ್ಚಿದನುಕ್ರೋಶಸ್ತಸ್ಯ ಮಯ್ಯಸ್ತಿ ಧೀಮತಃ ಯದಿ ವಾ ಭಾಗ್ಯಶೇಷೋ ಮೇ ಶೀತೋ ಭವ ಹನೂಮತಃ ಯದಿ ಮಾಂ ವೃತ್ತಸಂಪನ್ನಾಂ ತತ್ಸಮಾಗಮಲಾಲಸಾಮ್ ಸ ವಿಜಾನಾತಿ ಧರ್ಮಾತ್ಮಾ ಶೀತೋ ಭವ ಹನೂಮತಃ ಯದಿ ಮಾಂ ತಾರಯೇದಾರ್ಯಃ ಸುಗ್ರೀವಃ ಸತ್ಯಸಂಗರಃ ಅಸ್ಮಾದ್ದುಖಾಂಬುಸಂರೋಧಾಚ್ಛೀತೋ ಭವ ಹನೂಮತಃ*
_ಈ ಮಾತುಗಳಂತೂ ಸೀತೆಯ ನಡತೆ ಹೇಗಿತ್ತೆನ್ನುವುದನ್ನು ಸಾರಿ ಹೇಳುತ್ತವೆ. ಆ ಮಾತೆ ಆಗಲೇ ಅಂದಾಜಿಸಿದ್ದಳೋ ಏನೋ ನನ್ನ ಶೀಲವನ್ನು ಮುಂದೊಂದು ದಿನ ಶಂಕಿಸಿಯಾರೆಂದು, ಅಥವಾ ಲಕ್ಷ್ಮಣಾದಿಗಳ ಜೊತೆ ಕಲ್ಪಿಸಿಯಾರೇನೋ ಎಂದು. ಬುದ್ಧಿವಂತನಾದ ನನ್ನ ಪತಿಗೆ ನನ್ನ ವಿಷಯದಲ್ಲಿ ಕರುಣೆ ಇದ್ದುದೇ ಹೌದಾದರೆ, ನನ್ನಲ್ಲಿ ಅಲ್ಪಸ್ವಲ್ಪವಾದರೂ ಪುಣ್ಯ ಉಳಿದಿದ್ದರೆ ಹನುಮನನ್ನು ಸುಡದಿರು. ನಾವು ಧನವನ್ನೋ ಅನ್ನವನ್ನೋ ಕೊಡಲು ಹಿಂಜರಿಯುತ್ತೇವೆ. ಸೀತೆ ತನ್ನ ಭಾಗ್ಯವನ್ನೇ ಧಾರೆಯೆರೆಯುತ್ತಿದ್ದಾಳೆ. ಇದನ್ನೇ ಸತ್ಪಾತ್ರದಾನ ಎನ್ನುವುದು. ಧರ್ಮಾತ್ಮನಾದ ಶ್ರೀರಾಮನು ನನ್ನನ್ನು ಸದಾಚಾರಸಂಪನ್ನಳೆಂದೂ ಅವನಲ್ಲೇ ನೆಟ್ಟ ಮನಸ್ಸುಳ್ಳವಳೆಂದೂ ಅವನೊಡನೆ ಮಾತ್ರ ಸಮಾಗಮ ಹೊಂದುವ ಇಚ್ಛೆಯುಳ್ಳವಳೆಂದೂ ತಿಳಿದಿದ್ದಾದರೆ ನೀನು ಪವನಾತ್ಮಜನಿಗೆ ಬಿಸಿಯಾಗದಿರು. ಈ ಮೇಲಿನ ವಾಲ್ಮೀಕಿಗಳ ಮಾತಂತೂ ಸ್ಪಷ್ಟ ನಿದರ್ಶನ ಸೀತೆಯ ಪಾವಿತ್ರ್ಯಕ್ಕೆ. ಪೂಜ್ಯನಾದ ಸತ್ಯವಂತನಾದ ಸುಗ್ರೀವನು ನನ್ನನ್ನು ಈ ದುಃಖದಿಂದ ಪಾರುಮಾಡುವುದು ಸತ್ಯವಾಗಿದ್ದರೆ ಹನುಮನಿಗೆ ದುಃಖ ಉಂಟುಮಾಡದಿರು. ಹನುಮನ ಮಾತಿನ ಮೇಲೆ ಸೀತೆಗಿದ್ದ ವಿಶ್ವಾಸ ಎಂತಹದ್ದು ನೋಡಿ. ಸುಗ್ರೀವ ಬಂದು ಕಾಪಾಡುವುದು ಸತ್ಯವೆಂಬ ವಿಶ್ವಾಸ ಮೂಡಿಸಿದ ಹನುಮನ ಮಾತುಗಳ ಪರಿಣತಿ ನಾವೂ ಪಡೆಯಬೇಕು._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ