🌹 ಮೇಘದೂತದ ಒಂದು ಬಿಂದು🌹
*तं चेद्वायौ सरति सरलस्कन्धसंघट्टजन्मा बाधेतोल्काक्षपितचमरीबालभारो दवाग्नि: | अर्हस्येनं शमयितुमलं वारिधारासहस्रै: आपन्नार्तिप्रशमनफला: संपदोह्युत्तमानाम् ||*
_ಮೇಘ ಹಿಮಾಲಯದ ಪರ್ವತಶ್ರೇಣಿಯಲ್ಲಿ ಮುಂದುವರೆಯುತ್ತಿದೆ. ಹಾಗೆ ಹೋಗುವಾಗ ಎಲೈ ಮೇಘವೇ ನೀನೊಂದು ದೃಶ್ಯವನ್ನು ಕಾಣುವೆ. ಕಾಡಿನ ಗಾಳಿ ಎಲ್ಲೆಡೆ ಬೀಸುತ್ತಿರಲು, ಈಗಾಗಲೇ ಒಣಗಿರುವ ತೊಗಟೆ ಬಿದ್ದುಹೋಗುತ್ತಿರುವ ದೇವದಾರು ಮರದ ಕಾಂಡದ ಕೊಂಬೆಗಳ ತಿಕ್ಕಾಟದಿಂದ ( ಒತ್ತೊತ್ತಾಗಿ ಮರಗಳಿದ್ದಾಗ ಘರ್ಷಣೆ ಸಹಜ. ನಮ್ಮಲ್ಲಿ ಅಡಿಕೆ ಮರಗಳ ನಡುವೆ ಅಂತರವಿಲ್ಲದಿದ್ದಾಗ ಘರ್ಷಣೆಯಾಗಿ ಮುರಿದುಬೀಳುವಂತೆ, ಕಾಂಡದ ಕೊಂಬೆಗಳೆಂದರೆ ಸ್ವಲ್ಪ ಕೆಳಭಾಗದಲ್ಲಿ ಹುಟ್ಟಿದ ಕೊಂಬೆಗಳೆಂಬುದು ಕವಿಯ ಭಾವವಿರಬಹುದು) ಹುಟ್ಟಿದ ಬೆಂಕಿಯ ಕಿಡಿಗಳಿಂದ ಸುಟ್ಟುಹೋದ ಚಮರೀಮೃಗಗಳ ಬಾಲದ ಕೇಶಗಳುಳ್ಳ ಆ ಕಾಡ್ಗಿಚ್ಚು ಒಂದೊಮ್ಮೆ ಪರ್ವತವನ್ನು ಬಾಧಿಸಲು ಆರಂಭಿಸಿದೆಯಂತಾದರೆ ನೀನು ನಿನ್ನ ಸಾವಿರಾರು ಮಳೆಹನಿಗಳಿಂದ ಆ ಕಾಡ್ಗಿಚ್ಚನ್ನು ಶಾಂತಗೊಳಿಸು. ಹಾಗೆ ಮಾಡಲು ನೀನು ಅರ್ಹನೂ ಆಗಿದ್ದಿ. ಕವಿಯ ಈ ಉಪಮೆ ಉತ್ಕೃಷ್ಟವಾಗಿದೆ. ಮಹಾತ್ಮರ ಸಂಪತ್ತು ಕಷ್ಟದಲ್ಲಿರುವವರ ಪೀಡೆಯನ್ನು ಹೋಗಲಾಡಿಸುವ ಉದ್ದೇಶದಿಂದಲೇ ಬಳಕೆಯಾಗುವುದು. ಪರರ ಕಣ್ಣೀರು ಒರೆಸುವುದೇ ಅದರ ಮುಖ್ಯ ಪ್ರಯೋಜನ. ಹಾಗಾಗಿ ನಿನ್ನ ಸಂಪತ್ತೆಂದರೆ ಎಷ್ಟೋ ಟಿ ಎಂಸಿ ಗಳಷ್ಟು ನೀರು. ಅದು ಕಾಡ್ಗಿಚ್ಚಿಗೆ ಬೆಂದು ಬಳಲಿದ ಜೀವರಾಶಿಗಳನ್ನು ರಕ್ಷಿಸುವಂತಾಗಲಿ. ಮಹಾತ್ಮರ ಸಂಪತ್ತಿಗೆ ಸಾರ್ಥಕ್ಯ ಒದಗುವುದೇ ಪರದು:ಖ ನಿವಾರಣೆಯಲ್ಲಿ. ಅವರು ತಮ್ಮ ಸುಖವನ್ನು ತ್ಯಜಿಸಿಯಾದರೂ ಪರೋಪಕಾರ ಮಾಡುವ ಇಚ್ಛೆಯಿಂದಿರುತ್ತಾರೆ. ನೀನು ಮಹಾತ್ಮನಿರುವೆ. ನಿನ್ನ ಸಂಪತ್ತು ಸದ್ವಿನಿಯೋಗವಾಗಲಿ. ಕಾಡ್ಗಿಚ್ಚನ್ನು ನಂದಿಸಿ ಕಾಡುಮೃಗಗಳನ್ನು ಜೀವಕೋಟಿಯನ್ನು ಸಸ್ಯ ಸಂಕುಲಗಳನ್ನೂ ಕಾಪಾಡುವಂತಹವನಾಗು ಓ ಮೇಘರಾಜ. ಬಿದಿರು ಮರಗಳ ಘರ್ಷಣೆಯಿಂದ ಬೆಂಕಿ ಉಂಟಾಗುವುದು ಸಹಜ. ಕವಿ ಇಲ್ಲಿ ದೇವದಾರು ಮರಗಳನ್ನೂ ಹೆಸರಿಸಿರುವುದು ಅವುಗಳ ಘರ್ಷಣೆಯಿಂದಲೂ ಬೆಂಕಿ ಹುಟ್ಟಬಹುದೆಂದು ಅನುಮಾನಿಸಬಹುದು. ಚಮರೀಮೃಗಗಳ ಬಾಲಕೇಶದಿಂದ ಅದು ಎಲ್ಲೆಡೆ ಹರಡುತ್ತದೆ. ಅಂತಹ ವಿನಾಶವನ್ನು ಮಹಾತ್ಮನಾದ ನೀನು ತಡೆಗಟ್ಟಿ ಕೃತಾರ್ಥನಾಗು. ನಾವೂ ನಮ್ಮ ಸಂಪತ್ತನ್ನು ಪರರ ದುಃಖ ಕಳೆಯಲು ಉಪಯೋಗಿಸೋಣವೇ! ಅದು ಜ್ಞಾನ ಇರಲಿ, ಧನವಿರಲಿ, ಗುಣವಿರಲಿ ಎಲ್ಲವೂ ಕಷ್ಟದಲ್ಲಿರುವವರ ಬಾಳಿಗೆ ಬೆಳಕಾಗಲಿ ಎನ್ನುವುದು ಕವಿಯ ಭಾವ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ