🌺 ಪ್ರತಿಮಾನಾಟಕದ ಒಂದು ಸುಮ 🌺
*पितुनियोगादहमागतो वनं न वत्स दर्पान्न भयान्न विभ्रमात् | कुलं च न: सत्यधनं ब्रवीमि ते कथं भवान् नीचपथे प्रवर्तते ||*
_ಭರತನು ಅಯೊಧ್ಯೆಗೆ ಹಿಂತಿರುಗುವಂತೆ ರಾಮನನ್ನು ಒತ್ತಾಯಿಸುತ್ತಿದ್ದಾನೆ. ಇಲ್ಲದಿದ್ದರೆ ನಾನು ಬದುಕಲಾರೆ ಎಂದೆಲ್ಲ ಹೇಳುತ್ತಾನೆ. ಆಗ ರಾಮನ ಮಾತಿದು. ಮಗು, ಭರತ ಯಾಕೆ ನೀನು ನನ್ನನ್ನು ಅರ್ಥಮಾಡಿಕೊಳ್ಳುತ್ತಿಲ್ಲ. ನಾನು ಅಯೋಧ್ಯೆ ತೊರೆಯಲು ಕಾರಣವೇನೆಂದು ಚಿಂತಿಸಿರುವಿ? ತಂದೆಯ ಆಜ್ಞೆಯಂತೆ ನಾನು ವನಕ್ಕೆ ಹೊರಟವನು ಹೊರತು ರಾಜ್ಯವಾಳುವ ಜವಾಬ್ದಾರಿಗೆ ಹೆದರಿ ಅಲ್ಲ, ಅಥವಾ ತಮ್ಮನಿಗೆ ಕೊಡುವುದಾದರೆ ಅವನೇ ಎಲ್ಲವನ್ನೂ ನೋಡಿಕೊಳ್ಳಲೆಂಬ ಕೊಬ್ಬಿನಿಂದಲೋ ಅಥವಾ ತಿರಸ್ಕಾರದಿಂದಲೋ ಅಲ್ಲ, ಅಥವಾ ಬುದ್ಧಿನಾಶವಾಗಿ ನಾನು ಕಾಡಿನ ದಾರಿ ಹಿಡಿದಿಲ್ಲ. ರಾಜ್ಯವಾಳುವ ಮಹತ್ತರ ಕಾರ್ಯಕ್ಕೆ ಈ ರಾಮ ಹೆದರುವನಲ್ಲ. ರಾಜ್ಯ ತಪ್ಪಿಹೋಯಿತೆಂದು ದುಃಖಿಸುವವನೂ, ಬುದ್ಧಿಸ್ಥಿಮಿತ ಕಳೆದುಕೊಳ್ಳುವವನೂ ಅಲ್ಲ. ಅಥವಾ ಅಂತಹ ಅಹಂಕಾರವೂ ಎನಗಿಲ್ಲ. ನಮ್ಮ ಕುಲದ ಕಥೆಯು ನಿನಗೆ ತಿಳಿದಿರಬೇಕು. ಇಕ್ಷ್ವಾಕು ವಂಶ ಸತ್ಯಕ್ಕೆ ಪ್ರಸಿದ್ಧವಾದದ್ದು. ಹಿರಿಯರ ಆ ಸತ್ಯದ ದಾರಿ ನಾನೂ ಹಿಡಿದೆಯಷ್ಟೇ. ನಮ್ಮ ಕುಲಕ್ಕೆ ಅದೇ ಧನ. ರಾಜ್ಯ ಕೋಶ ಬಂಧು ಬಾಂದವರು ನಷ್ಟ ಅದರೂ ಸತ್ಯ ನಮ್ಮನ್ನು ತೊರೆಯಲಾರದು. ಹೀಗಿರುವಾಗ ನೀನು ರಾಜ್ಯವಾಳಬೇಕೆಂಬ ತಂದೆಯ ಆಜ್ಞೆಯನ್ನು ಮೀರಿ ಹೇಗೆ ಕೆಟ್ಟ ದಾರಿಯಲ್ಲಿ ಪ್ರವರ್ತಿಸುವಿ? ಅಪ್ಪನ ಮಾತನ್ನು ಮೀರದಿರುವುದೇ ಸತ್ಪಥ. ನಾನೂ ನೀನೂ ಅದನ್ನು ಸಂತೋಷದಿಂದ ಪಾಲಿಸಬೇಕು. ಅದನ್ನು ಬಿಟ್ಟು ನೀನು ರಾಜ್ಯವಾಳೆನೆಂದರೆ ಅಪ್ಪನ ಮಾತಿಗೆ ಗೌರವ ಕೊಡದೇ ನೀಚಪಥ ಹಿಡಿದಂತಾಗುವುದಿಲ್ಲವೇ? ನನ್ನ ಮಾತಿಗೆ ಗೌರವ ಕೊಟ್ಟು ಈಗಲೇ ಅಧಿಕಾರ ನಡೆಯಿಸು. ರಾಮನ ತರ್ಕಬದ್ಧವಾದ ವಿವರಣೆ ಭರತನನ್ನು ಅನಿವಾರ್ಯವಾಗಿ ಒಪ್ಪಿಸುತ್ತದೆ. ಸತ್ಯದ ದಾರಿಯಲ್ಲಿ ರಾಮನ ಜೊತೆಗೆ ನಾವೂ ಮುನ್ನಡೆಯೋಣವೇ!_
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ