📗🌾📙 ವೇದ-ಧರ್ಮ 📗🌾📙 ಭಾಗ-೧೮
*ವೇದಾಂಗಗಳು*
*ದ್ವೇ ವಿದ್ಯೇ ವೇದಿತವ್ಯೇ ... ಪರಾಚೈವಾ ಪರಾಚ, ತತ್ರ ಅಪರಾ ಋಗ್ವೇದೋ.. ಶಿಕ್ಷಾ ವ್ಯಾಕರಣ..*
_ಮುಂಡಕೋಪನಿಷತ್ತಿನ ಈ ವಾಕ್ಯ ಎರಡು ವಿಧವಾದ ವಿದ್ಯೆಗಳಿವೆ ಎನ್ನುತ್ತದೆ. ಒಂದು ಪರಾ, ಇನ್ನೊಂದು ಅಪರಾ. ನಾಲ್ಕು ವೇದಗಳು ಹಾಗೂ ಆರು ವೇದಾಂಗಗಳು ಅಪರಾ ವಿದ್ಯೆಯಾದರೆ, ಭಗವಂತನ ಅರಿವನ್ನು ತಂದುಕೊಡುವ ವಿಜ್ಞಾನವೇ ಪರಾವಿದ್ಯೆ._
_ಈ ಅಪರಾ ವಿದ್ಯೆಯನ್ನು ಕರ್ಮಕಾಂಡವೆಂದೂ ಪರಾ ವಿದ್ಯೆಯನ್ನು ಜ್ಞಾನಕಾಂಡವೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಆದರೆ ಕರ್ಮಬೋಧಕ ವೇದಗಳು ಕೊನೆಗೆ ತಿಳಿಸುವುದು ಅಥವಾ ವೇದಾಂಗಗಳ ಸಾರ ಭಗವಂತನೇ ಹೊರತು ಬೇರೊಬ್ಬನಲ್ಲ. ಹಾಗಾಗಿ ಇಂತಹ ವಿಭಾಗ ಅಷ್ಟು ಸಮಂಜಸವಲ್ಲ._
_ಕರ್ಮದಿಂದ ಸ್ವರ್ಗವನ್ನೂ ಜ್ಞಾನದಿಂದ ಮೋಕ್ಷವನ್ನು ಸಂಪಾದಿಸುವುದೆನ್ನುವುದು ಎಲ್ಲರ ಅಭಿಮತ. *ಜ್ಞಾನೀ ತ್ವಾತ್ಮೈವ ತೇ ಮತಃ* ಎಂಬ ಗೀತೆಯ ಮಾತು, ಅಥವಾ *ಜ್ಞಾನಾದೇವಹಿ ಕೈವಲ್ಯಂ* ಎಂಬ ಶಂಕರರ ಮಾತು ಇದನ್ನೇ ಹೇಳುತ್ತದೆ. ವೇದಗಳ ಭಾಷೆ ಬಹಳ ಪುರಾತನವಾಗಿದ್ದರಿಂದ ಸರಲ ಸಂಸ್ಕೃತ ಅಧ್ಯಯನವು ಅವುಗಳನ್ನು ಅರ್ಥೈಸುವುದಿಲ್ಲ. ಇಂತಹ ಸಮಯದಲ್ಲಿ ನಮಗೆ ಮಾರ್ಗದೀಪಗಳಾಗುವುದು *ವೇದಾಂಗಗಳು*. ಹೇಗೆ ಶರೀರದ ಸರ್ವತೋಮುಖ ಬೆಳವಣಿಗೆಗೆ ಅಂಗಗಳೂ ಕಾರಣವೋ ಹಾಗೆಯೇ ವೇದಗಳ ಸಾರ ಅರಿಯಲು ವೇದ ಅರಗಿಸಿಕೊಳ್ಳಲು ಅಥವಾ ವೇದಕ್ಕಾಗಿ ( ವೇದ= ಅರಿವು) ಈ ಅಂಗಗಳು ಅವಶ್ಯಕ._
_ಶಿಕ್ಷಾ, ವ್ಯಾಕರಣ, ಛಂದ, ನಿರುಕ್ತ, ಜ್ಯೋತಿಷ, ಕಲ್ಪ ಇವುಗಳೇ ಆರು ವೇದದ ಅವಯವಗಳು. ಮೊದಲನೆಯ ಶಿಕ್ಷಾದಲ್ಲಿ ಸ್ವರ ಮುಂತಾದವುಗಳ ಉಚ್ಚಾರಣೆ ಯಾವ ರೀತಿಯದ್ದು, ಯಾವ ಮಾರ್ಗವನ್ನವಲಂಬಿಸಿ ಹೇಳುವಂತಹದ್ದು ಎನ್ನುವ ವಿಷಯ ನಿರೂಪಿಸುತ್ತದೆ. ಉದಾತ್ತ, ಅನುದಾತ್ತ, ಸ್ವರಿತಗಳೆಂಬ ಮೂರು ವಿಧದ ಸಾಮಾನ್ಯ ಸ್ವರಗಳನ್ನು, ಪ್ಲುತ ಮುಂತಾದ ವಿಶೇಷ ಸ್ವರಗಳನ್ನು ಯಾವ ಆಧಾರದ ಮೇಲೆ ಹೇಗೆ ಉಚ್ಚರಿಸಬೇಕೆಂದು ತಿಳಿಸುವುದೇ ಶಿಕ್ಷಾಗ್ರಂಥ._ *ಮಂತ್ರೋಹೀನಃ ಸ್ವರತೋ ವರ್ಣತೋ ವಾ ಮಿಥ್ಯಾ ಪ್ರಯುಕ್ತೋ ನ ತಮರ್ಥಮಾಹ ಸ ವಾಗ್ವಜ್ರೋ ಯಜಮಾನಂ ಹಿನಸ್ತಿ ಯಥೇಂದ್ರಶತ್ರುಃ ಸ್ವರತೋಪರಾಧಾತ್*
_ಮಂತ್ರಗಳ ಉಚ್ಚಾರಣೆಯ ಕಾಲದಲ್ಲಿ ಎಂತಹ ಜಾಗ್ರತೆ ಬೇಕೆಂಬುದಕ್ಕೆ ಇಂದ್ರನನ್ನು ಕೊಲ್ಲುವ ಶತ್ರು ಜನಿಸುವ ಬದಲು ಇಂದ್ರನಿಂದ ಕೊಲ್ಲಲ್ಪಡುವ ವೃತ್ರ ಹುಟ್ಟಿದನು. ಹಾಗಾಗಿ ಸ್ವರವ್ಯತ್ಯಾಸ, ಪ್ರಯತ್ನ ವ್ಯತ್ಯಾಸ, ಅರ್ಥ ಗೊತ್ತಿಲ್ಲದ ಪ್ರಯೋಗ ಸುಮ್ಮನೆ ಕಾಲಹರಣವೇ ಹೊರತು ಶ್ರೇಯಸ್ಕರವಲ್ಲ. ಹಾಗೆ ಕ್ಯಾಸೆಟ್ ಕೂಡ ಹೇಳುತ್ತದೆ. ಶಿಕ್ಷಾ ಎನ್ನುವ ಪದ ಇಂದಿನ ಧ್ವನಿಶಾಸ್ತ್ರಕ್ಕೆ ಸಾಂಪ್ರದಾಯಿಕವಾದ ಹೆಸರು ಎನ್ನಬಹುದು. ಸ್ವರ, ವರ್ಣ, ಮಾತ್ರಾ( ಸಮಯ), ಬಲ( ಒಳ ಹಾಗೂ ಹೊರಗಿನ ಉಚ್ಚಾರಣೆಗೆ ಬೇಕಾದ ಬಲ), ಸಾಮ ( ಎಷ್ಟು ದೀರ್ಘ ಎಷ್ಟು ಪ್ಲುತ ಇತ್ಯಾದಿ) ಸಂತಾನ ಇವು ಶಿಕ್ಷೆಯಲ್ಲಿ ಅಂತರ್ಗತವಾದ ಆರು ಅಂಶಗಳು._
_ಈ ಶಿಕ್ಷಾ ಗ್ರಂಥಗಳು ಪ್ರತಿಯೊಂದು ವೇದಕ್ಕೂ ಭಿನ್ನವಾಗಿವೆ. ಋಗ್ವೇದದ ಶಾಕಲ ಶಾಖೆಯ ಪ್ರಾತಿಶಾಖ್ಯವು ಶೌನಕನೆಂಬುವನಿಂದ ಬರೆಯಲ್ಪಟ್ಟು ಪ್ರಸಿದ್ಧವಾಗಿದೆ. ತೈತ್ತಿರೀಯ ಪ್ರಾತಿಶಾಖ್ಯವು ಕೃಷ್ಣಯಜುರ್ವೇದಕ್ಕೆ ಸಂಬಂಧಿಸಿದ ಶಿಕ್ಷಾಗ್ರಂಥ. ವಾಜಸನೇಯಿ ಪ್ರಾತಿಶಾಖ್ಯವು ಶುಕ್ಲಯಜುರ್ವೇದಕ್ಕೆ ಸಂಬಂಧಿಸಿದೆ. ಪಾಣಿನಿ ಇದರ ಕೆಲವು ಸೂತ್ರಗಳನ್ನೇ ಪುನರಾವರ್ತಿಸಿದ್ದಾನೆ. ಇದು ಕಾತ್ಯಾಯನ ಬರೆದದ್ದೆಂಬ ಪ್ರತೀತಿ ಇದೆ. ಶೌನಕೀಯ ಚತುರಾಧ್ಯಾಯಿಕಾ ಎಂಬುದು ಅಥರ್ವವೇದಕ್ಕೆ ಸಂಬಂಧಿಸಿದ ಗ್ರಂಥ. ಋಕ್ತಂತ್ರ ವ್ಯಾಕರಣ , ಪುಷ್ಪಸೂತ್ರ ಎಂಬೆರಡು ಗ್ರಂಥಗಳು ಸಾಮವೇದದ ಶಿಕ್ಷಾ ಗ್ರಂಥಗಳು.ಮುಂದುವರಿಯುವುದು...._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ