🌺 ಪ್ರತಿಮಾನಾಟಕದ ಒಂದು ಸುಮ🌺
*मुखमनुपमं त्वार्यस्याभं शशाङ्कमनोहरं मम पितृसमं पीनं वक्ष: सुरारिशरक्षतम् । द्युतिपरिवृतस्तेजोराशिर्जगत्प्रियदर्शनो नरपतिरयं देवेन्द्रो वा स्वयं मधुसूदन: ||*
_ಲಕ್ಷ್ಮಣ ಭರತನ ಆಕಾರ ಹಾವ ಭಾವ ನೋಡಿ ಹೇಳುವ ಮಾತಿದು. ಭರತ ರಾಮನನ್ನು ಕಾಣಲು ಅರಣ್ಯಕ್ಕೆ ಬಂದ ಸಂದರ್ಭ. ಅರೇ, ಇವನು ನಮ್ಮ ರಾಮ, ಛೇ ಅಲ್ಲ, ಅವನಂತೆ ಇದ್ದಾನೆ. ರಾಮನಂತೆಯೇ ಮುಖವು ಮನೋಹರ, ಅನುಮಪವಾದ ಕಾಂತಿಯುಳ್ಳದ್ದು, ಹುಣ್ಣಿಮೆಯ ಚಂದ್ರನಂತೆ ರಮಣೀಯ, ಮತ್ತೆ ಮತ್ತೆ ನೋಡುವಂತೆ ಮಾಡುವ ಆಕರ್ಷಕ ಶೋಭೆ, ನನ್ನ ತಂದೆ ದಶರಥನಂತೆಯೇ ವಿಶಾಲವಾದ ದೇವತೆಗಳಿಗೆ ಸಹಾಯಕನಾದಾಗ ಉಂಟಾದ ಗಾಯಗಳಿಂದ ಶೋಭಿಸುವ ವಕ್ಷ:ಸ್ಥಲ, ( ಭರತನಿಗೆ ಬೇರೆ ಯುದ್ದಗಳಲ್ಲಿ ಉಂಟಾದ ಗಾಯಗಳು) ದುಂಡುಮೊಗದ ಸುತ್ತಲೂ ಕಾಂತಿಯನ್ನು ತುಂಬಿಕೊಂಡು ತೇಜಸ್ಸಿನ ಸಮೂಹವಾದ ಸೂರ್ಯನಂತೆ ಬೆಳಗುತ್ತಿರುವ ದರ್ಶನದಿಂದಲೇ ಜನರ ಕಷ್ಟ ಪರಿಹರಿಸುವ ಮೂಲಕ ಜನಾನುರಾಗಿಯಾಗಿರುವ, ಇವನು ಯಾರಾದರೂ ಪ್ರಸಿದ್ಧನಾದ ರಾಜನೇ? ಅಥವಾ ಸುರಪತಿ ದೇವೇಂದ್ರನೇ, ಅಥವಾ ಸಾಕ್ಷಾತ್ ಮಹಾವಿಷ್ಣುವೇ ಭೂಮಿಗಿಳಿದು ಬಂದಂತಿದೆ. ಬಹುಕಾಲದ ನಂತರ ನೋಡುತ್ತಿರುವ ಭರತನ ಗುರುತು ರಾಮಾದಿಗಳಿಗೆ ಸಿಗುತ್ತಿಲ್ಲ. ಹಾಗಾಗಿ ಲಕ್ಷ್ಮಣ ಹೀಗೆ ಸಂದೇಹಿಸುತ್ತಿದ್ದಾನೆ. ಭರತನನ್ನು ಅಣ್ಣನಿಗೆ ಹೋಲಿಕೆ ಮಾಡಿರುವುದು ಗುಣಗಳಲ್ಲಿ ಸಮಾನರು ಎಂಬ ಭಾವ, ಅಪ್ಪನಿಗೆ ಹೋಲಿಕೆ ಮಾಡಿದ್ದು ಪರಾಕ್ರಮದಲ್ಲಿ ಸಾಟಿ ಎಂಬ ಭಾವ,( ರಾಮನ ಪರಾಕ್ರಮಕ್ಕೆ ರಾಮನೇ ಸಾಟಿ) ಸೂರ್ಯನ ಹೋಲಿಕೆ ಸೂರ್ಯವಂಶದಲ್ಲಿ ಹುಟ್ಟಿರುವುದರ ಸಂಕೇತ, ಇಂದ್ರನಿಗೆ ಹೋಲಿಸಿದ್ದು ಜಿತೇಂದ್ರಿಯನಾದ ಕಾರಣ, ಇನ್ನು ಕೊನೆಯದಾಗಿ ನಾಲ್ವರೂ ವಿಷ್ಣುವಿನ ಅಂಶದವರಾದ್ದರಿಂದ ಮಧುಸೂದನನಿಗೆ ಹೋಲಿಕೆ. ಹೀಗೆ ಕವಿ ಸಂದೇಹ ಅಲಂಕಾರ ಮಾತ್ರ ಬಳಸಿದ್ದರೂ ಶ್ಲೇಷವು ಧ್ವನಿತವಾಗಿದೆ ಎಂದು ಹೇಳಬಹುದೇನೋ._
📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ