ಮೇಘದೂತ

🌹ಮೇಘದೂತದ ಒಂದು ಬಿಂದು🌹

*यत्र स्त्रीणां प्रियतमभुजोच्छ्वासितालिङ्गितानाम् अङ्गग्लानिं सुरतजनितां तन्तुजालावलम्बा: | त्वत्संरोधापगमविशदैश्चन्द्रपादैर्निशीथे व्यालुम्पन्ति स्फुटजललवस्यन्दिनश्चन्द्रकान्ता: ||*

_ಎಲೈ ಮಂದನೇ, ಯಾವ ಅಲಕೆಯಲ್ಲಿ ನೀನು ಸಂಚರಿಸುತ್ತಿರುವಾಗ ಅರ್ಧರಾತ್ರಿಯಲ್ಲಿ ನಿನ್ನ ತಡೆಯ ನಿವಾರಣೆಯಿಂದ ಶುಭ್ರವಾದ ಚಂದಿರನ ಕರಗಳಿಂದ ದೊಡ್ಡದಾದ ನೀರಿನ ಕಣಗಳನ್ನು ಸುರಿಸುವ ಅಲ್ಲಲ್ಲಿ ನೇತುಹಾಕಿರುವ ದಾರಗಳಲ್ಲಿ ಓಲಾಡುತ್ತಿರುವ ಚಂದ್ರಕಾಂತ ಮಣಿಗಳು ಪ್ರಿಯರ ಭುಜಾಲಿಂಗನದಿಂದ ಆಗ ತಾನೇ ಸಡಿಲಗೊಂಡ ಸ್ತ್ರೀಯರ ರತಿಕ್ರೀಡೆಯಿಂದುಂಟಾದ ದೇಹಾಯಾಸವನ್ನು ಹೋಗಲಾಡಿಸುತ್ತವೆ. ನೀನು ಮಧ್ಯರಾತ್ರಿ ಕಾಲದಲ್ಲಾದರೂ ಸ್ವಲ್ಪ ವಿಶ್ರಮಿಸಿ ಅನಂತರ ಮಳೆ ಸುರಿಸುವಂತೆ. ಅಲಕೆಯ ಆ ಯಕ್ಷ ಕಾಮಿನಿಯರು ಪ್ರಿಯನ ಜೊತೆ ದೀರ್ಘಕಾಲ ಸುರತವಾಡಿ ಆಯಾಸಗೊಂಡಿರುತ್ತಾರೆ. ಅವರ ಶರೀರದ ಆಯಾಸವನ್ನು ಚಂದ್ರಕಾಂತಮಣಿಗಳಿಂದ ಹೊರಚೆಲ್ಲುವ ಶೀತಲಜಲಬಿಂಬಗಳು ತಂಪು ಮಾಡಿ ಹೋಗಲಾಡಿಸುತ್ತವೆ. ಆದರೆ ಚಂದ್ರಕಾಂತ ಮಣಿಗಳು ಚಂದ್ರನ ಕಿರಣಗಳನ್ನು ಪಡೆದು ತಂಪನ್ನು ಹೊರಚೆಲ್ಲುವವು. ಹಾಗಾಗಿ ನೀನು ಚಂದ್ರಕಿರಣಗಳ ದಾರಿಗೆ ಅಡ್ಡವಾಗದೇ ಅವರ ಆಯಾಸ ಪರಿಹಾರದ ಅಡ್ಡಿಯನ್ನು ನಿವಾರಿಸು. ಚಂದ್ರನ ಕರಸ್ಪರ್ಶವಾದೊಡನೆ ನಾಚಿದ ರಮಣಿಯಂತೆ ಆ ಚಂದ್ರಕಾಂತ ಮಣಿಗಳು ದೊಡ್ಡ ದೊಡ್ಡ ತಂಪಾದ ಜಲಕಣಗಳನ್ನು ಹೊರಸೂಸಿ ಅಲ್ಲಿಯ ಬಿಸಿಯೇರಿದ ವಾತಾವರಣವನ್ನು ತಂಪು ಮಾಡುತ್ತವೆ. ಹೀಗೆ ಯಕ್ಷ ಕನ್ನಿಕೆಯರ ಮನದಿಷ್ಟವನ್ನು ಸಾಧಿಸಿಕೊಡು. ಬಹಳ ಸಮಯ ಪ್ರಿಯರ ಆಲಿಂಗನದೊಡನೆ ಸುರತಸಮಯದ ಶರೀರದ ಆಯಾಸವನ್ನು ಪರಿಹರಿಸಿಕೊಳ್ಳುವರು._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩