🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 📗🌾
ಭಾಗ-೧೭
*ನ ವೀರ ಸೇನಾ ಗಣಶೋಚ್ಯವಂತಿ ನ ವಜ್ರಮಾದಾಯ ವಿಶಾಲಸಾರಮ್ ನ ಮಾರುತಸ್ಯಾಸ್ತಿ ಗತಿಪ್ರಮಾಣಂ ನ ಚಾಗ್ನಿಕಲ್ಪಃ ಕರಣೇನ ಹಂತುಮ್*
_ಹನುಮನ ದಾಳಿಗೆ ನಡುಗಿದ ರಾವಣನ ಮಾತಿದು. ಮಂತ್ರಿಗಳ ಮಕ್ಕಳನ್ನು, ಅಕ್ಷಕುಮಾರನನ್ನು ಕ್ಷಣದಲ್ಲಿ ಬಲಿ ಪಡೆದ ಹನುಮನನ್ನು ಹಿಡಿಯಲು ಇಂದ್ರಜಿತುವನ್ನು ಆಹ್ವಾನಿಸುತ್ತಾನೆ. ಆಗ ಮೇಘನಾದನ ಬಳಿ ಹೇಳುವ ಮಾತು. ವೀರನೇ, ಸೈನ್ಯಗಳು ಇವನ ವಿಷಯದಲ್ಲಿ ಪ್ರಯೋಜನಕ್ಕೆ ಬರುವುದೇ ಇಲ್ಲ. ಸೇನಾಗಣಗಳೇ ಅವನಿಂದ ಪಲಾಯನಮಾಡಲ್ಪಡುತ್ತವೆ. ಅಷ್ಟೇಕೆ ಇಂದ್ರನ ವಜ್ರಾಯುಧವನ್ನು ತೆಗೆದುಕೊಂಡು ಹೋದರೂ ಇವನ ಪರಾಕ್ರಮದ ಮುಂದೆ ವ್ಯರ್ಥವಾದೀತು. ಇವನು ಆ ವಾಯುವಿನ ವೇಗವನ್ನೂ ಮೀರಿ ಯುದ್ಧ ಮಾಡುತ್ತಿರುವನು. ಅಗ್ನಿಸದೃಶನಾಗಿರುವ ಇವನನ್ನು ಕೈ ಅಥವಾ ಕಾಲುಗಳ ಬಲದಿಂದ ಪ್ರಹರಿಸಲೂ ಸಾಧ್ಯವಿಲ್ಲ. ಅಗ್ನಿಯನ್ನು ಮುಟ್ಟಿದರೆ ಸುಡುವಂತೆ ಇವನನ್ನು ಮುಟ್ಟಿದರೆ ಬಲಿ ತೆಗೆದುಕೊಳ್ಳುವನು. ಒಂದೆರಡು ಮುಹೂರ್ತಗಳಲ್ಲಿ ರಾವಣನಂತಹ ವೀರನಿಗೂ ಹೆದರಿಕೆ ಹುಟ್ಟಿಸಿದ ಹನುಮನ ಪರಾಕ್ರಮ ಅಸದಳ. ಹಲವು ಸೈನ್ಯ ಬಂದರೂ ಅವನಿಗಾವ ಲೆಕ್ಕವೂ ಇಲ್ಲ. ಸ್ತುತಿಸಿದರೆ ಜನರ ಕಷ್ಟ ನಿವಾರಿಸುವವನಿಗೆ ಯಾವುದು ಕಷ್ಟ! ಅಪ್ಪನನ್ನೇ ಮೀರಿಸಿದ ವೇಗ! ತಂದೆ ಪುತ್ರನಿಂದ ಪರಾಜಯವನ್ನು ಇಚ್ಛಿಸುತ್ತಾನಂತೆ. *ಪುತ್ರಾದಿಚ್ಛೇತ್ ಪರಾಜಯಂ* ಎಂಬ ಮಾತು ಇದನ್ನೇ ಹೇಳುತ್ತದೆ. ಮರುತನ ಮಿತ್ರ ವಹ್ನಿ. ಅವನಂತೆ ಕೋಪವೆಂಬ ಬೆಂಕಿಯಿಂದ ರಾಕ್ಷಸರೆಂಬ ಕಟ್ಟಿಗೆಗಳನ್ನು ಭಸ್ಮ ಮಾಡುತ್ತಿರುವನು ಹನುಮ. ಸತ್ಕಾರ್ಯಗಳಿಗಾಗಿ ಹನುಮನ ರೀತಿಯ ಪರಾಕ್ರಮವನ್ನು ನಾವೂ ತೋರಬೇಕು._
*ಅಹೋ ಮಹತ್ಕರ್ಮ ಕೃತಂ ನಿರರ್ಥಂ ನ ರಾಕ್ಷಸೈರ್ಮಂತ್ರಗತಿರ್ವಿಮೃಷ್ಟಾ ಪುನಶ್ಚ ನಾಸ್ತ್ರೇ ವಿಹತೇಸ್ತ್ರಮನ್ಯತ್ ಪ್ರವರ್ತತೇ ಸಂಶಯಿತಾಃ ಸ್ಮ ಸರ್ವೇ*
_ಇಂದ್ರಜಿತು ದುಃಖದಿಂದ ನುಡಿಯುವ ಮಾತು. ಅಯ್ಯೋ, ಒಂದು ದೊಡ್ಡ ಕೆಲಸವು ನಿರರ್ಥಕವಾಯಿತು. ರಾಕ್ಷಸರು ಬ್ರಹ್ಮಾಸ್ತ್ರದ ರೀತಿ ನೀತಿಗಳನ್ನು ವಿಮರ್ಶೆಮಾಡಲಿಲ್ಲ. ಬ್ರಹ್ಮಾಸ್ತ್ರ ಒಂದು ಸಲ ಹಿಂತಿರುಗಿದ ಮೇಲೆ ಮತ್ತೆ ಬೇರೆ ಯಾವ ಅಸ್ತ್ರ ವನ್ನೂ ಅಭಿಮಂತ್ರಿಸಿ ಬಿಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಈಗ ನಾವೆಲ್ಲರೂ ಮಹಾಸಂಕಟಕ್ಕೆ ಈಡಾಗಿದ್ದೇವೆ. ಹನುಮನನ್ನು ಬಂಧಿಸಲು ಇಂದ್ರಜಿತುವು ಬ್ರಹ್ಮಾಸ್ತ್ರ ಪ್ರಯೋಗಿಸುವನು. ಅವನು ಬಂಧಿತನಾದ ಮೇಲೂ ರಾಕ್ಷಸರು ಸೆಣಬಿನ ಹಗ್ಗಗಳಿಂದ ಕಟ್ಟುತ್ತಾರೆ. ಬ್ರಹ್ಮಾಸ್ತ್ರ ಪ್ರಯೋಗ ಇದ್ದಾಗ ಬೇರಾವುದರಿಂದಲೂ ಬಂಧನ ಸಲ್ಲದು. ಹಾಗೆ ಮಾಡಿದರೆ ಆ ಅಸ್ತ್ರ ತನ್ನ ಪ್ರಭಾವ ಕಳೆದುಕೊಳ್ಳುತ್ತದೆ. ರಾಕ್ಷಸರಿಗೆ ಈ ವಿಷಯ ಗೊತ್ತಿಲ್ಲ. ಇಂದ್ರಜಿತು ಮಾತ್ರ ಅರಿತಿರುತ್ತಾನೆ. ನಾವೂ ಕೆಲವೊಮ್ಮೆ ಯಾವುದೋ ದೊಡ್ಡ ಕೆಲಸದಲ್ಲಿ ಪಾಲ್ಗೊಂಡು ಅರಿಯದೇ ವೈಫಲ್ಯ ಹೊಂದುತ್ತೇವೆ. ಕೆಲವೊಮ್ಮೆ ಜೊತೆಗಾರರ ಮೂರ್ಖತನವು ನಮ್ಮ ಕಾರ್ಯ ಕೆಡಲು ಕಾರಣವಾಗುತ್ತದೆ. ಹಾಗಾಗದಂತೆ ಎಚ್ಚರ ವಹಿಸಿ ಮಹತ್ಕಾರ್ಯದಲ್ಲಿ ಅನುಭವಿಗಳನ್ನು ಹಾಗೂ ಜ್ಞಾನಿಗಳನ್ನು ಮಾತ್ರ ಸೇರಿಸಿಕೊಳ್ಳಬೇಕು. ಇಲ್ಲದಿದ್ದರೆ ಇಂದ್ರಜಿತುವಂತೆ ದುಃಖುಸಬೇಕಾದೀತು._
*ಅಸ್ತ್ರಬಂಧಃ ಸ ಚಾನ್ಯಂ ಹಿ ನ ಬಂಧಮನುವರ್ತತೇ*
ಬ್ರಹ್ಮಾಸ್ತ್ರದ ಬಂಧನವು ಇತರ ಯಾವುದೇ ಬಂಧನಗಳನ್ನು ಆಶ್ರಯಿಸಿಕೊಳ್ಳುವುದಿಲ್ಲ.
*ಅಹೋ ರೂಪಮಹೋ ಧೈರ್ಯಮಹೋ ಸತ್ವಮಹೋ ದ್ಯುತಿಃ ಅಹೋ ರಾಕ್ಷಸರಾಜಸ್ಯ ಸರ್ವಲಕ್ಷಣಯುಕ್ತತಾ*
_ರಾವಣನನ್ನು ನೋಡಿ ಹನುಮ ಮನದಲ್ಲಿ ನುಡಿಯುವ ನುಡಿ. ಅಬ್ಬಾ! ಎಂತಹ ಸುಂದರ ರೂಪ, ಎಂತಹ ಧೈರ್ಯ, ಎಂತಹ ಸತ್ವ ಅಥವಾ ಶಕ್ತಿ, ಎಂತಹ ತೇಜಸ್ಸು, ನಿಶ್ಚಯವಾಗಿಯೂ ಇವನು ಸರ್ವಲಕ್ಷಣಸಂಪನ್ನನಾಗಿರುವನು.ರಾವಣನ ಬಗೆಗೆ ವಾಲ್ಮೀಕಿಗೆ ದುರಭಿಪ್ರಾಯ ಇದ್ದಿತೆಂದು ಅನುಮಾನಿಸುವ ಕೆಲವು ಬುದ್ಧಿಜೀವಿಗಳು ಈ ಮಾತನ್ನು ಗಮನಿಸುವುದಿಲ್ಲ. ರಾವಣನ ಬಗೆಗೆ ಇಂತಹ ಶ್ಲೋಕ ಹೇಳುವ ವಾಲ್ಮೀಕಿಗಳು ಯಾವುದೇ ಪೂರ್ವಾಗ್ರಹ ಹೊಂದಿರಲಿಲ್ಲವೆಂದು ಇದನ್ನು ನೋಡಿದರೆ ತಿಳಿಯುತ್ತದೆ. ರಾವಣನ ಶಕ್ತಿ, ಕಾಂತಿ, ರೂಪಗಳು ಮೂರು ಲೋಕಗಳಲ್ಲೇ ಪ್ರಸಿದ್ಧವಾಗಿದ್ದವು. ಆದರೆ ಎಲ್ಲಾ ಬಣ್ಣ ಮಸಿ ನುಂಗಿತು ಎನ್ನುವಂತೆ ಇವೆಲ್ಲವೂ ಅಧರ್ಮದ ಎದುರು ಮಸುಕಾಗಿ ಹೋದವು. ನಾವೂ ಸಾಧ್ಯವಾದಷ್ಟು ಧರ್ಮಿಷ್ಠರಾಗೋಣ. ಸರಿ- ತಪ್ಪುಗಳ ವಿವೇಕ ಎಂದಿಗೂ ಇರಲಿ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
_

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ