📗🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📗
ಭಾಗ-೧೮
*ಯದ್ಯಧರ್ಮೋ ನ ಬಲವಾನ್ಸ್ಯಾದಯಂ ರಾಕ್ಷಸೇಶ್ವರಃ ಸ್ಯಾದಯಂ ಸುರಲೋಕಸ್ಯ ಸಶಕ್ರಸ್ಯಾಪಿ ರಕ್ಷಿತಾ*
_ಮಾರುತಿಯು ರಾವಣನ ಬಗೆಗೆ ಯೋಚಿಸುವ ಮಾತು. ಈ ದಾನವವೀರರಲ್ಲಿ ಅಧರ್ಮಾಚರಣೆಯು ಬಲವಾಗಿಲ್ಲದಿದ್ದರೆ ಇವನು ನಿಶ್ಚಿತವಾಗಿಯೂ ದೇವೇಂದ್ರಸಹಿತವಾದ ಸುರಲೋಕವನ್ನು ಸಂರಕ್ಷಿಸುವ ಸಾಮರ್ಥ್ಯ ಹೊಂದಿರುತ್ತಿದ್ದನು. ರಾವಣನು ಬುದ್ಧಿವಂತ, ಪರಾಕ್ರಮಿ, ರೂಪವಂತ, ದೈರ್ಯವಂತ ಎಲ್ಲಾ ಸತ್ಯವಾದದ್ದೇ. ಆದರೆ ಅವನ ಅಧರ್ಮವೊಂದೇ ಇವೆಲ್ಲ ಗುಣಗಳನ್ನು ಅಳಿಸಿಹಾಕಿತು. ಈಗಿನ ಮಾಧ್ಯಮಗಳಲ್ಲಿ ರಾವಣನನ್ನು ಸಮರ್ಥಿಸುವ ಅನೇಕ ಲೇಖನಗಳು, ವಿಚಾರಗಳು, ಅರೆಬುದ್ಧಿಜೀವಿಗಳ ಅಸಂಬದ್ಧ ವಾದಗಳು ಬರುತ್ತಿರುತ್ತವೆ. ಆದರೆ ನೂರಾರು ಸ್ತ್ರೀಯರನ್ನು ಅಪಹರಿಸಿ ಬಲಾತ್ಕಾರವೆಸಗಿದ, ವಿನಾಕಾರಣ ಪರರ ಸಂತೋಷ ಕದಡುವ ಹಿರಿಯರ ಮಾತಿಗೆ ಎಂದೂ ಗೌರವ ಕೊಡದ ರಾವಣನನ್ನು ಹೇಗೆ ಸಮರ್ಥಿಸುವಿರಿ. ಸರಣಿ ಅತ್ಯಾಚಾರಿಗಳನ್ನು ಸಮರ್ಥಿಸಿದಂತೆ ಆಗುತ್ತದೆ. ಹಾಗಾಗಿಯೇ ಹನುಮನ ಈ ಮಾತು ಪ್ರಸ್ತುತ. ಅಧರ್ಮ ಇಲ್ಲದಿದ್ದರೆ ರಾವಣನು ಇಂದ್ರನನ್ನೂ ಆಳುತ್ತಿದ್ದನೇನೋ! ಆದರೆ ಅಧರ್ಮವೊಂದು ಅವನನ್ನೇ ಆಳಿತು. ನಾವೂ ಅರಿತು ಅಧರ್ಮ ಆಚರಿಸದಿರೋಣ. ಧರ್ಮವೆಂದರೆ ಸರಿ-ತಪ್ಪುಗಳ ವಿವೇಚನೆ ಅಥವಾ ವಿವೇಕ ಹೊರತು ಮತವಲ್ಲ._
*ಅಸ್ಯ ಕ್ರೂರೈರ್ನೃಶಂಸೈಶ್ಚ ಕರ್ಮಭಿರ್ಲೋಕಕುತ್ಸಿತೈಃ ತೇನ ಬಿಭ್ಯತಿ ಖಲ್ವಸ್ಮಾಲ್ಲೋಕಾಃ ಸಾಮರದಾನವಾಃ ಅಯಂ ಹ್ಯುತ್ಸಹತೇ ಕ್ರುದ್ಧಃ ಕರ್ತುಮೇಕಾರ್ಣವಂ ಜಗತ್*
_ಕ್ರೂರವಾದ, ಅಸಹ್ಯವಾದ ಮತ್ತು ನಿರ್ದಯೆಯಿಂದ ಕೂಡಿದ ಇವನ ಕರ್ಮಗಳಿಂದ ದೇವದಾನವರೆಲ್ಲ ಹೆದರುತ್ತಾರೆ. ರಾಕ್ಷಸರು ರಾವಣನನ್ನು ಗೌರವಿಸುವುದಕ್ಕಿಂತ ಹೆಚ್ಚಾಗಿ ಅವನ ಕ್ರೂರತೆಗೆ ಅಂಜುತ್ತಿದ್ದರು. ತನ್ನ ಸ್ವಂತ ತಂಗಿಯ ಗಂಡನನ್ನೇ ಕೊಂದ ರಾವಣನಂತಹವನಿಗೆ ಹೆದರದಿರುವವರಾದರೂ ಯಾರು! ಹೀಗೆ ಲಂಕೆ ಭಯಗ್ರಸ್ತವಾದ ಪ್ರಜೆಗಳನ್ನು ಹೊಂದಿತ್ತು. ಕೋಪಗೊಂಡ ಇವನಿಗೆ ಜಗತ್ತನ್ನೆಲ್ಲಾ ಒಂದೇ ಸಮುದ್ರವನ್ನಾಗಿ ಪರಿವರ್ತಿಸಲೂ ಶಕ್ತಿಯಿದೆ. ಆದರೆ ಏನುಪಯೋಗ! ಯಾವ ಶಕ್ತಿಯು ಪರಹಿತಕ್ಕಾಗಿ ವಿನಿಯೋಗವಾಗುವುದೋ ಅದು ಸಾರ್ಥಕ. ಅದಿಲ್ಲದ ಶಕ್ತಿ ವ್ಯರ್ಥ._
*ನ ತು ಧರ್ಮೋಪಸಂಹಾರಮಧರ್ಮಫಲಸಂಹಿತಮ್ ತದೇವ ಫಲಮನ್ವೇತಿ ಧರ್ಮಶ್ಚಾಧರ್ಮನಾಶನಃ*
_ಪವನಾತ್ಮಜನು ಸಂಶಯಕ್ಕೆಡೆಮಾಡಿಕೊಡದಂತೆ ಅರ್ಥವತ್ತಾದ ಮಾತುಗಳನ್ನು ಸಮಾಧಾನದಿಂದ ರಾವಣನ ಬಳಿ ಆಡಿದನು. ದೂತನಾದವನು ಹೇಗೆ ರಾಜನ ಸಂದೇಶ ನಿರೂಪಿಸಬೇಕು ಎಂಬುದಕ್ಕೆ ಹನುಮನೇ ಒಳ್ಳೆಯ ಉದಾಹರಣೆ. ಶತ್ರುವೇ ಆಗಿದ್ದರೂ ರಾಜನ ಸಂದೇಶ ನಿವೇದಿಸುವಾಗ ವಿನಯದಿಂದಲೇ ಅರುಹುವುದು ಹನುಮನ ಉತ್ತಮ ಗುಣ. ಬಹಳ ಹೇಳಿದ ನಂತರ ಈ ಮಾತನ್ನು ಹೇಳುತ್ತಾನೆ._ *ಧರ್ಮಸಂಗ್ರಹವು ಅಧರ್ಮ ಫಲದಿಂದ ಕೂಡಿರುವುದಿಲ್ಲ. ಧರ್ಮಾಚರಣೆ ಮಾಡಿದವನು ಶುಭಫಲವನ್ನೇ ಅನುಭವಿಸುವನು. ಧರ್ಮವು ಹೆಚ್ಚಾಗಿದ್ದರೆ ಅಧರ್ಮವನ್ನು ನಾಶಗೊಳಿಸುತ್ತದೆ. ಅಧರ್ಮವೇ ಹೆಚ್ಚಿದ್ದರೆ ಅಲ್ಪ ಸ್ವಲ್ಪ ಧರ್ಮವನ್ನೂ ನಾಶಗೊಳಿಸುತ್ತದೆ.*
_ಧರ್ಮವನ್ನು ಕಡೆಗಾಣಿಸಿದವನನ್ನು ಯಾವ ತಪಸ್ಸೂ ರಕ್ಷಿಸಲಾರದು. ಧರ್ಮವನ್ನು ದೂರ ಮಾಡಿದವನು ಅದಕ್ಕೆ ತಕ್ಕುದಾದ ಕೆಟ್ಟ ಫಲವನ್ನೇ ಅನುಭವಿಸುತ್ತಾನೆ. ಧರ್ಮವು ಹೆಚ್ಚಿದ್ದಾಗ ಅಲ್ಪವಾದ ಅಧರ್ಮ ನಾಶವಾಗುವುದು. ವಿಪರೀತವಾದಾಗ ಅಧರ್ಮವೊಂದೇ ಉಳಿಯುವುದು. ನೀನು ಮಾಡಿರುವ ಧರ್ಮದ ಫಲವನ್ನು ಈಗಾಗಲೇ ಸುಖಭೋಗಗಳಿಂದ ಅನುಭವಿಸಿರುವೆ. ಇನ್ನು ಮುಂದೆ ನೀನು ಮಾಡಿದ ಅಧರ್ಮದ ಫಲವನ್ನೂ ಅನುಭವಿಸುವೆ. ಅದರಲ್ಲಿ ಯಾವ ಸಂಶಯವೂ ಇಲ್ಲ. ಗೀತೆಯಲ್ಲಿ ಕೃಷ್ಣ ಇದನ್ನೇ ಹೇಳುವನು._ *ನ ಹಿ ಕಲ್ಯಾಣಕೃತ್ ಕಶ್ಚಿತ್ ದುರ್ಗತಿಂ ತಾತ ಗಚ್ಛತಿ* _ಒಳ್ಳೆಯ ಕೆಲಸ ಮಾಡಿದವನೆಂದೂ ಕೆಟ್ಟ ಫಲ ಪಡೆಯಲಾರ. ನಾವು ಕೆಟ್ಟ ಫಲ ಅನುಭವಿಸುತ್ತಿದ್ದೇವೆ ಎಂದರೆ ಹಿಂದೆ ನಾವೇ ಮಾಡಿದ ಪಾಪದ ಫಲವೇ ಹೊರತು ಯಾರದೋ ಪಾಪವಲ್ಲ. ಎಷ್ಟು ಒಳ್ಳೆಯ ಪಾಠ ನಮಗೆಲ್ಲ. ಪ್ರಯತ್ನ ಪೂರ್ವಕವಾಗಿ ಧರ್ಮದ ದಾರಿ ಹಿಡಿಯೋಣ._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ