📗🌾📙 ವೇದ-ಧರ್ಮ 📗🌾📙 ಭಾಗ-೧೯
*ವೇದಾಂಗಗಳು*
_ಶಿಕ್ಷಾ ಗ್ರಂಥಗಳು ಈ ಹಿಂದೆ ಹೇಳಿದ್ದಲ್ಲದೆ ಇನ್ನೂ ಕೆಲವಿವೆ. ಋಗ್ವೇದ ಹಾಗೂ ಯಜುರ್ವೇದಕ್ಕೆ ಸಂಬಂಧಿಸಿದಂತೆ *ಪಾಣಿನೀಯ ಶಿಕ್ಷಾ* ಅತ್ಯಂತ ಮಹತ್ವದ್ದಾಗಿದೆ. ಇದು ಇತರ ಶಿಕ್ಷಾ ಗ್ರಂಥಗಳ ಮೇಲೆ ಸಾಕಷ್ಟು ಪ್ರಭಾವ ಬೀರಿದೆ._
_*ಸ್ವರವ್ಯಂಜನಶಿಕ್ಷಾ* ಎನ್ನುವ ಗ್ರಂಥವೂ ಋಗ್ವೇದಕ್ಕೆ ಸಂಬಂಧಿಸಿದ ಮಂತ್ರೋಚ್ಚಾರಣೆಯ ಮಾಹಿತಿ ಕೊಡುತ್ತದೆ. *ಸಮಾನ ಶಿಕ್ಷಾ* ಎನ್ನುವ ಗ್ರಂಥವೊಂದು ಋಗ್ವೇದದಲ್ಲಿ ವಿಸರ್ಗಗಳು ಲೋಪ ಆಗಿರುವ ಉದಾಹರಣೆಗಳನ್ನು ವಿವರಿಸುವುದು._
_*ಯಾಜ್ಞವಲ್ಕ್ಯ ಶಿಕ್ಷಾ* *ಪಾರಾಶರೀ* *ಅಮೋಘಾನಂದಿನೀ* ಎಂಬ ಮೂರು ಗ್ರಂಥಗಳು ಶುಕ್ಲಯಜುರ್ವೇದಕ್ಕೆ ಸಂಬಂಧಿಸಿದ ಶಿಕ್ಷಾ ಗ್ರಂಥಗಳು. *ಚಾರಾಯಣೀಯ* ಎಂಬ ಗ್ರಂಥವು ಕೃಷ್ಣಯಜುರ್ವೇದಕ್ಕೆ ಸಂಬಂಧಿಸಿದ ಶಿಕ್ಷಾ. *ಗಾರ್ಗ್ಯಗೋಪಾಲ ಯಜ್ವನ್* ಎಂಬುದೂ ಕೃ.ಯಜುರ್ವೇದಕ್ಕೆ ಸಂಬಂಧಿಸಿದೆ._
_*ನಾರದಶಿಕ್ಷಾ* ಗ್ರಂಥವು ಸಾಮವೇದಕ್ಕೆ ಸಂಬಂಧಿಸಿದೆ. ಇದರಲ್ಲಿ ಮೂರು ಗ್ರಾಮಗಳ ನಿರೂಪಣೆ ಇದೆ. *ಲೋಮಶೀಶಿಕ್ಷಾ* ಎನ್ನುವ ಮತ್ತೊಂದು ಗ್ರಂಥ ಮಂತ್ರಗಳಲ್ಲಿ ದ್ವಿತ್ವ ಮಾಡುವುದರ ಕುರಿತು ಸಮಾಲೋಚಿಸುತ್ತದೆ. *ಗೌತಮೀಶಿಕ್ಷಾ* ದಲ್ಲಿ ದ್ವಿತ್ವ ಮತ್ತು ವ್ಯಂಜನದ ಗುಂಪುಗಳ ಸವಿಸ್ತಾರ ವಿವರಣೆಯಿದೆ._
_*ಮಾಂಡೂಕೀ ಶಿಕ್ಷಾ*ಎಂಬ ಗ್ರಂಥ ಅಥರ್ವವೇದಕ್ಕೆ ಸಂಬಂಧಿಸಿದೆ. ಇದು ಇತರ ವೇದಗಳ ಮಂತ್ರಗಳಿಗೂ ಸಮಾನವಾದ ಸ್ವರಭಾರವನ್ನು ನಿರೂಪಿಸುತ್ತದೆ. ಹೀಗೆ ಒಟ್ಟು ೬೫ ಶಿಕ್ಷಾ ಗ್ರಂಥಗಳು ಸಿಗುತ್ತವೆ. ನಾವು ಸಹಜವಾಗಿ ಶಿಕ್ಷಾ ಅನ್ನುವುದು ವೇದಾಂಗದ ಆದಿ ಎನ್ನಬಹುದು. ಆದರೆ ಅವುಗಳ ಅಧ್ಯಯನ ಸಾಗಿದಂತೆ ನಮ್ಮ ಅರಿವೂ ಆದಿಯಲ್ಲೇ ಇದೆಯೆನ್ನುವುದು ತಿಳಿದು ಬರುತ್ತದೆ. ಪ್ರಾತಿಶಾಖ್ಯಗಳು ಸೂತ್ರ ಹಾಗೂ ಕಾರಿಕೆಗಳ ಮಿಶ್ರಣವಾಗಿವೆ. ಗುರುತ್ವ ಲಘುತ್ವ ಮುಂತಾದ ಮಾತ್ರಾ ( ಕಾಲಕ್ಕೆ ಸಂಬಂಧಿಸಿದ ಶಬ್ದ, ಒಂದು ಮಾತ್ರಾಕಾಲ ಅಂದಾಜು ಒಂದು ಸೆಕೆಂಡ್) ವಿಚಾರಗಳೂ, ಹ್ರಸ್ವ ದೀರ್ಘಾದಿ ಪರಿಮಾಣ ವಿಚಾರಗಳೂ( ಯಾವ ಅಕ್ಷರ ಎಷ್ಟು ಹ್ರಸ್ವ ಎಷ್ಟು ದೀರ್ಘ ಎಂಬ ವಿಷಯ ) ಲೋಪ ಆಗಮ ಮುಂತಾದ ಸಂಧಿಯ ವಿಷಯಗಳೂ, ಉದಾತ್ತ ಅನುದಾತ್ತ ಸ್ವರಿತಗಳೆಂಬ ಸ್ವರ ವಿಚಾರವೂ, ನಾಮ ಆಖ್ಯಾತ ಉಪಸರ್ಗ ನಿಪಾತಗಳೆಂಬ ಪದ ವರ್ಗೀಕರಣಗಳೂ ( ಈ ಪದದಲ್ಲಿ ಇಂತಹ ಉಪಸರ್ಗವಿದೆ ಅಥವಾ ಇಂತಹ ಆಖ್ಯಾತ ಪ್ರತ್ಯಯವಿದೆ) ಈ ಗ್ರಂಥಗಳಲ್ಲಿ ಮುಖ್ಯ ವಿಷಯಗಳಾಗಿವೆ. *ಗೀತೀ ಶೀಘ್ರೀ ಶಿರಃಕಂಪೀ ತಥಾಲಿಖಿತಪಾಠಕಃ* ವೇದ ಪಠನ ಕಾಲದಲ್ಲಿ ಉದ್ದುದ್ದ ಹಾಡುವುದಾಗಲೀ ಸುಮ್ಮನೆ ಎಳೆಯುವುದಾಗಲೀ, ಅವಸರದಲ್ಲಿ ಬಡಬಡನೆ ಒದರುವುದಾಗಲಿ, ತಲೆಯನ್ನು ಅತ್ತಿತ್ತ ಕುಣಿಸುವುದಾಗಲೀ, ಪುಸ್ತಕದಲ್ಲಿ ತಪ್ಪಿದ್ದರೂ ಹಾಗೆಯೇ ಹೇಳುವವನನ್ನು ಅಧಮನೆಂದು ಈ ಶಿಕ್ಷೆಗಳು ಹೇಳುತ್ತವೆ. ಇಷ್ಟೇ ಅಲ್ಲದೇ ಮಂತ್ರಗಳನ್ನು ಅರ್ಥಸಹಿತ ಉಚ್ಚರಿಸಿ ಬ್ರಹ್ಮಾನಂದ ಪಡೆಯಿರಿ ಎಂದೂ ಸೂಚಿಸುತ್ತದೆ. ಈ ಕಾರಣದಿಂದಲೇ ಹೇಳಿದ್ದಿರಬಹುದು *ಏಕಃ ಶಬ್ದಃ ಸುಷ್ಟುಪ್ ಪ್ರಯುಕ್ತಃ ಸಮ್ಯಗ್ ಜ್ಞಾತಃ ಸ್ವರ್ಗೇಲೋಕೇ ಕಾಮಧುಕ್ ಭವತಿ* ಎಂದು. ಒಂದು ಶಬ್ದವನ್ನು ಅರ್ಥವತ್ತಾಗಿ ತಿಳಿದು ಸರಿಯಾಗಿ ಪ್ರಯೋಗಿಸಿದರೆ ಅಥವಾ ಉಚ್ಚರಿಸಿದರೆ ಆ ಶಬ್ದ ನಮ್ಮನ್ನು ಶಬ್ದದಾಚೆಗಿನ ಆನಂದ ಪ್ರದೇಶಕ್ಕೆ ಕರೆದೊಯ್ಯುವುದು. ಇದನ್ನೆಲ್ಲಾ ವಿಚಾರ ಮಾಡಿದಾಗ ವೇದಗಳ ಅಧ್ಯಯನದ ಅಗಾಧತೆ ವಿಸ್ಮಯ ಮೂಡಿಸುತ್ತದೆ.ಮುಂದುವರಿಯುತ್ತದೆ...._
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ