📙🌾 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📙
ಭಾಗ-22
*ಧನ್ಯಾಸ್ತೇ ಪುರುಷಶ್ರೇಷ್ಠಾ ಯೇ ಬುದ್ಧ್ಯಾ ಕೋಪಮುತ್ಥಿತಮ್ ನಿರುಂಧಂತಿ ಮಹಾತ್ಮಾನೋ ದೀಪ್ತಮಗ್ನಿಮಿವಾಂಭಸಾ*
_ಹನುಮ ಕೋಪದಿಂದ ಲಂಕೆಯನ್ನು ಸುಟ್ಟಿದ್ದಾನೆ. ಸ್ವಲ್ಪ ಸಮಯದಲ್ಲೇ ತನ್ನ ಕೃತ್ಯಕ್ಕೆ ಪಶ್ಚಾತ್ತಾಪ ಪಡುತ್ತಿದ್ದಾನೆ. ಲಂಕೆಯ ಜೊತೆಗೆ ಸೀತೆಯೂ ಸುಟ್ಟುಹೋಗಿದ್ದರೆ ನನ್ನ ನಡೆಯೆಲ್ಲವೂ ಮೂರ್ಖತನದ್ದಾಗುವುದು ಎಂದು ತನ್ನ ಕೋಪವನ್ನು ನಿಯಂತ್ರಿಸಲಾಗದ ಬುದ್ಧಿಯನ್ನು ಹೀಗಳೆಯುತ್ತಿದ್ದಾನೆ. ಹೊತ್ತಿ ಉರಿಯುವ ಬೆಂಕಿಯನ್ನು ನೀರಿನಿಂದ ಅರಿಸುವಂತೆ ಯಾವ ಮಹಾತ್ಮರು ಉಕ್ಕಿಬರುವ ಕೋಪವನ್ನು ಬುದ್ಧಿಪೂರ್ವಕವಾಗಿ ತಡೆಯುವರೋ ಅವರೇ ಧನ್ಯರು. ಬೆಂಕಿ ಉರಿದಷ್ಟೂ ಅನಾಹುತವಾಗುತ್ತದೆ. ಎಲ್ಲೋ ಬೆಂಕಿ ಬಿದ್ದಿದೆಯೆಂದಾದರೆ ಕೂಡಲೇ ನೀರಿನಿಂದ ಆರಿಸುತ್ತೇವೆ. ಹಾಗೆಯೇ ನಮ್ಮ ನಿಜವಾದ ಶತ್ರು ನಮ್ಮೊಳಗೆ ಅಡಗಿದ ಕೋಪ. ಯಾರೋ ಏನೋ ಹೇಳಿದರು ಮಾಡಿದರು ಎಂದಾಕ್ಷಣ ಕೋಪ ತಾಳಿ ನಿಂದಿಸುತ್ತೇವೆ. ಈಗಿನ ಯುವಜನತೆಯಲ್ಲಂತೂ ( ನಾನೂ ಸೇರಿ) ಈ ಪ್ರವೃತ್ತಿ ಹೆಚ್ಚು. ಯಾರೋ ಏನೋ ಅಂದರೆಂದು ಕೋಪಗೊಳ್ಳುವೆವು. ಹನುಮನು ಕೋಪಗೊಂಡು ಪ್ರತೀಕಾರವೆಂಬಂತೆ ಲಂಕೆಯನ್ನೇ ಸುಟ್ಟಿದ್ದಾನೆ. ಕೋಪದ ಭರದಲ್ಲಿ ತಾನು ಬಂದ ಉದ್ದೇಶವನ್ನೇ ಮರೆತು ಈಗ ದುಃಖಿಸುತ್ತಿದ್ದಾನೆ. ಯಾರು ಇಂತಹ ಕೋಪವನ್ನು ತುಂಬಾ ಆಲೋಚಿಸಿ ಪೂರ್ವಾಪರ ವಿಚಾರಿಸಿ ನಿಯಂತ್ರಿಸಿಕೊಳ್ಳುವರೋ ಅವರೇ ನಿಜವಾದ ಮಹಾತ್ಮರು, ಅವರೇ ಧನ್ಯರು. ನಾನು ಅಂತಹವರ ಸಾಲಿಗೆ ಸೇರದೇ ವ್ಯರ್ಥ ಕಾರ್ಯ ಮಾಡಿದೆಯೆಂದು ಹನುಮ ಚಿಂತಿಸುತ್ತಿದ್ದಾನೆ. ನಾವೂ ಹನುಮನ ಮಾತಿನಂತೆ ಕೋಪವನ್ನು ಮಾಡುವ ಮೊದಲು ಸಾಕಷ್ಟು ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳೋಣವೇ! ಇಲ್ಲದಿದ್ದರೆ ಕೆಲಸ ಕೆಟ್ಟ ಮೇಲೆ ದುಃಖಪಡುವಂತಾದೀತು._
*ಕ್ರುದ್ಧಃ ಪಾಪಂ ನ ಕುರ್ಯಾತ್ಕಃ ಕ್ರುದ್ಧೋ ಹನ್ಯಾದ್ಗುರೂನಪಿ ಕ್ರುದ್ಧಃ ಪರುಷಯಾ ವಾಚಾ ನರಃ ಸಾಧೂನಧಿಕ್ಷಿಪೇತ್*
_ಹನುಮ ಮತ್ತೆ ಕೋಪದ ಪರಿಣಾಮವನ್ನು ವಿವರಿಸುತ್ತಿದ್ದಾನೆ. ಕೋಪಗೊಂಡ ಯಾವನು ತಾನೇ ಪಾಪವನ್ನು ಮಾಡುವುದಿಲ್ಲ? ಕೋಪಗೊಂಡವನು ಕಾರ್ಯಾಕಾರ್ಯ ವಿವೇಚನೆಯಿಲ್ಲದೇ ಗುರುಹಿರಿಯರನ್ನೂ ಕೊಂದಾನು? (ರಾವಣ ಕೋಪದಲ್ಲಿ ತನ್ನ ತಂಗಿಯ ಗಂಡನನ್ನೇ ಕೊಲ್ಲಲಿಲ್ಲವೇ!) ಸತ್ಪುರುಷರನ್ನೂ ಕ್ರೂರವಾದ ಮಾತುಗಳಿಂದ ಹೀಯಾಳಿಸುತ್ತಾನೆ. ಕೋಪದ ಭರದಲ್ಲಿ ತಾನು ಏನು ಮಾಡುತ್ತಿದ್ದೇನೆಂಬ ಅರಿವನ್ನು ಕಳೆದುಕೊಳ್ಳುವನು. ತಾನು ಮಾಡುವ ಕಾರ್ಯ ಪಾಪಕಾರಣವೋ ಎನ್ನುವುದನ್ನೂ ಯೋಚಿಸುವುದಿಲ್ಲ. ಗುರು ಹಿರಿಯರನ್ನೂ ಅಥವಾ ತನ್ನವರನ್ನೂ ಕೊಲ್ಲುವನು, ಹಾಗೆಯೇ ಕೆಟ್ಟ ಮಾತುಗಳಿಂದ ಎದುರಿನ ವ್ಯಕ್ತಿಗಳ ಯೋಗ್ಯತೆಯನ್ನೂ ವಿಚಾರಿಸದೇ ನಿಂದಿಸುತ್ತಾನೆ. ಹಾಗಾಗಿ ಕೋಪ ಮಾಡುವುದು ಒಳ್ಳೆಯದಲ್ಲ. ದೂರ್ವಾಸರು ಕೋಪ ಮಾಡಿ ಸುದರ್ಶನನ ಬಾಧೆಗೆ ಒಳಗಾದರು. ಕಲ್ಮಾಷಪಾದ ಕೋಪದಿಂದ ಗುರುಗಳನ್ನೇ ಶಪಿಸಹೊರಟು ಬ್ರಹ್ಮರಾಕ್ಷಸನಾದ. ಕೋಪವು ಯಾರಿಗೂ ಒಳ್ಳೆಯದಲ್ಲ._
*ವಾಚ್ಯಾವಾಚ್ಯಂ ಪ್ರಕುಪಿತೋ ನ ವಿಜಾನಾತಿ ಕರ್ಹಿಚಿತ್ ನಾಕಾರ್ಯಮಸ್ತಿ ಕ್ರುದ್ಧಸ್ಯ ನಾವಾಚ್ಯಂ ವಿದ್ಯತೇ ಕ್ವಚಿತ್*
_ಕೋಪಗೊಂಡವನಿಗೆ ಯಾವ ಮಾತನ್ನು ಆಡಬೇಕು, ಯಾವ ಮಾತನ್ನು ಆಡಬಾರದು ಎಂಬ ವಿವೇಕ ಕಣ್ಮರೆಯಾಗುವುದು. ಸಾರ್ವಜನಿಕವಾಗಿ ಅಶ್ಲೀಲ ಅಸಹ್ಯ ಮಾತುಗಳನ್ನಾಡುವನು. ( ಕೆಲವೊಮ್ಮೆ ದೊಡ್ಡ ವ್ಯಕ್ತಿಗಳೂ ಹೀಗೆ ಮಾತನಾಡಿ ಪಶ್ಚಾತ್ ಮರುಗುವರು) ಅಂತಹ ಪರಿಜ್ಞಾನವನ್ನೇ ನಾಶಮಾಡಿಕೊಳ್ಳುತ್ತಾನೆ ಆ ಕ್ಷಣದಲ್ಲಿ. ಅವನು ಮಾಡಬಾರದೆನ್ನುವ ಕಾರ್ಯವಿಲ್ಲ. ಆಡಬಾರದೆನ್ನುವ ಮಾತಿಲ್ಲ. ಕೋಪದ ಕೈಗೆ ಬುದ್ಧಿ ಕೊಟ್ಟ ವ್ಯಕ್ತಿ ಮಾಡಬಾರದುದನ್ನೇ ಮಾಡುವನು, ಆಡಬಾರದ್ದನ್ನೇ ಆಡುವನು,( ಆ ಮಗ ಈ ಮಗ ಇತ್ಯಾದಿ) ಹಾಗಾಗಿ ಕೋಪದ ನಿಯಂತ್ರಣ ತುಂಬಾ ಶ್ರೇಷ್ಠವಾದುದು._
*ಯಃ ಸಮುತ್ಪತಿತಂ ಕ್ರೋಧಂ ಕ್ಷಮಯೈವ ನಿರಸ್ಯತಿ ಯಥೋರಗಸ್ತ್ವಂ ಚ ಜೀರ್ಣಾಂ ಸ ವೈ ಪುರುಷ ಉಚ್ಯತೇ*
_ಯಾವ ಮನುಷ್ಯನು ಹೃದಯಾಂತರಾಳದಿಂದ ಉಕ್ಕಿ ಬರುವ ಕ್ರೋಧವನ್ನು ಹಾವು ತನ್ನ ಪೊರೆಯನ್ನು ಕಳಚಿ ಹಾಕುವಂತೆ ಕಳಚುವನೋ ಅಥವಾ ಕ್ಷಮೆಯನ್ನಾಶ್ರಯಿಸುವನೋ ಕೋಪವನ್ನು ತೊರೆಯುವನೋ ಅವನೇ ಪುರುಷನೆನಿಸಿಕೊಳ್ಳುವನು. ಎಂತಹ ಸುಂದರ ದೃಷ್ಟಾಂತ ವಾಲ್ಮೀಕಿಯದು. ಹಾವು ತನ್ನದೇ ಪೊರೆಯನ್ನು ಕಳಚಿ ಬಿಸುಟುತ್ತದೆ. ಪೊರೆ ಬಹುಕಾಲ ಧರಿಸಿದರೆ ತನ್ನ ಆರೋಗ್ಯ ಹದಗೆಡುವುದೆಂಬ ಕಾರಣದಿಂದ. ಮನುಷ್ಯನೂ ತನ್ನ ಮಾನಸಿಕ ದೈಹಿಕ ಕ್ಷೇಮಕ್ಕಾಗಿ ತನ್ನಲ್ಲಿಯೇ ಹುಟ್ಟಿದ ಕೋಪವನ್ನು ತ್ಯಜಿಸಬೇಕು. ಪರರ ತಪ್ಪು ನಡೆಯನ್ನು ಕ್ಷಮಿಸುವ ಮೂಲಕ ಕೋಪವನ್ನು ಬಿಡಬೇಕು. ಸುಮ್ಮನೆ ಯಾರ ಯಾರ ಮೇಲೋ ಕೋಪಗೊಂಡರೆ ಅದು ಪೌರಿಷವಲ್ಲ. ಕೆಲವರಿಗದೊಂದು ಭ್ರಮೆ. ಕೋಪಗೊಂಡರೆ ಮಾತ್ರ ಗಂಡಸು ಎನ್ನುವುದು. ಆದರೆ ನಿಜವಾದ ಪುರುಷನು ಎಂದಿಗೂ ಯಾರ ಮೇಲೂ ಕೋಪಗೊಳ್ಳಲಾರ. ಅವನಲ್ಲೇ ಪುರುಷತ್ವವಿದೆ ಅಥವಾ ಮಾನವೀಯತೆಯಿದೆ. ಅದು ಗಂಡಾಗಲಿ ಹೆಣ್ಣಾಗಲಿ ಕೋಪ ತ್ಯಜಿಸಿದಾಗ ಮಾತ್ರ ಮಾನವರೆಂದೆನಿಸುವರು. ಇಲ್ಲದಿದ್ದರೆ ಮಂಗನಿಗಿಂತ ನವ ಅಷ್ಟೇ. ಹಾಗಾಗಿ ಬೇರೆಯವರಿಗೆ ಮಕ್ಕಳಿಗೆ ಕೋಪವನ್ನು ನಿಯಂತ್ರಿಸಲು ಬಾಯಿ ತುಂಬಾ ಉಪದೇಶ ನೀಡುವ ನಾವು ಕೋಪವನ್ನು ಇಂದಿನಿಂದಲೇ ರಾಮಸೇತುವೆಯಡಿ ಹೂಳೋಣವೇ!_
📙 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ