🌾📗 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌾📗 ಭಾಗ-೧೩
*ನ ಸಾಮ ರಕ್ಷಃಸು ಗುಣಾಯ ಕಲ್ಪತೇ*
ಹನುಮನು ನುಡಿಯುವ ಮಾತು. ಈ ಲಂಕೆಯ ರಾಕ್ಷಸರ ವಿಷಯದಲ್ಲಿ ಸಾಮೋಪಾಯವನ್ನು ಆಶ್ರಯಿಸಿ ಕೆಲಸ ಮಾಡುವುದರಿಂದ ಯಾವ ಫಲವೂ ಇಲ್ಲ. ಈ ವಾಕ್ಯ ನಮ್ಮ ಆಡಳಿತಗಾರರಿಗೆ ಎಂದೋ ಅರ್ಥವಾಗಬೇಕಿತ್ತು. ಕಾಶ್ಮೀರದ ವಿಷಯದಲ್ಲಿ ಪಾಪಿ ಪಾಕಿಗಳ ಜೊತೆಗೋ ಅವರಿಂದಲೇ ಪೋಷಿಸಲ್ಪಡುವ ಪ್ರತ್ಯೇಕತಾವಾದಿಗಳೊಡನೆಯೋ ಸಂಧಾನವು ಎಂದಿಗೂ ತರವಲ್ಲ. ಅವರೂ ಲಂಕೆಯ ರಾಕ್ಷಸರಂತೆ, ಸಂಧಾನ ಕೂಡದು.ಇನ್ನು ಭೇದೋಪಾಯ ಫಲಿಸುವುದೇ ಎಂದು ಚಿಂತಿಸಿ ಅದೂ ಫಲಿಸಲಾರದೆಂದು ತರ್ಕಿಸುತ್ತಾನೆ.
*ಪರಸ್ಪರಂ ತು ಯೇ ದುಷ್ಟಾಃ ಕ್ರುದ್ಧಾ ಭೀತಾವಮಾನಿತಾಃ ತೇಷಾಂ ಭೇದಂ ಪ್ರಯುಂಜೀತ ಭೇದಸಾಧ್ಯಾ ಹಿ ತೇ ಮತಾಃ* ಸ್ವಭಾವತಃ ದುಷ್ಟರೂ ರಾಜನ ವಿಷಯದಲ್ಲಿ ಕೋಪಗೊಂಡವರೂ ರಾಜನಿಂದ ಹೆದರಿದವರೂ ರಾಜನಿಂದ ಅವಮಾನಿತರಾದವರೂ ಇದ್ದರೆ ಭೇದೋಪಾಯದಿಂದ ಅವರನ್ನು ಬೇರ್ಪಡಿಸಿ ರಾಜನಿಗೆ ವಿರುದ್ಧವಾಗಿ ನಿಲ್ಲಿಸಬಹುದು. ಆದರೆ ಲಂಕೆಯಲ್ಲಿ ಎಲ್ಲರೂ ತಮ್ಮ ರಾಜನ ವಿಷಯದಲ್ಲಿ ನಿಷ್ಠೆಯಿಂದಿರುವಾಗ ಇದು ಕಷ್ಟ. ಹಾಗಾಗಿ ಭೇದವೂ ಭಿನ್ನವಾದಂತೆ ಸರಿ. ಹಾಗಿರುವಾಗ ದಂಡವೊಂದೇ ಸರಿಯಾದ ದಾರಿಯೆಂದು ನಿಶ್ಚಯಿಸಿ ಹೀಗೆ ಯೋಚಿಸುವನು ಹನುಮ.
*ಕಾರ್ಯೇ ಕರ್ಮಣಿ ನಿರ್ವೃತ್ತೇ ಯೋ ಬಹೂನ್ಯಪಿ ಸಾಧಯೇತ್ ಪೂರ್ವಕಾರ್ಯಾವಿರೋಧೇನ ಸ ಕಾರ್ಯಂ ಕರ್ತುಮರ್ಹತಿ*
ಸ್ವಾಮಿಯು ಹೇಳಿದ ಕಾರ್ಯ ಮುಗಿಸಿದ ನಂತರ ಮೊದಲು ಮಾಡಿದ ಕಾರ್ಯ ಕೆಡದಂತೆ ಅಥವಾ ಅದಕ್ಕೆ ವಿರೋಧ ಬರದಂತೆ ಯಾರು ಹಲವಾರು ಕಾರ್ಯಗಳನ್ನು ಸಾಧಿಸುವನೋ ಅಂತಹವನು ಯಾವ ಮಹಾಕಾರ್ಯವನ್ನಾದರೂ ಸಾಧಿಸಬಲ್ಲನು. ನಾನೂ ಈಗ ಸೀತಾದರ್ಶನದ ಜೊತೆಗೆ ನನ್ನ ಪರಾಕ್ರಮವನ್ನು ರಾವಣನಿಗೆ ದರ್ಶಿಸುವ ಉಪಕ್ರಮ ಮಾಡುವೆನೆಂದು ಯೋಚಿಸುವನು. ನಮ್ಮೆಲ್ಲರಿಗೆ ಹನುಮನ ಈ ವರ್ತನೆ ಮಾದರಿ. ಹೇಳಿದ ಕೆಲಸವನ್ನಷ್ಟೇ ಮಾಡದೇ ಮಾಡಿದ ಕೆಲಸ ಕೆಡದಂತೆ ಉಳಿದ ಕೆಲಸ ಮಾಡುವುದು ವಿವೇಕಿಯ ಲಕ್ಷಣ. ನಾವೂ ಹನುಮಂತನ ರೀತಿಯಲ್ಲಿ ಯೋಚಿಸಿ ಯಶಸ್ಸು ಪಡೆಯೋಣವೇ!
*ನ ಹ್ಯೇಕಃ ಸಾಧಕೋ ಹೇತುಃ ಸ್ವಲ್ಪಸ್ಯಾಪೀಹ ಕರ್ಮಣಃ ಯೋ ಹ್ಯರ್ಥಂ ಬಹುಧಾ ವೇದ ಸ ಸಮರ್ಥೋ ಅರ್ಥಸಾಧನೇ*
ಮುಂದೆ ಇದನ್ನು ಹೇಳಿಕೊಳ್ಳುವನು ಮಾರುತಿ. ಸಣ್ಣ ಪುಟ್ಟ ಕಾರ್ಯಗಳ ಯಶಸ್ಸಿಗೇನೇ ಕೆಲವೊಮ್ಮೆ ಒಂದೇ ಉಪಾಯ ಸಾಕಾಗುವುದಿಲ್ಲ. ಯಾವನು ತನ್ನ ಕಾರ್ಯಸಿದ್ಧಿಗಾಗಿ ವಿವಿಧ ಉಪಾಯ ತಿಳಿದಿರುವನೋ ಅಂತಹವನೇ ಸಣ್ಣ ಹಾಗೂ ದೊಡ್ಡ ಎರಡೂ ಬಗೆಯ ಕಾರ್ಯಗಳನ್ನು ಸಾಧ್ಯವಾಗಿಸಲು ಸಮರ್ಥನು. ಪ್ರಕೃತ ರಾಕ್ಷಸ ನಾಶ ಅಥವಾ ಲಂಕಾಧ್ವಂಸವೆಂಬ ಈ ಕಾರ್ಯಕ್ಕಾಗಿ ಸಾಕಷ್ಟು ಉಪಾಯ ಅಲೋಚಿಸಬೇಕು. ಇದೂ ನಮಗೆ ಮಾದರಿ. ನಾವು ಏನನ್ನಾದರೂ ಮಾಡ ಹೊರಟಾಗ ಕಾರ್ಯದ ಸಾಧ್ಯತೆಯ ಬಗೆಗೆ ಅನೇಕ ಬಗೆಗಳಲ್ಲಿ ಸಾಧಕ-ಬಾಧಕಗಳ ಬಗ್ಗೆ ಯೋಚಿಸಿ ಅನಂತರ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕೆಲಸ ಕೆಟ್ಟರೆ ದುಃಖಿಸಬೇಕಾದೀತು. ಒಂದು ಮಾರ್ಗ ವಿಫಲವಾದಾಗ ಮತ್ತೊಂದು ಮಾರ್ಗ ಹುಡುಕಿಯಾದರೂ ಮುಗಿಸುವುದು ಧೀರನ ಲಕ್ಷಣ. ಹನುಮನಂತೂ ರಾಕ್ಷಸರ ಸಾಮರ್ಥ್ಯವನ್ನೆಲ್ಲಾ ಅರಿತು ಸಾಕಷ್ಟು ತಯಾರಿ ಮಾಡಿ ಮುಂದಡಿ ಇಡುತ್ತಿದ್ದಾನೆ.
📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ