ಪ್ರತಿಜ್ಞಾ ಯೌಗಂಧರಾಯಣ ೧೭

🔥 ಪ್ರತಿಜ್ಞಾ ಯೌಗಂಧರಾಯಣ 🔥೧೭

*निशितविमलखड्ग: संहृत्तोन्मत्तवेष: कनकरचितचर्मव्यग्रवामाग्रहस्त: ।  विरचितबहुचीर: पाण्डराबद्धपट्ट: सतडिदिव पयोद: किञ्चिदुद्गीर्णचन्द्र: ।।*

_ಒಂದು ಸುಂದರ ಚಿತ್ರದಂತಿರುವ ವರ್ಣನೆ. ಹೊಳೆಯುತ್ತಿರುವ ಚೂಪಾದ ಖಡ್ಗವನ್ನು ಕೈಯಲ್ಲಿ ಹಿಡಿದಿರುವ, ಇಷ್ಟು ಹೊತ್ತು ಧರಿಸಿದ್ದ ಹುಚ್ಚನ ವೇಷವನ್ನು ತೊರೆದು ಯುದ್ಧಕ್ಕೆ ಸಿದ್ಧನಾದ ಸೇನಾನಿಯಂತೆ ಗೋಚರಿಸುತ್ತಿರುವ, ಸ್ವರ್ಣಸಜ್ಜಿತವಾದ ಖಡ್ಗದ ಕೋಶದ ಮೇಲೆ ಇನ್ನೊಂದು ಕೈ ಇಟ್ಟಿರುವ, ಯುದ್ಧಕ್ಕೆ ಹೊರಟಿರುವ ಕಾರಣ ಬಹುವಿಧವಾದ ವಸ್ತ್ರಗಳನ್ನು ಧರಿಸಿರುವ ( ಕವಚ, ಕೈಗವಸು ಇತ್ಯಾದಿ) ಬಿಳಿಯ ಮುಂಡಾಸನ್ನು ತಲೆಗೆ ಧರಿಸಿರುವ ಅಥವಾ ಬಿಳಿಯ ಪೇಟಾ ಧರಿಸಿರುವ ಯೌಗಂಧರಾಯಣನನ್ನು ನೋಡಿದರೆ ಹೇಗೆ ಕಾಣುತ್ತಿರುವನೆಂದರೆ ಮಿಂಚಿನಿಂದ ಕೂಡಿರುವ ಮೋಡಗಳ ಮಧ್ಯದಲ್ಲಿ ಸ್ವಲ್ಪವೇ ಉದಿಸಿದ ಚಂದ್ರನಂತಿರುವನು. ಕವಿಯ ಈ ಉಪಮೆ ನಿಜಕ್ಕೂ ಸುಂದರವಾಗಿದೆ. ಚಂದ್ರ ಇನ್ನೂ ಪೂರ್ತಿ ಆಕಾಶವನ್ನು ಆವರಿಸಿಲ್ಲ. ಈಗ ತಾನೇ ಉದಿಸುತ್ತಿದ್ದಾನೆ. ಮಳೆಗಾಲವಾದ್ದರಿಂದ ಮೋಡವು ಅಲ್ಲಲ್ಲಿ ಇದೆ. ಮಧ್ಯ ಮಧ್ಯದಲ್ಲಿ ಮಿಂಚು ಕಾಣುತ್ತಿದೆ. ಮೋಡದಂತೆ ಯೌಗಂಧರಾಯಣನ ವೇಷಭೂಷಣ. ಮಿಂಚಿನಂತೆ ತಲೆಯ ರುಮಾಲು. ಇನ್ನು ತೇಜಸ್ವಿಯಾದ ಯೌಗಂಧರಾಯಣನ ಪರಾಕ್ರಮವು ಇನ್ನೂ ಪ್ರಕಟವಾಗದ ಕಾರಣ ಸ್ವಲ್ಪ ಉದಿಸಿದ ಚಂದ್ರನು ಅವನು. ಅವನ ಮೊಗದ ಕಾಂತಿಯನ್ನೂ ಕವಿ ಚಂದ್ರನ ಹೋಲಿಕೆಯ ಮುಖಾಂತರ ಹೇಳುತ್ತಿದ್ದಾನೆ. ಚಿತ್ರ ಬಿಡಿಸಲು ಪ್ರೇರಣೆ ಕೊಡುವಂತಿದೆ ಕವಿಯ ವರ್ಣನೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩