ಸ್ವಪ್ನವಾಸವದತ್ತ

🌼 ಸ್ವಪ್ನವಾಸವದತ್ತ 🌼

_ಭಾಸನ‌ ಇನ್ನೊಂದು ನಾಟಕ. ಪ್ರತಿಜ್ಞಾ ಯೌಗಂಧರಾಯಣದ ಮುಂದುವರಿದ ಭಾಗ ಇದು. ಈ ನಾಟಕವೂ ಬೃಹತ್ಕಥೆಯನ್ನು ಆಧರಿಸಿ ಬರೆದದ್ದು. ತನ್ನ ಪ್ರತಿಜ್ಞೆಯಂತೆ ಉದಯನನ್ನು ಮಹಾಸೇನನ ಬಂಧನದಿಂದ ಬಿಡಿಸಿ ತಾನೂ ರಾಜಧಾನಿಗೆ ಹಿಂತಿರುಗುತ್ತಾನೆ ಯೌಗಂಧರಾಯಣ. ಹೀಗಿರಲು ಆರುಣಿ ಎಂಬ ರಾಜನೋರ್ವನು ಉದಯನನ್ನು ಸೋಲಿಸಿ ಗಡೀಪಾರು ಮಾಡುತ್ತಾನೆ.ಅವನಿಗೆ ಮರಳಿ ರಾಜ್ಯ ದೊರಕಿಸಿಕೊಡಲು ಪ್ರಬಲ ರಾಜನ ಗೆಳೆತನ ಅವಶ್ಯಕ ಎಂದು ಆಲೋಚಿಸಿದ ಯೌಗಂಧರಾಯಣನು ವಾಸವದತ್ತೆಯು ಅಗ್ನಿ ಅನಾಹುತದಲ್ಲಿ ನಾಶವಾದಳೆಂದು ಸುದ್ದಿ ಹುಟ್ಟಿಸಿ ದರ್ಶಕನ‌ ಮಗಳಾದ ಪದ್ಮಾವತಿಯನ್ನು ಉದಯನನಿಗೆ ಮದುವೆ ಮಾಡಿಸಲು ಪ್ರಯತ್ನಿಸುತ್ತಾನೆ. ಇದಕ್ಕೆ ವಾಸವದತ್ತೆಯ ಸಮ್ಮತಿ ಹಾಗೂ ಸಹಕಾರ ಎರಡೂ ಇರುತ್ತದೆ. ಪದ್ಮಾವತಿಯ ತಂದೆ ದರ್ಶಕ ಪ್ರಬಲ ದೊರೆ. ಅವನೊಡನೆ ಸೇರಿದರೆ ಆರುಣಿಯನ್ನು ಸೋಲಿಸಿ ರಾಜನು ಮತ್ತೆ ರಾಜ್ಯವನ್ನು ಪಡೆಯಬಹುದೆಂಬ ದೂರಾಲೋಚನೆ ಮಂತ್ರಿಯದು. ಅದರಲ್ಲಿ ಯಶಸ್ವಿಯಾಗಿ ಇಬ್ಬರು ಪತ್ನಿಯರೊಡನೆ‌ ರಾಜ ಸುಖವಾಗಿ ನೆಲೆಸುವನು ಎಂದು ನಾಟಕಕ್ಕೆ ಕವಿ ಇತಿಶ್ರೀ ಹಾಡುತ್ತಾನೆ. ಕನಸಿನಲ್ಲಿ ವಾಸವದತ್ತೆಯನ್ನು ಕನವರಿಸುವುದು ಪ್ರಮುಖ ದೃಶ್ಯವಾದ ಕಾರಣ ಅದೇ ಹೆಸರು ಈ ನಾಟಕಕ್ಕಿದೆ. ಅದರ ಆಯ್ದ ಕೆಲವು ಶ್ಲೋಕಗಳ ಯಥಾಮತಿ ಭಾವಾರ್ಥ ಇನ್ನು ಮುಂದೆ. ಭಾಸನ ಕಲ್ಪನಾ ಸಾಮ್ರಾಜ್ಯಕ್ಕೆ ಪ್ರವೇಶಿಸಿ ಸಹೃದಯರು ಆನಂದಿಸಿರೆಂದು ಆಶಿಸುತ್ತೇನೆ._






http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩