ಪ್ರತಿಜ್ಞಾ ಯೌಗಂಧರಾಯಣ ೧೫

🔥 ಪ್ರತಿಜ್ಞಾ ಯೌಗಂಧರಾಯಣ 🔥೧೫

*धन्या: सुराभिर्मत्ता: धन्या: सुराभिरनुलिप्ता: । धन्या: सुराभि: स्नाता धन्या: सुराभि: संज्ञापिता: ।।*

_ಮದ್ಯದ ಸೇವನೆಯನ್ನು ಬಣ್ಣಿಸುವ ಈ ಮಾತು ಗಾತ್ರಸೇವಕನ ಎಂಬ ವಾಸವದತ್ತೆಯ ಸಹಾಯಕನದ್ದು. ಕುಡಿದು ತೇಲಾಡುತ್ತಾ ಬೀದಿಯಲ್ಲಿ ಬರುತ್ತಿದ್ದ ಅವನನ್ನು ಭಟನು ಕರೆದಾಗ ರಂಗಕ್ಕೆ ಬಂದು ನುಡಿಯುವ ಮಾತು. ಮದ್ಯ ಕುಡಿದು ಯಾರು ಮತ್ತರಾಗುವರೋ ಅವರೇ ಧನ್ಯರು. ಯಾರು ಮದ್ಯ ಸೇವಿಸುತ್ತಾ ಅದರಲ್ಲೇ ಮುಳುಗುವರೋ ಅವರೇ ಧನ್ಯರು. ಇನ್ನು ಯಾರು ದಿನವಿಡೀ ಕುಡಿಯುತ್ತಾ ಅದನ್ನೇ ಪಾನಮಾಡುತ್ತಾ ಸ್ನಾನಮಾಡಿದಂತೆ ಮದ್ಯಾಸಕ್ತರೋ ಅವರು ಧನ್ಯರು. ಅಷ್ಟೇ ಅಲ್ಲ ಯಾರು ಮದ್ಯ ಕುಡಿದು ತಮ್ಮ ಆಯುಷ್ಯವನ್ನು ಬೇಗ ಕಳೆದುಕೊಳ್ಳುವರೋ ಅವರು ನಿಜಕ್ಕೂ ಧನ್ಯರು. ಭಾಸನ ಪಾತ್ರಚಿತ್ರಣದಲ್ಲಿ ಸಾಮಾನ್ಯರಿಗೂ ಅವರ ತರಹೇವಾರಿ ವ್ಯಕ್ತಿತ್ವಗಳಿಗೂ ಸ್ಥಾನವಿದೆ. ಕುಡುಕನ ಮಾತನ್ನೂ ಅವನ ಸ್ಥಿತಿಯನ್ನೂ ಬಣ್ಣಿಸುತ್ತಾನೆ ಭಾಸ. ಕುಡಿತದ ನಶೆಯಲ್ಲಿ ಸೊಸೆಯು ಮಾವನನ್ನೇ ಪ್ರೀತಿಸಲು ಹೊರಟಳು ಎಂದು ಕುಡಿತದ ಅಪಾಯವನ್ನೂ ಕುಡುಕನ ಬಾಯಲ್ಲಿ ಹೇಳಿಸುತ್ತಾನೆ.ಬಹುಶಃ ಆಗಿನ ಕಾಲದಲ್ಲೂ ಕುಡಿತವು ಕೆಲವು ಜನಾಂಗಗಳಲ್ಲಿ ಸ್ತ್ರೀ ಪುರುಷ ಭೇದವಿಲ್ಲದೆ ಸಮಾನವಾಗಿತ್ತೇನೋ! ಅಷ್ಟೆಲ್ಲಾ ವರ್ಣಿಸಿ ಕೊನೆಗೆ ಅವನು ಕೊಡುವ ಎಚ್ಚರಿಕೆಯು ಮಾರ್ಮಿಕವಾಗಿದೆ.ಕುಡಿದು ಕುಡಿದು ಯಾರು ಸತ್ತರೋ ಅಂದರೆ ಆಯುಷ್ಯ ಮುಗಿಯುವ ಮುನ್ನ ತಾವೇ ಕಳೆದುಕೊಂಡರೋ ಅವರೇ ಧನ್ಯರು ಎನ್ನುತ್ತಾ ಕುಡಿತದ ದುಷ್ಪರಿಣಾಮವನ್ನು ಸಮರ್ಥವಾಗಿ ಬಿಂಬಿಸಿದ್ದಾನೆ ಕವಿ. ಮದ್ಯದ ಬಗೆಗಿನ ಒಂದು ವಿಶೇಷ ಪದ್ಯ. ಪದ್ಯ ಮಾತ್ರ ಓದಿ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩