ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*समवृत्तिरुपैति मार्दवं समये यश्च तनोति तिग्मताम् । अधितिष्ठति लोकमोजसा स विवस्वानिव मेदिनीपति: ।।*

_ಧರ್ಮಜನು ಮಾತು. ತಮ್ಮಾ , ರಾಜನಾದವನು ಲೋಕದಲ್ಲಿ ಸಮವೃತ್ತಿಯನ್ನು ತೋರಬೇಕು. ಸಮಯದ ಸಂದರ್ಭ ನೋಡಿ ಕೆಲವೊಮ್ಮೆ ಮಾರ್ದವವನ್ನೂ, ಕೆಲವೊಮ್ಮೆ ‌ಉಗ್ರತೆಯನ್ನೂ ತೋರಿಸಬೇಕು. ಹಾಗಲ್ಲದೆ ಎಲ್ಲಾ ಸಮಯದಲ್ಲಿ ಮಾರ್ದವವನ್ನೋ ಅಥವಾ ಉಗ್ರತೆಯನ್ನೋ ತೋರುವುದಲ್ಲ. ಅದು ರಾಜನಿಗೆ ಶೋಭೆ ತರುವುದಿಲ್ಲ. ಏಕೆಂದರೆ ಲೋಕಕ್ಕೆ ಬೆಳಕು ನೀಡುವ ಸೂರ್ಯನನ್ನೇ ನೋಡು. ಅವನ ಸಹಜ ಧರ್ಮ ಉಗ್ರತೆ ಅಥವಾ ಪ್ರಖರತೆ. ಆದರೆ ಅವನೂ ಕೂಡ ಋತುಗಳ ವ್ಯತ್ಯಾಸದಿಂದಾಗಿ ಪ್ರಖರನೂ ಶಾಂತನೂ ಆಗಿ ತೋರುತ್ತಾನೆ. ಗ್ರೀಷ್ಮದ ಆದಿಯಲ್ಲಿ ಸುಡುವ ಸೂರ್ಯನು ಹೇಮಂತ ಋತುವಿನಲ್ಲಿ ತಂಪಾಗುವನು. ಅವನ ಸಹಜತೆ ಹೇಮಂತದಲ್ಲಿ ಮರೆಯಾಗುವುದು. ಹಾಗಾಗಿಯೇ ಅವನು ತನ್ನ ತೇಜಸ್ಸಿನಿಂದ ಲೋಕದಲ್ಲಿ ಮೆರೆಯುತ್ತಿದ್ದಾನೆ. ನೀನೂ ಅಥವಾ ನಾವೂ ಅವನಂತೆಯೇ   ಕೆಲವೊಮ್ಮೆ ಮೃದು ಸ್ವಭಾವವನ್ನೂ ಕೆಲವೊಮ್ಮೆ ಕೋಪವನ್ನೂ ಪ್ರದರ್ಶಿಸಬೇಕು. ಆಗ ಮಾತ್ರ ನಮ್ಮ ತೇಜಸ್ಸು ವೃದ್ಧಿಯಾಗಿ ಬಹುಕಾಲ ಅಧಿಕಾರದಲ್ಲಿ ಉಳಿಯುವೆವು. ಎಷ್ಟು ಸತ್ಯವಾದ ಮಾತು. ಸದಾ ಶಾಂತವಾಗಿದ್ದರೆ ಶತ್ರುಗಳು ಅದು ನಮ್ಮ ದೌರ್ಬಲ್ಯವೆಂದು ಭಾವಿಸುತ್ತಾರೆ. ಸದಾ ಕೋಪಗೊಳ್ಳುತ್ತಿದ್ದರೆ ಮಿತ್ರರೇ ದೂರವಾಗುತ್ತಾರೆ. ಇವೆರಡನ್ನೂ  ಸಮಯ ನೋಡಿ ಪ್ರದರ್ಶಿಸಿದಾಗ ಆ ಭಾವಗಳಿಗೆ ಒಂದು ಮೌಲ್ಯ ಬರುತ್ತದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩