ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*लघुवृत्तितया भिदां गतं बहिरन्तश्च नृपस्य मण्डलम् । अभिभूय हरत्यनन्तर: शिथिलं कूलमिवापगारय: ।।*

_ಧರ್ಮಜನ ಮಾತು. ರಾಜನಾದವನು ಪ್ರತಿಕ್ಷಣವೂ ತನ್ನ ವರ್ತನೆಯ ಬಗ್ಗೆ ಜಾಗರೂಕನಾಗಿರಬೇಕಾಗುತ್ತದೆ. ಹಾಗಿಲ್ಲದೆ ಅವನು ಲಘುವಾಗಿ ವರ್ತಿಸಿದರೆ ತಾನಾಗೇ ಶತ್ರುವಿಗೆ ಆಹ್ವಾನ ಕೊಟ್ಟಂತೆ ಆಗುತ್ತದೆ. ರಾಜನ ಕೆಟ್ಟ ವರ್ತನೆಯು ಅವನ ಆಪ್ತ ಮಂತ್ರಿಗಳನ್ನೂ ದೂರಮಾಡುತ್ತದೆ. ಆಗ ಶತ್ರುವು ಹೆಚ್ಚಿನ ಪ್ರಯಾಸವಿಲ್ಲದೆ ಅವನನ್ನು ಮಟ್ಟ ಹಾಕುತ್ತಾನೆ. ಅದಕ್ಕೆ ಭಾರವಿಯು ನದಿಯನ್ನು ಉದಾಹರಿಸುತ್ತಿದ್ದಾನೆ. ವೇಗವಾಗಿ ಹರಿಯುವ ನದಿಯ ವೇಗವನ್ನು ಎರಡೂ ಬದಿಯ ತೀರಗಳು ಕಡಿಮೆ ಮಾಡುವಂತೆ ರಾಜನ ದುರ್ವರ್ತನೆಯೇ ಅವನ ಏಳ್ಗೆಯ ವೇಗವನ್ನು ತಡೆಯುತ್ತದೆ. ಅದೂ ಶಿಥಿಲವಾದ ತೀರವು ಅಲ್ಲಲ್ಲಿ ನೀರಿಗೆ ಜಾಗ ಕೊಟ್ಟು ನದಿಯ ಪ್ರವಾಹದ ವೇಗವನ್ನು ಸುಲಭವಾಗಿ ತಡೆಯುತ್ತದೆ. ತೀರ ಗಟ್ಟಿ ಇದ್ದಾಗ ಎಂತಹ ಪ್ರಬಲ ಪ್ರವಾಹವೂ ಅದನ್ನು ಏನೂ ಮಾಡಲಾರದು. ರಾಜನ ವೃತ್ತಿಯ ಔನ್ನತ್ಯಕ್ಕೆ ಗಟ್ಟಿಯಾದ ತೀರದಂತೆ ದೃಢ ನಿರ್ಧಾರ, ಜಿತೇಂದ್ರಿಯತ್ವ ಮೊದಲಾದವು ಬೇಕಾಗುತ್ತದೆ. ಅದಿಲ್ಲದೆ ದುಶ್ಚಟಗಳು, ಅಹಂಕಾರ, ಮದ ಮೊದಲಾದವು ಸೇರಿಕೊಂಡರೆ ಒಟ್ಟಂದದ ವ್ಯಕ್ತಿತ್ವವು ಶಿಥಿಲವಾಗಿ ಅವನ ನಾಶಕ್ಕೆ ಅದೇ ಹೇತುವಾಗುತ್ತದೆ. ಪ್ರಕೃತ ದುರ್ಯೋಧನನ ವರ್ತನೆಯೇ ಅವನನ್ನು ಮುಳುಗಿಸುತ್ತದೆ. ನಾವೇಕೆ ಹೆಚ್ಚು ಪರಿಶ್ರಮ ಪಡಬೇಕು! ಲೋಕದಲ್ಲಿಯೂ ವರ್ತನೆಯೆಂಬ ತೀರ ಗಟ್ಟಿ ಇದ್ದಾಗ ವ್ಯಕ್ತಿತ್ವದ ಹರಿವು ಸರಿಯಾಗಿರುತ್ತದೆ ಅಲ್ಲವೇ!_

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩