ಪ್ರತಿಜ್ಞಾ ಯೌಗಂಧರಾಯಣ ೨೧

🔥 ಪ್ರತಿಜ್ಞಾ ಯೌಗಂಧರಾಯಣ 🔥೨೧

*भवन्त्वरजसो गाव: परचक्रं प्रशाम्यतु । इमामपि महीं कृत्स्नां राजसिंह: प्रशास्तु न: ।।*

_ಶತ್ರುವಿನಿಂದ ಅಪಹೃತಳಾದ ತನ್ನ ಮಗಳನ್ನು ಮಡದಿಯ ಇಚ್ಛೆಯಂತೆ ಮಹಾಸೇನನು ವತ್ಸರಾಜನೊಡನೆ ಮದುವೆ ಮಾಡಿಸುತ್ತಾನೆ. ಅವನ ಮಂತ್ರಿಯು ಯೌಗಂಧರಾಯಣನನ್ನು ಕುರಿತು ನಿನಗೆ ಪ್ರಿಯವಾದುದು ಇನ್ನಾವುದು ಎಂದು ಕೇಳಿದಾಗ ಯೌಗಂಧರಾಯಣನ ಮಾತು. ಇನ್ನೇನು ಕೇಳಲಿ ನಾನು - ಆಸೆಗಳೆಲ್ಲವೂ ಈಡೇರಿದವು. ನಮ್ಮ ರಾಜನು ಬಂಧಮುಕ್ತನಾದನು. ಅವನು ಬಂಧನದಲ್ಲಿ ಇದ್ದಾಗ ಪ್ರೀತಿಸಿದ ಕುವರಿಯನ್ನು ವರಿಸಿದನು. ಹೀಗೆ ಒಡೆಯನ ಆಸೆಗಳೇ ನನ್ನ ಆಸೆಗಳು. ಅದಕ್ಕಿಂತ ಮಿಗಿಲಾಗಿ ಕೇಳುವುದಾರೆ ಲೋಕಕ್ಕೆಲ್ಲ ಒಳಿತೇ ಆಗಲಿ ಎನ್ನುತ್ತಾ ಇದನ್ನು ಹೇಳುತ್ತಾನೆ. ಲೋಕಕ್ಕೆಲ್ಲ ಹಾಲು ತುಪ್ಪ ಮೊಸರುಗಳ ಮೂಲಕ ಸಮೃದ್ದಿ ನೀಡುವ ಹಸುಗಳು ದುಃಖಪಡದಿರಲಿ. ಅವುಗಳಿಗೆ ಕಾಲಕಾಲಕ್ಕೆ ಮೇವು ಮೊದಲಾದವು ದೊರಕಲಿ. ರಾಜ್ಯಕ್ಕೆ ಶತ್ರುಗಳ ಪೀಡೆ ಸದಾ ಇದ್ದರೆ ಅಂತಹ ರಾಜ್ಯ ಅಭಿವೃದ್ಧಿ ಬೇಗ ಹೊಂದಲಾರದು. ಹಾಗಾಗಿ ಶತ್ರುಸೈನ್ಯವು ಅಥವಾ ಶತ್ರುಗಳ ತಂತ್ರಗಳು  ಪರಾಜಿತವಾಗಲಿ. ಈ ಸಂಪೂರ್ಣ ಭೂಮಿಯನ್ನು ನಮ್ಮ ರಾಜನಾದ ವತ್ಸನು ಉತ್ತಮವಾಗಿ ಆಳಲಿ. ಕವಿಯು ಈ ಮಾತಿನ ಮೂಲಕ ಲೋಕಕ್ಕೆ ಕ್ಷೇಮವನ್ನು ಹಾರೈಸಿ ನಾಟಕವನ್ನು ಮುಗಿಸುತ್ತಿದ್ದಾನೆ. ಈ ಶ್ಲೋಕದೊಂದಿಗೆ ಪ್ರತಿಜ್ಞಾ ಯೌಗಂಧರಾಯಣ ನಾಟಕ ಮುಗಿಯಿತು. ಭಾಸನ ಇನ್ನೊಂದು ನಾಟಕದೊಂದಿಗೆ ಮತ್ತೆ ಈ ಮಾಲಿಕೆ ಮುಂದುವರಿಯುತ್ತದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩