ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*अपनेयमुदेतुमिच्छता तिमिरं रोषमयं धिया पुर: । अविभिद्य निशाकृतं तम: प्रभया नांशुमताप्युदीयते ।।*
_ಧರ್ಮಜನ ಮಾತು. ಭೀಮ, ಕೋಪವೆಂದಿಗೂ ಒಳ್ಳೆಯದಲ್ಲ. ಯಾರು ತನ್ನ ಉನ್ನತಿಯನ್ನು ಬಯಸುವರೋ ಅಂತಹ ವ್ಯಕ್ತಿಗಳು ಮೊದಲಿಗೆ ಕೋಪವೆಂಬ ಕತ್ತಲಿನಿಂದ ಶಾಂತತೆಯೆಂಬ ಬೆಳಕಿನೆಡೆಗೆ ನಡೆಯಬೇಕು. ಕೋಪವೆಂಬ ಕತ್ತಲಲ್ಲಿದ್ದರೆ ಅವರ ಸಾಧನೆಯು ಕತ್ತಲಲ್ಲೇ ಮುಳುಗುವುದು ಅಥವಾ ಸಾಧನೆಗೆ ಅದೇ ಅಡ್ಡ ಬರುವುದು. ಹಾಗಾಗಿ ಜೀವನದಲ್ಲಿ ಏನನ್ನೋ ಸಾಧಿಸಹೊರಟವರು, ಏನಾದರೂ ನಿರ್ದಿಷ್ಟ ಗುರಿಯನ್ನು ತಲುಪಹೊರಟವರು ಎಂದಿಗೂ ಕೋಪದ ಕೈಗೆ ಬುದ್ಧಿಯನ್ನು ಕೊಡಬಾರದು. ಪ್ರಕೃತಿಯೇ ನಮಗೆ ಅದನ್ನು ತಿಳಿಸುತ್ತದೆ ಎನ್ನುತ್ತಾ ಸುಂದರವಾದ ದೃಷ್ಟಾಂತ ನೀಡುತ್ತಾನೆ ಕವಿ. ಅಂಶುಮಂತನೆನಿಸಿಕೊಂಡ ಸೂರ್ಯನು ಈ ಭೂಮಿಯನ್ನು ಕಿರಣಗಳ ಮೂಲಕ ಪ್ರವೇಶಿಸುವ ಮೊದಲು ರಾತ್ರಿ ಹುಟ್ಟಿದ ಕತ್ತಲನ್ನು ದೂರಮಾಡಿಯೇ ಪ್ರವೇಶಿಸುವನು. ಕತ್ತಲೆ ಕಳೆಯದೇ ಸೂರ್ಯನ ಅಸ್ತಿತ್ವವೇ ಕಾಣದು. ಅದೇ ರೀತಿ ಜೀವಿಯೂ ಉನ್ನತಿಯನ್ನು ಸಾಧಿಸಲು ಕೋಪವೆಂಬ ಕತ್ತಲನ್ನು ಮನವೆಂಬ ಮಂಟಪದಲ್ಲಿ ಇರಗೊಡದೇ ಅದನ್ನು ನಿವಾರಿಸಿ ತನ್ನ ಕಾರ್ಯಸಾಧನೆಯಲ್ಲಿ ತೊಡಗಬೇಕು. ಆಗ ಮಾತ್ರ ಯಶಸ್ಸು ಸಾಧ್ಯ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ