ಪ್ರತಿಜ್ಞಾ ಯೌಗಂಧರಾಯಣ ೧೯

🔥 ಪ್ರತಿಜ್ಞಾ ಯೌಗಂಧರಾಯಣ 🔥೧೯

*वैरं भयं परिभवं च समं विहाय कृत्वा नयैश्च विनयैश्च शरैश्च कर्म । शत्रो: श्रियं च सुहृदामयशश्च हित्वा  प्राप्तो जयश्च नृपतिश्च महांश्च शब्द: ।।*

_ಯೌಗಂಧರಾಯಣನ ಮಾತು.  ಶತ್ರುವನ್ನು ಗೆದ್ದು ಕೃತಾರ್ಥನಾದ ಅವನ ಆನಂದದ ಮಾತು. ವೈರಿಗಳ ವೈರವನ್ನು, ಯಾವಾಗ ದಾಳಿ ಮಾಡುವರೋ ಅಥವಾ ಬಂಧಿತನಾದ ರಾಜನಿಗೆ ಏನು ಮಾಡುವರೋ ಎಂಬ ಭಯ, ರಾಜನನ್ನು ಬಿಡಿಸಲು ಧರಿಸಿದ ಹುಚ್ಚನ ವೇಷದಲ್ಲಿ ಅನುಭವಿಸಿದ ಅವಮಾನ ಈ ಮೂರನ್ನು ಒಟ್ಟಿಗೇ ತ್ಯಜಿಸಿ, ರಾಜನೀತಿಗನುಸಾರ ಉಪಾಯಗಳನ್ನು ಮಾಡಿ, ಶತ್ರುಗಳ ನೆಲದಲ್ಲಿ ನಮ್ಮತನವನ್ನು ಎಲ್ಲೂ ತೋರದೇ ತಗ್ಗಿ ಬಗ್ಗಿ ನಡೆದು ಸಂಶಯ ಬರದಂತೆ ಜಾಗರೂಕತೆ ವಹಿಸಿ, ಆಯುಧಗಳಿಂದ ಹೋರಾಡಿ, ಶತ್ರುವಿನ ಸಂಪತ್ತನ್ನು ಅಂದರೆ ಪ್ರಕೃತ ಮಹಾಸೇನನ ಮಗಳನ್ನು ಅದರ ಜೊತೆಗೆ ಮಿತ್ರರಿಗೊದಗಿದ್ದ ಅಪಕೀರ್ತಿಯನ್ನು ತರಿದು ಜಯಕೀರ್ತಿಯನ್ನು ಅಥವಾ ವತ್ಸರಾಜನನ್ನು ಬಂಧನದಿಂದ ಬಿಡಿಸಿ, ಮಹಾನ್ ಎಂಬ ಬಿರುದನ್ನು ಸಂಪಾದಿಸಿದೆ. ಇನ್ನೇನು ಬೇಕು ಒಬ್ಬ ರಾಜನಿಗೆ ನಿಷ್ಠನಾದ ಯೋಧನಿಗೆ! ಮಹಾಸೇನನ ಸೆರೆಯಲ್ಲಿದ್ದ ತನ್ನ ಒಡೆಯನನ್ನು ಯೌಗಂಧರಾಯಣನು ತನ್ನದೇ ಉಪಾಯಗಳನ್ನು ಪ್ರಯೋಗಿಸಿ ಹುಚ್ಚನಂತೆ ವೇಷ ಧರಿಸಿ ಶತ್ರುಗಳ ನೆಲದಲ್ಲಿ ಸಾಕಷ್ಟು ಅವಮಾನಾದಿಗಳನ್ನು ಹಾಗೂ ಸಿಕ್ಕಿಬೀಳುವೆನೆಂಬ ಭಯವನ್ನೆಲ್ಲಾ ಅನುಭವಿಸಿ ಈಗ ಶತ್ರುಗಳೊಡನೆ ಹೋರಾಡಿ ಸಿಕ್ಕಿಬಿದ್ದರೂ ಒಡೆಯನನ್ನು ಅವನ ಪ್ರಿಯತಮೆಯಾದ ಶತ್ರುವಿನ ಮಗಳೊಡನೆ ಒಂದುಗೂಡಿಸಿ ಅಬ್ಬಾ ನಿಜಕ್ಕೂ ಮಹಾಮೇಧಾವಿ ಅಥವಾ ಮಹಾಯೋಧ ಅಥವಾ ಮಹಾಮಾತ್ಯ ಇತ್ಯಾದಿ ವಿಶೇಷಣಗಳಿಂದ ಎಲ್ಲರೂ ಸ್ತುತಿಸಿದಾಗ ಆಗುವ ಕೃತಾರ್ಥತೆ ಎಂತಹ ಆನಂದದಾಯಕ! ಒಬ್ಬ ನರನು ತಾನು ಅಂದುಕೊಂಡ ಕಾರ್ಯವನ್ನು ಸಾಧಿಸಿದಾಗ ಪಡುವ ಸಂತೋಷ ಕವಿಯ ಮಾತಿನಲ್ಲಿ ಸಮರ್ಥವಾಗಿ ಪ್ರತಿಬಿಂಬಿತವಾಗಿದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩