ರಾಮಾಯಣ ೯೨
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೨
*ವಿವಿಧಾಯುಧಹಸ್ತಾಶ್ಚ ಶೂಲಮುದ್ಗರಪಾಣಯಃ ಗದಾಭಿಃ ಪಟ್ಟಸೈರ್ದಂಡೈರಾಯಸೈರ್ಮುಸಲೈರ್ಭೃಶಮ್* *ಪರಿಘೈರ್ಭಿಂದಿಪಾಲೈಶ್ಚ ಭಲ್ಲೈಃ ಪ್ರಾಸೈಃ ಪರಶ್ವಧೈಃ ನಿರ್ಯಯೂ ರಾಕ್ಷಸಾ ದಿಗ್ಭ್ಯೋ ನರ್ದಂತೋ ಜಲದಾ ಯಥಾ*
_ರಾಮರು ಎಚ್ಚೆತ್ತುಕೊಂಡುದನ್ನು ಕಂಡ ರಾವಣ ಯುದ್ಧಕ್ಕೆ ಹೊರಡಲು ರಾಕ್ಷಸರಿಗೆ ಆಜ್ಞಾಪಿಸುತ್ತಾನೆ. ಆಗ ನಾನಾ ಆಯುಧಗಳನ್ನು ಹಿಡಿದು ಹೊರಟದ್ದನ್ನು ವಾಲ್ಮೀಕಿಗಳು ವರ್ಣಿಸುತ್ತಿದ್ದಾರೆ. ಸೊಂಟಕ್ಕೆ ಗಂಟೆಗಳನ್ನು ಕಟ್ಟಿ, ಶೂಲ-ಮುದ್ಗರ-ಗದೆ-ಪಟ್ಟಸ- ಲೋಹದಂಡ- ಮುಸಲ- ಪರಿಘ- ಭಿಂದಿಪಾಲ- ಭಲ್ಲ- ಪ್ರಾಸ- ಪರಶ್ವಧ ಹೀಗೆ ಬಗೆಬಗೆಯ ಆಯುಧಗಳನ್ನು ಹಿಡಿದು ಹೊರಟರು. ಯುದ್ಧದಲ್ಲಿ ಬಳಸುತ್ತಿದ್ದ ಆಯುಧಗಳನ್ನು ನೋಡಿದಾಗ ಆಗಿನ ಕಾಲದ ಕಬ್ಬಿಣ ಅಥವಾ ಬೇರೆ ಲೋಹಗಳ ಕೈಗಾರಿಕೆ ಸಾಕಷ್ಟು ಬೆಳವಣಿಗೆ ಕಂಡಿತ್ತು ಎನ್ನಬಹುದು._
*ಶಿಲಾಭಿಶ್ಚೂರ್ಣಿತಾಃ ಕೇಚಿತ್ಕೇಚಿದ್ದಂತೈರ್ವಿದಾರಿತಾಃ ಧ್ವಜೈರ್ವಿಮಥಿತೈರ್ಭಗ್ನೈಃ ಖರೈಶ್ಚ ವಿನಿಪಾತಿತೈಃ*
_ರಾಕ್ಷಸರು ಆಯುಧಗಳಿಂದ ವಾನರರನ್ನು ತರಿಯುತ್ತಿದ್ದರೆ ವಾನರರ ಯುದ್ಧ ರೀತಿಯೇ ಬೇರೆ ಬಗೆಯಾಗಿತ್ತು. ಕೆಲವರು ರಾಕ್ಷಸರನ್ನು ಕೈಗಳಿಂದ ಸೀಳಿ ಬಿಸುಟರು. ಸೀಳಬೇಕಾದರೆ ಕೈಗಳು ಎಷ್ಟು ಬಲಿಷ್ಠ ಇದ್ದಿರಬಹುದೆಂದು ಊಹಿಸುವುದೇ ಕಷ್ಟ! ಕೆಲವರನ್ನು ಮರಗಳಿಂದ ಬಡಿದು ರಾಶಿಹಾಕಿದರು. ಕೆಲವರನ್ನು ಬಂಡೆಗಳಿಂದ ಜಜ್ಜಿದರು. ಕೆಲವರನ್ನು ಹಲ್ಲುಗಳಿಂದ ಸಿಗಿದರು. ಕಪಿಯೋಧರು ಗಿರಿಶೃಂಗಗಳನ್ನೂ ಬೀಸಿ ಬಡಿಯಲು, ಮುರಿದು ಚೂರುಚೂರಾದ ಧ್ವಜಗಳಿಂದಲೂ, ಸತ್ತು ಬಿದ್ದ ಖರಗಳಿಂದಲೂ, ಪುಡಿಪುಡಿಯಾದ ರಥಗಳಿಂದಲೂ, ನೆಲಕ್ಕೊರಗಿದ ರಾಕ್ಷಸರಿಂದಲೂ, ಅಡ್ಡ ಬಿದ್ದ ಆನೆಗಳಿಂದಲೂ, ಜಜ್ಜಿಹೋದ ಕುದುರೆಗಳಿಂದಲೂ, ಹತರಾದ ರಾವುತರಿಂದಲೂ ರಣಭೂಮಿಯು ತುಂಬಿಹೋಯಿತು. ಈ ದೃಶ್ಯಗಳನ್ನು ನೋಡಿದರೆ ಯುದ್ಧದ ಭೀಕರತೆ ಭಯವನ್ನು ಹುಟ್ಟಿಸುತ್ತದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ