ಪ್ರತಿಜ್ಞಾ ಯೌಗಂಧರಾಯಣ ೧೬
🔥 ಪ್ರತಿಜ್ಞಾ ಯೌಗಂಧರಾಯಣ 🔥೧೬
*नवं शरावं सलिलै: सुपूर्णं सुसंस्कृतं दर्भकृतोत्तरीयम् । तत्तस्य माभून्नरकं स गच्छेद् यो भर्तृपिण्डस्य कृते न युध्येत् ।।*
_ಯೌಗಂಧರಾಯಣನ ಜೊತೆಗಾರನ ಮಾತು. ಅನ್ನ ನೀಡಿದ ಒಡೆಯನ ಸಲುವಾಗಿ ಯಾವ ಸೇವಕನು ಸ್ವಲ್ಪವೂ ಶ್ರಮಪಡದೇ ಇರುವನೋ ಅವನಿಗೆ ಕುಡಿಯಲು ಯೋಗ್ಯವಾದ ನೀರು ದೊರಕುವುದಿಲ್ಲ. ಅಂತಹ ಕೃತಘ್ನನು ಅಂದರೆ ಉಪಕಾರ ಸ್ಮರಣೆ ಮಾಡದಿರುವವನು ನಿಶ್ಚಯವಾಗಿ ನರಕವನ್ನು ಸೇರುತ್ತಾನೆ. ಯಾರು ನಮಗೆ ಅನ್ನ ಆಶ್ರಯ ನೀಡುವರೋ ಅವರ ಬಗೆಗೆ ಕಿಂಚುತ್ತಾದರೂ ಉಪಕಾರ ಭಾವನೆ ನಮ್ಮಲ್ಕಿರಬೇಕು. ಉಪಕಾರಿ ವ್ಯಕ್ತಿಯು ಆಪತ್ತಿನಲ್ಲಿ ಅಥವಾ ಕಷ್ಟದಲ್ಲಿದ್ದಾಗ ಅವನಿಗಾಗಿ ಸಹಾಯ ಮಾಡಲು ಧಾವಿಸಬೇಕು. ಅದು ಕೃತಜ್ಞತೆ ಹೇಳುವ ವಿಧಾನ. ಹಾಗಲ್ಲದೆ ಉಪಕಾರ ಪಡೆದು ಯಾವ ಸ್ಮರಣೆಯು ಇಲ್ಲದೆ ಏನಾದರಾಗಲಿ ಎಂದು ತಡಸ್ಥನಾಗಿ ಇರುವವನಿಗೆ ಶುದ್ಧವಾದ ಪಾತ್ರೆಯಲ್ಲಿ ಇಟ್ಟಿರುವ ಸಂಸ್ಕರಿತವಾದ ಕುಡಿಯುವ ನೀರೂ ದೊರಕದೇ ಹೋದೀತು. ಕೃತಘ್ನನಿಗೆ ಆಪತ್ತಿನಲ್ಲಿ ಹುಲ್ಲುಕಡ್ಡಿಯೂ ದೊರಕದೇ ಮುಳುಗುವಂತಾಗಬೇಕಾದೀತು ಎನ್ನುವ ಭಾವದಲ್ಲಿ ಈ ಮಾತು. ಪ್ರಕೃತ ವತ್ಸರಾಜನನ್ನು ಬಂಧನದಲ್ಲಿ ಬಿಡಿಸಲು ಮಂತ್ರಿಯಾದ ಯೌಗಂಧರಾಯಣನೇ ಮೊದಲಾದವರು ಶ್ರಮಪಡುತ್ತಿದ್ದಾರೆ. ಅವರ ಶ್ರಮ ಸಾರ್ಥಕವಾದುದು. ಹಾಗೆ ಶ್ರಮಪಡದಿರುವವರು ಒಡೆಯನ ಅನ್ನಕ್ಕೆ ದ್ರೋಹ ಬಗೆಯುತ್ತಿರುವವರು ಎನ್ನುವ ಭಾವವೂ ಇದೆ. ಈ ಶ್ಲೋಕ *ಚಾಣಕ್ಯ ನೀತಿ* ಯಲ್ಲೂ ಇದೆ. ಹಾಗಾಗಿಯೇ ಕೆಲವರು ಭಾಸನು ಚಾಣಕ್ಯನ ಪೂರ್ವಕಾಲೀನ ಎನ್ನುತ್ತಾರೆ. ಇಲ್ಲಿ ಪಿಂಡ ಅಂದರೆ ಅನ್ನ ಅನ್ನುವ ಅರ್ಥದಲ್ಲಿ ಪ್ರಯೋಗ ಇದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ