ಪ್ರತಿಜ್ಞಾ ಯೌಗಂಧರಾಯಣ ೧೮

🔥 ಪ್ರತಿಜ್ಞಾ ಯೌಗಂಧರಾಯಣ 🔥೧೮

*अग्निं बद्ध्वा वत्सराजाभिधानं यस्मिन् काले सर्वतो रक्षितव्यम् । तस्मिन् काले सुप्तमासीदमात्यैर्नीते रत्ने भाजने को निरोध: ।।*

_ಯೌಗಂಧರಾಯಣನ ಮಾತು.  ವತ್ಸರಾಜನೆಂಬ ಬೆಂಕಿಯನ್ನು ಬಂಧಿಸಿ ಎಷ್ಟು ಕಾಲ ಇಟ್ಟುಕೊಂಡಿದ್ದರೋ ಅಷ್ಟು ಕಾಲ ಇಲ್ಲಿನ ಎಲ್ಲಾ ಅಮಾತ್ಯರು ನಿದ್ದೆ ಮಾಡುತ್ತಿದ್ದರು‌. ಈಗ ಆ ರತ್ನವು ಹೋದ ಮೇಲೆ ಎಲ್ಲೆಡೆ ಎಚ್ಚರಿಕೆ ವಹಿಸಿದರೆ ಏನು ಪ್ರಯೋಜನ! ಯಾವ ವಿಷಯದಲ್ಲಾದರೂ ಅದು ಬಳಿಯಲ್ಲಿದ್ದಾಗ ಎಚ್ಚರ ವಹಿಸಬೇಕು. ಅದರ ಬಗ್ಗೆ ನಿಗಾ ಇಡಬೇಕು. ಹಾಗೆ ಮಾಡದೆ ಬಳಿಯಲ್ಲಿದ್ದಾಗ ನಿದ್ದೆ ಮಾಡುತ್ತಾ ಹೋದ ಮೇಲೆ ಚಿಂತಿಸಿ ಫಲವೇನು! ಪ್ರಕೃತ ವತ್ಸರಾಜನು ಅಸಾಮಾನ್ಯ ಪರಾಕ್ರಮಿ ಹಾಗೂ ಬುದ್ಧಿವಂತ. ಅವನು ಸೆರೆ ಸಿಕ್ಕಿದ್ದೇ ಬಹಳ ಕಷ್ಟದಲ್ಲಿ. ಹಾಗೆ ಸೆರೆ ಸಿಕ್ಕಿದಾಗ ಮಹಾಸೇನನ ಅಮಾತ್ಯರು ತುಂಬಾ ಜಾಗರೂಕರಾಗಿ ಅವನನ್ನು ಬಂಧನದಿಂದ ತಪ್ಪಿಸಕೊಳ್ಳದಂತೆ ನಿಗಾ ವಹಿಸಬೇಕಿತ್ತು. ಈಗ ಯೌಗಂಧರಾಯಣನ ಅಪಾರ ಸಾಹಸದ ಫಲದಿಂದ ವತ್ಸರಾಜನು ಪರಾರಿಯಾಗಿದ್ದಾನೆ. ಈಗ ಗಡಿಗಳನ್ನು ಮುಚ್ಚಿ ಏನು ತಾನೇ ಮಾಡಲು ಸಾಧ್ಯ? ನಾವೂ ತುಂಬಾ ಸಲ ಹೀಗೆ ಮಾಡುತ್ತೇವೆ. ಸಮೀಪದಲ್ಲಿದ್ದಾಗ ವ್ಯಕ್ತಿಗಳು ಅಥವಾ ವಸ್ತುಗಳ ಬಗೆಗೆ ನಿಗಾ ವಹಿಸದೆ ಹೋದ ಮೇಲೆ ಪರಿತಪಿಸುತ್ತೇವೆ. ಬೆಂಕಿ ಹರಡುವುದು ಬಹುಬೇಗವಾದ ಕಾರಣ ವತ್ಸರಾಜನನ್ನು ಹೋಲಿಸಲಾಗಿದೆ. ಅವನೂ ಅಲ್ಪಕಾಲದಲ್ಲೇ ಸೆರೆಮನೆಯವರ ಮನಗೆದ್ದು ತಪ್ಪಿಸಿಕೊಂಡಿದ್ದನು. ರತ್ನ ಏಕೆಂದರೆ ಅವನು ಸೆರೆ ಸಿಗುವುದು ಬಹಳ ಕಷ್ಟ ಎಂಬ ಅರ್ಥದಲ್ಲಿ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩