ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*मतिमान्विनयप्रमाथिन: समपपेक्षेत समुन्नतिं द्विष: । सुजय: खलु तादृगन्तरे विपदन्ता ह्यविनीतसम्पद: ।।*
_ಧರ್ಮಜನ ಮಾತು. ಬುದ್ಧಿವಂತನಾದ ವ್ಯಕ್ತಿ ಅವಿನೀತನಾದ ಶತ್ರುವಿನ ಅಭ್ಯುದಯದ ಬಗೆಗೆ ಎಂದಿಗೂ ಚಿಂತಿಸಬಾರದು. ಏಕೆಂದರೆ ಅಂತಹ ಶತ್ರುವನ್ನು ಪೂರ್ಣ ಏಳಿಗೆ ಹೊಂದುವ ಮೊದಲೇ ಸುಲಭವಾಗಿ ಗೆಲ್ಲಬಹುದು. ಉದ್ಧಟತನದಿಂದ ಸಂಪಾದಿಸಿದ ಐಶ್ವರ್ಯವೆಲ್ಲವೂ ದುಃಖಕ್ಕೆ ಕಾರಣವಾಗುತ್ತದೆ ಅಥವಾ ವಿಪತ್ತನ್ನೇ ಬರಸೆಳೆಯುತ್ತದೆ. ಲಕ್ಷ್ಮಿಯನ್ನು ಸಂಪಾದಿಸಬೇಕು. ಆದರೆ ಸಂಪಾದಿಸುವ ಕಾಲದಲ್ಲಿ ಯಾರೊಡನೆಯೂ ಅವಿನೀತನಾಗಿ ಅಥವಾ ಕೆಟ್ಟ ಮಾತುಗಳಿಂದ ಅಥವಾ ತಿರಸ್ಕಾರದಿಂದ ಅಥವಾ ಅಹಂಕಾರದಿಂದ ಮೆರೆದು ವ್ಯವಹರಿಸಬಾರದು. ಹಾಗೆ ಅವಿನಯದಿಂದ ಸಂಪಾದಿಸಿದ ಸಂಪತ್ತು ಬಹಳ ಕಾಲ ನಮ್ಮ ಬಳಿ ಉಳಿಯಲಾರದು. ಉಳಿದರೂ ಅದು ನಮ್ಮ ಅವನತಿಗೇ ಕಾರಣವಾಗುತ್ತದೆ. ಪ್ರಕೃತ ದುರ್ಯೋಧನನ ವರ್ತನೆ ಅಹಂಕಾರದಿಂದ ಹಾಗೂ ವಂಚನೆಯಿಂದ ಕೂಡಿದೆ. ಹೀಗಿರುವಾಗ ಅವನ ಬಳಿ ರಾಜ್ಯಲಕ್ಷ್ಮಿ ಎಷ್ಟು ಕಾಲ ಉಳಿಯಬಲ್ಲದು! ಅವನು ಬಹುಕಾಲ ರಾಜನಾಗಿ ಉಳಿಯಲಾರ. ಅವನ ಅವನತಿಯ ಬಗೆಗೆ ನಾವು ಚಿಂತಿಸುವ ಅವಶ್ಯಕತೆ ಇಲ್ಲ. ಅವನ ಬುದ್ಧಿಯೇ ಅವನನ್ನು ಮುಳುಗಿಸುತ್ತದೆ. ಎಷ್ಟು ಸತ್ಯದ ಮಾತು. ಸಂಪಾದಿಸುವ ಭರದಲ್ಲಿ ನಾವು ಮೈಮರೆತು ಉಳಿದವರ ಮೇಲೆ ಸವಾರಿ ಮಾಡಿ ಅಥವಾ ತಿರಸ್ಕರಿಸಿ ಮುಂದೆ ಹೊರಟರೆ ಮುಂದೊಂದು ದಿನ ಅದು ನಮಗೇ ಮಾರಕವಾಗಬಹುದು. ಹಾಗಾಗಿ ಜಾಗರೂಕತೆಯಿಂದ ಲಕ್ಷ್ಮಿಯನ್ನು ಸಂಗ್ರಹಿಸಬೇಕು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ