ರಾಮಾಯಣ ೯೦

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೦

*ತಚ್ಚ ಮಿಥ್ಯಾಪ್ರಲಪ್ತಂ ಮಾಂ ಪ್ರಧಕ್ಷ್ಯತಿ ನ ಸಂಶಯಃ ಯನ್ಮಯಾ ನ ಕೃತೋ ರಾಜಾ ರಾಕ್ಷಸಾನಾಂ ವಿಭೀಷಣಃ*

_ರಾಮನ ಮಾತು. ವಿಭೀಷಣನನ್ನು ರಾಕ್ಷಸರ ರಾಜನನ್ನಾಗಿ ನಾನು ಮಾಡಲಿಲ್ಲ. ನನ್ನ ಮಾತು ಸುಳ್ಳಾಯಿತು‌. ನಿಸ್ಸಂದೇಹವಾಗಿ  ಆ ಸುಳ್ಳು ನನ್ನನ್ನು ದಹಿಸದೆ ಬಿಡದು. ಸುಳ್ಳಿನ ಮೇಲಿದ್ದ ಹೆದರಿಕೆ ಇಲ್ಲಿ ಗೋಚರವಾಗುತ್ತದೆ. ನಾವು ನಿತ್ಯವೂ ಹತ್ತು ಅಥವಾ ಹೆಚ್ಚು ಸುಳ್ಳುಗಳನ್ನು ಸರಾಗವಾಗಿ ನುಡಿಯುತ್ತೇವೆ. ಸುಳ್ಳು ಪ್ರತಿಜ್ಞೆಗಳನ್ನು ಧಾರಾಳವಾಗಿ ನುಡಿಯುತ್ತೇವೆ.  ರಾಮನ ಧರ್ಮನಿಷ್ಠೆ ನೋಡಿದರೆ ಆಶ್ಚರ್ಯವಾಗುತ್ತದೆ. ಇನ್ನೂ ಲಕ್ಷ್ಮಣ ಸತ್ತಿಲ್ಲ. ಆದರೂ ಭೂತದ ತನ್ನ ಮಾತು ಕೆಟ್ಟರೆಂಬ ಚಿಂತೆ ಅವನನ್ನು ಬಾಧಿಸುತ್ತಿದೆ._

*ತಾನಾರ್ತಾನ್ನಷ್ಟಸಂಜ್ಞಾಶ್ಚ ಪರಾಸೂಂಶ್ಚ ಬೃಹಸ್ಪತಿಃ ವಿದ್ಯಾಭಿರ್ಮಂತ್ರಯುಕ್ತಾಭಿರೋಷಧೀಭಿಶ್ಚಿಕಿತ್ಸತಿ*

_ಸುಷೇಣನು ಸುಗ್ರೀವನಿಗೆ  ಸಮಾಧಾನಿಸುತ್ತಾ ಹೇಳುವ ಮಾತು. ಹಿಂದೆ ದೇವಾಸುರಯುದ್ಧದಲ್ಲಿ ಅಸುರರು ಮಾಯಾಬಲದಿಂದ ಅದೃಶ್ಯರಾಗಿ ದೇವತೆಗಳನ್ನು ಕೊಲ್ಲುತ್ತಿದ್ದರು. ಆಗ ಬೃಹಸ್ಪತಿಯು ಮೂರ್ಛಿತರಾಗಿಯೂ, ಮೃತರಾಗಿಯೂ ಬಿದ್ದಿರುವ ಅವರ ಉಜ್ಜೀವನಕ್ಕೆ ಮಂತ್ರಶ್ರೇಷ್ಠವಾದ ಮೃತ್ಯು ಸಂಜೀವಿನಿ ವಿದ್ಯೆಯಿಂದಲೂ, ಹಲವು ಬಗೆಯ ಮೂಲಿಕೆಗಳಿಂದಲೂ ಬದುಕಿಸುತ್ತಿದ್ದರು. ಆ ದಿವ್ಯ ಮೂಲಿಕೆಗಳು ಕ್ಷೀರಸಮುದ್ರದ ಬಳಿಯಲ್ಲಿವೆ. ಕೂಡಲೇ ವಾನರ  ವೀರರು ಹೋಗಿ ತರಲಿ ಎಂದನು. ಬ್ರಹ್ಮ ನಿರ್ಮಿತವಾದ ಸಂಜೀವಕರಣಿ ಮತ್ತು ವಿಶಲ್ಯಕರಣಿ ಎಂಬ ಎರಡು ದಿವ್ಯ ಔಷಧೀಯ ಸಸ್ಯಗಳಿವೆ. ಅಮೃತ ಮಥನ ನಡೆದ ಶ್ರೇಷ್ಠವಾದ ಆ ಕ್ಷೀರಸಮುದ್ರದ ಬಳಿ ಚಂದ್ರ ಮತ್ತು ದ್ರೋಣ ಎಂಬ ಎರಡು ಪರ್ವತಗಳಿವೆ. ರಾಜನೇ, ವಾಯುಸುತನು ಈ ಕೂಡಲೇ ಅಲ್ಲಿಗೆ ಹೋಗಿ ಬರಲಿ ಎಂದನು. ಇಲ್ಲಿ ಉಲ್ಲೇಖಿಸಲಾದ ಚಂದ್ರ ಮತ್ತು ದ್ರೋಣ ಪರ್ವತ ಈಗಿನ ಬಾಬಾಬುಡನ್ ಗಿರಿ. ಇದು ಚಿಕ್ಕಮಗಳೂರಿನ ಸಮೀಪದಲ್ಲಿ ಇದೆ. ಅದರ ಸಮೀಪದ ಸಮುದ್ರ ಅಂದರೆ ಅರಬ್ಬೀ ಸಮುದ್ರ. ಇದರಲ್ಲೇ ಸಮುದ್ರ ಮಂಥನ ನಡೆದದ್ದೆಂದು ಊಹಿಸಬಹುದು. ಇಲ್ಲಿ ಕ್ಷೀರ ಅಂದರೆ ನೀರಿಗೆ ಪರ್ಯಾಯ ನಾಮ ಹೊರತು ಹಾಲಲ್ಲ. ಹಾಲಿನ ಬಣ್ಣದ ನೀರು ಎಂದಾದರೂ ಹೇಳಬಹುದೇ ಹೊರತು ಹಾಲಿನ ಸಮುದ್ರವಲ್ಲ. ಪ್ರಕೃತ ಈ ಸಂಜೀವಕರಣಿ ಮತ್ತು ವಿಶಲ್ಯಕರಣಿ ಗಿಡಮೂಲಿಕೆ ಬಗೆಗೆ ಅನೇಕರು ಸಂಶೋಧನೆ ನಡೆಸುತ್ತಿದ್ದಾರೆ.ಮೊದಲನೇ ಮೂಲಿಕೆ ಬದುಕಿಸಲು ಎರಡನೇ ಮೂಲಿಕೆ ಅಂಗಾಂಗಳ ಜೋಡಣೆಗೆ ಉಪಯೋಗ ಆಗುವಂತಹದು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩