ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*उपकारकमायतेर्भृशं प्रसव: कर्मफलस्य भूरिण: । अनपायि निबर्हणं द्विषां न तितिक्षासममस्ति साधनम् ।।*

_ಯುಧಿಷ್ಠಿರನ ಮಾತು. ಭವಿಷ್ಯದಲ್ಲಿ ತುಂಬಾ ಉಪಕಾರಕವಾದುದು, ಅನೇಕ ಕಾರ್ಯಗಳ ಸಾಧನೆಗೆ ಜನಕವಾದುದು, ಯಾವುದೇ ರೀತಿಯ ಅಪಾಯವನ್ನು ತಂದು‌ಕೊಡದಿರುವುದು, ಶತ್ರುಗಳನ್ನು ತನ್ನಷ್ಟಕ್ಕೇ ನಾಶವಾಗುವಂತೆ ಮಾಡುವ ಶಾಂತಿಗೆ ಸಮನಾದ ಸಾಧನ ಲೋಕದಲ್ಲಿ ವಲ ಬೇರೊಂದಿಲ್ಲ.   ಈಗ ಕೋಪಗೊಳ್ಳದೆ ಶಾಂತರಾಗಿದ್ದರೆ ಮುಂದೆ ಯಾವರೀತಿಯಲ್ಲಾದರೂ ಉಪಕಾರವನ್ನು ಉಂಟುಮಾಡುತ್ತದೆ. ಶಾಂತಿಯು ಅನೇಕ ಸಮಯಗಳಲ್ಲಿ ಅಥವಾ ಅನೇಕ ವಿಷಯಗಳಲ್ಲಿ ಮಹತ್ತರವಾದ ಪ್ರಯೋಜನವನ್ನು ಕರುಣಿಸುತ್ತದೆ. ಶತ್ರುವು ಉರಿದು ಬೀಳುವಾಗ ಸುಮ್ಮನಿದ್ದರೆ ಅವನೇ ತನ್ನ ಕೃತ್ಯಕ್ಕೆ ನಾಚಿಕೊಳ್ಳುತ್ತಾನೆ. ಹೀಗೆ  ಮನದ ಶಾಂತತೆ ಅಥವಾ ಕ್ಷಮಾಗುಣಕ್ಕೆ ಲೋಕದಲ್ಲಿ ಸಾಟಿಯಾಗಬಹುದಾದ ಇನ್ನೊಂದು ಗುಣ ಯಾವುದೂ ಇಲ್ಲ. ಹಾಗಾಗಿ ಭೀಮ ಶಾಂತನಾಗಿ ಶತ್ರುಮಥನವನ್ನು ಯೋಚಿಸು. ನೀತಿಶಾಸ್ತ್ರದಲ್ಲೂ ಕ್ಷಮಾಗುಣದ ಮಹತ್ವ ಹೀಗೆ ಹೇಳಿದ್ದಾರೆ - *ಕ್ಷಮಾ ಶಸ್ತ್ರಂ ಕರೇ ಯಸ್ಯ ದುರ್ಜನಃ ಅತೃಣೇ ಪತಿತೋ ವಹ್ನಿಃ ಸ್ವಯಮೇವೋಪಶಾಮ್ಯತಿ* ಯಾರ ಬಳಿ ಕ್ಷಮೆಯೆಂಬ ಶಸ್ತ್ರವಿದೆಯೋ ಅವರನ್ನು ದುರ್ಜನರಾದರೂ ಏನು ಮಾಡಿಯಾರು? ಯಾವ ರೀತಿಯ ಕೇಡಿಗೂ ಕ್ಷಮೆ ಕೊಡುವನೆಂದಾದ ಮೇಲೆ ಕೇಡು ಬಗೆಯುವರೇ ಸುಮ್ಮನಾಗುತ್ತಾರೆ. ಉದಾಹರಣೆಗೆ ಬೆಂಕಿಯ ಕಿಡಿ ಹುಲ್ಲಿನ ಬಣವೆಯ ಮೇಲೆ ಬಿದ್ದಾಗ ಮಾತ್ರ ಹೊತ್ತಿ ಉರಿಯುತ್ತದೆ. ಖಾಲಿ ನೆಲದ ಮೇಲೆ ಬಿದ್ದ ಕಿಡಿ ತಾನೇ ತಾನಾಗಿ ಆರಿಹೋಗುತ್ತದೆ. ನಾವೂ ಈ ಕ್ಷಮೆಯನ್ನು ಆಶ್ರಯಿಸೋಣ. ಶತ್ರುಗಳಿರಲಿ ನಮ್ಮ ಆತ್ಮೀಯರು, ಅಣ್ಣ ತಮ್ಮಂದಿರು, ಅಪ್ಪ ಅಮ್ಮಂದಿರು, ಗುರು ಹಿರಿಯರಲ್ಲೇ ನಾವು ಕ್ಷಮೆ ತೋರಲು ಹಿಂಜರಿಯುವೆವು. ಅವರಲ್ಲಾದರೂ ನಮ್ಮ ಸಿಟ್ಟು ಸೆಡವುಗಳನ್ನು ತೋರದಿರೋಣ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩