ರಾಮಾಯಣ ೮೬
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೬
*ವಿಭೀಷಣಸ್ಯ ಚೈಶ್ವರ್ಯಂ ಭವಿಷ್ಯತಿ ಹತೇ ತ್ವಯಿ ನ ಚೇತ್ಸತ್ಕೃತ್ಯ ವೈದೇಹೀಂ ಪ್ರಣಿಪತ್ಯ ಪ್ರದಾಸ್ಯಸಿ*
_ರಾಮನು ಅಂಗದನನ್ನು ದೂತನಾಗಿ ಕಳುಹಿಸಿ ಹೇಳಿಕಳುಹಿಸುವ ಮಾತು. ರಾವಣಾ, ವೈದೇಹಿಯನ್ನು ಸತ್ಕರಿಸಿ ಗೌರವ ಪೂರ್ವಕವಾಗಿ ಕಳುಹಿಸಿಕೊಟ್ಟರೆ ಬದುಕುಳಿಯುವೆ. ಇಲ್ಲದಿರೆ ನೀನು ನಾಶವಾಗಿ ವಿಭೀಷಣನ ಪಾಲಾಗುವುದು ನಿನ್ನೆಲ್ಲಾ ಸಂಪತ್ತು. ರಾವಣನು ಸೀತೆಯನ್ನು ಕೊಡುವುದಾದರೂ ಸತ್ಕಾರಸಹಿತ ಕಳುಹಿಸಬೇಕು. ಏಕೆಂದರೆ ಮೊದಲು ಕಳ್ಳತನದಲ್ಲಿ ಅಪಹರಿಸಿದ್ದು. ಅದಕ್ಕೆ ಪ್ರಾಯಶ್ಚಿತ್ತ ರೂಪವಾಗಿ ಈಗ ಗೌರವಪೂರ್ವಕ ಕಳುಹಿಸು. ಆಗ ಮಾತ್ರ ರಾಮನಿಗೂ- ಸೀತೆಗೂ ಸಮಾಧಾನ. ಸುಮ್ಮನೆ ಕಳುಹಿಸುವುದಲ್ಲ. ಶತ್ರುವಿನ ಜೊತೆ ಸಾಮದಲ್ಲಿ ವ್ಯವಹರಿಸುವುದಾದರೂ ಹೇಗೆ ಎಂಬ ವಿಷಯದಲ್ಲಿ ರಾಮನ ಜಾಣ್ಮೆ ಅರಿವಾಗುತ್ತದೆ._
*ಕಾಂಚನಾನಿ ಪ್ರಮದ್ನಂತಸ್ತೋರಣಾನಿ ಪ್ಲವಂಗಮಾಃ* *ಹೇಮಕೋಣಾಹತಾ ಭೀಮಾ ರಾಕ್ಷಸಾನಾಂ ಸಮಂತತಃ*
_ಲಂಕೆಯ ಸುವರ್ಣಯುಗ ಆ ಕಾಲ. ಕೋಟೆಯ ಒಳಗಡೆ ಇದ್ದ ಪುರದ್ವಾರಗಳೆಲ್ಲ ಸುವರ್ಣಮಯ. ಬಹುಶಃ ಈಗಿನಂತೆ ಸುವರ್ಣಲೇಪಿತವೂ ಇರಬಹುದು. ಅವುಗಳನ್ನೆಲ್ಲ ವಾನರರು ಪುಡಿಗೈದರು. ಅನಂತರ ರಾವಣನ ಆಜ್ಞೆಯಂತೆ ಲಕ್ಷಗಟ್ಟಲೆ ರಾಕ್ಷಸರು ರಣಭೇರಿಗಳನ್ನು ಚಿನ್ನದ ಕೋಲುಗಳಿಂದ ಬಾರಿಸಿದರು. ಒಂದು ಭೇರಿಗೆ ಎರಡು ಕೋಲುಗಳ ಲೆಕ್ಕದಲ್ಲಿ ತೆಗೆದುಕೊಂಡರೂ ಚಿನ್ನದ ಕೋಲುಗಳೇ ಲಕ್ಷ ದಾಟುತ್ತವೆ. ಮರದ ಕೋಲುಗಳಿಗೆ ಚಿನ್ನದ ಹೊದಿಕೆಯೆಂದಾದರೂ ಚಿನ್ನದ ನಿಕ್ಷೇಪಗಳು ಎಷ್ಟಿದ್ದವೋ ಏನೋ ಪೂರ್ಣ ಲಂಕೆಯಲ್ಲಿ! ಇನ್ನು ರಾಕ್ಷಸರ ಬತ್ತಳಿಕೆಗಳು, ಕವಚಗಳು, ಅಯುಧಗಳ ಮುಂದಿನ ಭಾಗ ಇವೆಲ್ಲವೂ ಸುವರ್ಣಖಚಿತವಾಗಿತ್ತು. ಇದೆಲ್ಲವನ್ನೂ ಆಲೋಚಿಸಿದಾಗ ಬಹುಶಃ ಈಗ ವಿಶ್ವದಲ್ಲಿ ಲಭ್ಯವಿರುವ ಚಿನ್ನದ ಮುಕ್ಕಾಲು ಪಾಲು ಲಂಕೆಯಲ್ಲಿ ರಾವಣನ ಕಾಲದಲ್ಲಿತ್ತು._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ