ಪ್ರತಿಜ್ಞಾ ಯೌಗಂಧರಾಯಣ ೨೦
🔥 ಪ್ರತಿಜ್ಞಾ ಯೌಗಂಧರಾಯಣ 🔥೨೦
*गृहा न निर्वान्ति मया प्रदीपितास्तथैव तावद्धृदयानि मन्त्रिणाम् । इयं तु पूजा मम दण्डधारिण: कृतापराधस्य हि सत्कृतिर्वध: ।।*
_ಯೌಗಂಧರಾಯಣನ ಮಾತು. ಮಹಾಸೇನನ ಬಂಧನದಲ್ಲಿ ಇದ್ದಾನೆ ಯೌಗಂಧರಾಯಣ. ಮಹಾಸೇನನು ಅವನ ಸತ್ಕಾರಕ್ಕೆಂದು ಒಂದು ಬಂಗಾರದ ಪಾತ್ರೆಯನ್ನು ಸೇವಕರ ಬಳಿ ಕಳುಹಿಸುತ್ತಾನೆ. ಆಗ ಅವನ ಮಾತು- ಶತ್ರುವಿನ ಈ ಪಟ್ಟಣದಲ್ಲಿ ನಾನು ಯುದ್ಧದ ಸಮಯದಲ್ಲಿ ಯಾವ ಯಾವ ಮನೆಗಳಿಗೆ ಬೆಂಕಿ ಇಟ್ಟೆನೋ ಅದಾವುದೂ ಇನ್ನೂ ಆರಿಲ್ಲ. ಅದರ ಕಿಚ್ಚು ಇಲ್ಲಿನ ಜನಗಳಲ್ಲಿ ಮನದಲ್ಲಿ ಹೊತ್ತಿ ಉರಿಯುತ್ತಿದೆ. ಅಷ್ಟಲ್ಲದೇ ವತ್ಸರಾಜನನ್ನು ಬಿಡಿಸಲು ನಾನು ಮಾಡಿದ ಉಪಾಯಗಳಿಂದ ಪರಿತಪಿಸಿದ ಅಥವಾ ಒದ್ದಾಡಿದ ಮಹಾಸೇನನ ಮಂತ್ರಿಗಳಾರೂ ಶಾಂತರಾಗಿಲ್ಲ. ಅವರಿಗೆಲ್ಲ ನನ್ನ ಮೇಲೆ ಸಿಟ್ಟು ಹಾಗೆಯೇ ಜಾಗೃತವಾಗಿದೆ. ಹೀಗಿರುವಾಗ ನನಗೆ ಶಿಕ್ಷೆ ವಿಧಿಸಬೇಕಾದ ಮಹಾಸೇನನು ಹೀಗೆ ಸತ್ಕರಿಸುವುದು ಉಚಿತವೇ? ನನಗೆ ಈಗ ವಿಧಿಸಬೇಕಾದ ಪೂಜೆ ವಧೆಯೇ ಸರಿ. ಏಕೆಂದರೆ ಅಪರಾಧಿಗೆ ಶಿಕ್ಷೆ ವಿಧಿಸುವುದು ಬಿಟ್ಟು ಸತ್ಕಾರ ಎಲ್ಲಾದರೂ ಕಂಡುಬರುವುದೇ? ಯೌಗಂಧರಾಯಣನ ಪ್ರಾಮಾಣಿಕ ಮಾತು. ಯಾವ ನರನೂ ತನಗೆ ಶಿಕ್ಷೆ ಆಗುವುದೆಂದಾಗ ತಪ್ಪಿಸಿಕೊಳ್ಳಲು ಯೋಚಿಸುತ್ತಾನೆ. ಆದರೆ ಯೌಗಂಧರಾಯಣ ಹಾಗಲ್ಲ. ತನಗೆ ನಿಜವಾಗಿ ಶಿಕ್ಷೆಯನ್ನೇ ವಿಧಿಸಬೇಕು.ಏಕೆ ಸತ್ಕಾರ ಎಂದು ಶತ್ರುಪಕ್ಷದವರನ್ನೇ ಪ್ರಶ್ನಿಸುತ್ತಾನೆ. ಧೈರ್ಯಶಾಲಿಗಳ ಮಾತಿಗೆ ಉತ್ತಮ ಉದಾಹರಣೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ