ರಾಮಾಯಣ ೯೧

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೧

*ತೇಜೋ ವೀರ್ಯಂ ಬಲಂ ಚೌಜಃ ಉತ್ಸಾಹಶ್ಚ ಮಹಾಗುಣಃ ಪ್ರದರ್ಶನಂ ಚ ಬುದ್ಧಿಶ್ಚ ಸ್ಮೃತಿಶ್ಚ ದ್ವಿಗುಣಾ ತಯೋಃ*

_ಸರ್ಪಾಸ್ತ್ರ ಬಂಧನಕ್ಕೊಳಗಾದ ರಾಘವರಲ್ಲಿ ರಾಮನು ಎಚ್ಚರಗೊಂಡು ಲಕ್ಷ್ಮಣನಿಗಾಗಿ ದುಃಖಿಸುತ್ತಿದ್ದಾಗ ಹಾಗೂ ಕಪಿಗಳೆಲ್ಲ ಬೇರೆ ಮಾರ್ಗೋಪಾಯ ಚಿಂತಿಸುತ್ತಿದ್ದ ಸಮಯದಲ್ಲಿ ಒಮ್ಮೆಯೇ ಬಿರುಗಾಳಿ ಬಂದಂತಾಯಿತು. ಮರಗಳ ಕೊಂಬೆಗಳನೇಕ ಮುರಿದುಬಿದ್ದವು. ಕೆಲವು ಬೇರುಸಹಿತ ಸಮುದ್ರಕ್ಕೆ ಹಾರಿದವು. ಸರ್ಪಗಳು  ಹೆದರಿದವು. ಜಂತುಗಳು ಸಮುದ್ರಮಧ್ಯದಲ್ಲಿ ಅಡಗಿದವು. ಹೀಗೆ ಕಾಣಿಸಿಕೊಂಡವನು ವೈನತೇಯ. ಅವನು ಬಂದೊಡನೆಯೇ ರಾಮ ಲಕ್ಷ್ಮಣರನ್ನು ಆವರಿಸಿದ್ದ ಸರ್ಪಗಳು ಓಡಿಹೋದವು. ಶರರೂಪದ ಮಹಾಸರ್ಪಗಳು ಅವು. ಗರುಡನು ಅವರನ್ನು ಮುಟ್ಟಿ ಮೈದಡವಿದ ಕ್ಷಣದಲ್ಲೇ ಅವರ ದೇಹಗಳು ಚಿನ್ನದಂತೆ ಹೊಳಪೇರಿ ತೇಜಸ್ಸು-ವೀರ್ಯ-ಬಲ-ಓಜಸ್ಸು- ಉತ್ಸಾಹ- ವಿವೇಚನಾ ಶಕ್ತಿ- ಬುದ್ಧಿ- ಸ್ಮರಣ ಶಕ್ತಿ ಮುಂತಾದ ಮಹಾಗುಣಗಳು ಇಮ್ಮಡಿಸಿದವು. ದೇವತೆಗಳ ಸಾಮೀಪ್ಯವೇ ಅಂತಹದು. ಅದು ಸಿದ್ಧಿಸಿದ ಕೂಡಲೇ ಅವರ ಗುಣಗಳೇ ನಮ್ಮನ್ನು ಆವರಿಸುತ್ತವೆ. ಗರುಡನು ಅವರನ್ನು ಆಲಂಗಿಸಿ, ರಾಕ್ಷಸರ ಬಗೆಗೆ ಎಚ್ಚರಿಕೆ ಕೊಟ್ಟು ತೆರಳಿದನು._

*ನೇಮಂ ಮೋಕ್ಷಯಿತುಂ‌ ಶಕ್ತಾಃ ಶರಬಂಧಂ ಸುದಾರುಣಮ್ ಮಾಯಾಬಲಾದಿಂದ್ರಜಿತಾ ನಿರ್ಮಿತಂ ಕ್ರೂರಕರ್ಮಣಾ*

_ಗರುಡನು ಹೀಗೆ ನುಡಿಯುತ್ತಾನೆ ಕೂಡ- ಅಸುರರಾಗಲಿ, ದಾನವರಾಗಲಿ, ಗಂಧರ್ವರಾಗಲಿ, ದೇವೇಂದ್ರನೇ ಆಗಲಿ ಈ ನಾಗಪಾಶವನ್ನು ಬಿಡಿಸಲು ಶಕ್ತರಿಲ್ಲ. ಇಂದ್ರಜಿತುವು ಮಾಯಾಬಲದಿಂದ ಇದನ್ನು ನಿರ್ಮಿಸಿದ್ದಾನೆ. ಇವರೆಲ್ಲರೂ ಕದ್ರುವಿನ ಮಕ್ಕಳು. ಹಾಗಾಗಿ ಇನ್ನು ಮುಂದೆ ಜಾಗೃತೆಯಾಗಿರಿ._


http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩