ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*चिचीषतां जन्मवतामलघ्वीं यशोवतंसामुभयत्र भतिम् । अभ्यर्हिता बन्धुषु तुल्यरूपा वृत्तिर्विशेषेण तपोधनानाम् ।।*

_ವ್ಯಾಸರ ಮಾತು ಧರ್ಮಜನ ಕುರಿತು. ಲೋಕದಲ್ಲಿ ಪ್ರತಿಯೊಬ್ಬರೂ ಇಹ-ಪರದ ಶ್ರೇಯಸ್ಸನ್ನು ಬಯಸುವುದಾದರೆ ಎಲ್ಲರೊಡನೆ ಪಕ್ಷಪಾತವಿಲ್ಲದ ವರ್ತನೆ ತೋರಬೇಕು‌. ಒಂದೊಮ್ಮೆ ಇಹದಲ್ಲಿ ಪಕ್ಷಪಾತದ ವರ್ತನೆ ಒಳಿತನ್ನು ಉಂಟುಮಾಡಿದರೂ ಪರದಲ್ಲಿ ದುಃಖವನ್ನು ಕರುಣಿಸುತ್ತದೆ. ಕಾಲಾಂತರದಲ್ಲಿ ನಮ್ಮ ಕೀರ್ತಿಯೆಂಬ ಕನ್ನಡಿಗೆ ಮಸಿಯಂತೆ ಅಡ್ಡ ಬರುತ್ತದೆ. ಹಾಗಾಗಿ ಶ್ರೇಯಸ್ಸನ್ನು ಬಯಸುವ ವ್ಯಕ್ತಿಯು ಎಂದಿಗೂ ತಮ್ಮವರು-ಪರರು, ಶ್ರೀಮಂತರು-ಬಡವರು,ನಮ್ಮ ಜಾತಿ-ಅನ್ಯ ಜಾತಿ, ಈ ಧರ್ಮ-ಆ ಧರ್ಮ, ಬಿಳಿ-ಕಪ್ಪು ಮೊದಲಾದ ಪಕ್ಷಪಾತವನ್ನು ಎಂದಿಗೂ ತೋರಬಾರದು. ಹಾಗೆ ತೋರಿದರೆ ಅವರು ಉನ್ನತಿಗೆ ಏರಲಾರರು ಅಥವಾ ಸಾರ್ವಕಾಲಿಕ ಶ್ರೇಯಸ್ಸನ್ನು ಸಂಪಾದಿಸಲಾರರು. ತಪಸ್ವಿಗಳಿಗೆ ಇದು ಸಾಮಾನ್ಯರಿಗಿಂತಲೂ ಮಹತ್ವದ ವಿಷಯ. ತಪಸ್ವಿಯ ಲಕ್ಷಣವೇ ಸರ್ವಸಮತ್ವ. ಎಲ್ಲರಲೂ ಒಮ್ಮನಸ್ಸಿನಿಂದ ವ್ಯವಹರಿಸುವವನೇ ತಪಸ್ವಿ ಎನಿಸಿಕೊಳ್ಲುತ್ತಾನೆ. ಹಾಗಿರುವಾಗ ನಾನು ನಿಮ್ಮಲ್ಲಿ ಮತ್ತು ಕೌರವರಲ್ಲಿ ಭಿನ್ನ ವರ್ತನೆಯನ್ನು ತೋರಲು ಸಾಧ್ಯವಿಲ್ಲ. ಇಬ್ಬರೂ ನನಗೆ ಮೊಮ್ಮಕ್ಕಳು. ಇಬ್ಬರಲ್ಲಿ ಒಬ್ಬರ ಪರವಾಗಿ, ಇನ್ನೊಬ್ಬರ ವಿರುದ್ದವಾಗಿ ನಡೆದರೆ ನನ್ನ ತಪಸ್ವಿತನ ಹೊರಟುಹೋದೀತು. ಹಾಗಾಗಿ ನನ್ನಿಂದ ನಿನಗೆ ಮಾತ್ರ ಒಳಿತಾಗುವ ಬಯಕೆ ನಿನಗಿದ್ದರೆ ಬಿಟ್ಟುಬಿಡು ಎಂದು ಧರ್ಮಜನಿಗೆ ವ್ಯಾಸರು ನುಡಿದರು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩