ರಾಮಾಯಣ ೧೦೨

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೨

*ಇದಂ ತದ್ಬ್ರಹ್ಮಣೋ ಘೋರಂ‌ ವಾಕ್ಯಂ ಮಾಮಭ್ಯುಪಸ್ಥಿತಮ್ ಮಾನುಷೇಭ್ಯೋ ವಿಜಾನೀಹಿ ಭಯಂ ತ್ವಮಿತಿ ತತ್ತಥಾ*

_ರಾವಣನು ಅಮಾತ್ಯರೊಡನೆ ಹೇಳುವ ಮಾತು. ರಾಮನೊಡನೆ ಸೆಣಸಾಟದಲ್ಲಿ ಹೀನಾಯವಾಗಿ ಸೋತ ರಾವಣನು ಪರಿಷತ್ತಿನ ಸಭೆ ಕರೆದು ತನ್ನ ಮನದ ದುಗುಡವನ್ನು ಅವರೆದುರು ತೆರೆದಿಡುತ್ತಿದ್ದಾನೆ. ಮಿತ್ರರೇ, ನಾನು ಮಾಡಿದ ತಪಸ್ಸೆಲ್ಲವೂ ವ್ಯರ್ಥವಾಯಿತು.  ದೇವೆಂದ್ರನಿಗೆ ಸರಿಸಮಾನವಾಗಿ ಮೆರೆಯುತ್ತಿದ್ದ ನಾನು ಒಬ್ಬ ಮಾನವನಿಂದ ಪರಾಜಿತನಾದೆ. ಬ್ರಹ್ಮನ ಹಿಂದಿನ ಮಾತು ನನಗೀಗ ನೆನಪಾಗುತ್ತಿದೆ. ದೇವ ದಾನವ ಗಂಧರ್ವ ಯಕ್ಷ ರಾಕ್ಷಸ ಪನ್ನಗರಿಂದಲೂ ನಿನ್ನನ್ನು ಸಂಹರಿಸುವುದು‌ ಸಾಧ್ಯವಿಲ್ಲ. ಆದರೆ ಮನುಷ್ಯರಿಂದಲೇ ನಿನಗೆ ಭಯ ಒದಗುವುದೆಂಬುದನ್ನು ತಿಳಿ. ಈ ಸಂದರ್ಭದಲ್ಲಿ ರಾವಣ ತನಗೆ ಹಿಂದೆ ಒದಗಿದ ಅನೇಕ ಶಾಪಗಳನ್ನೂ ನೆನಪು ಮಾಡಿಕೊಳ್ಳುತ್ತಾನೆ._

*ಉತ್ಪತ್ಸ್ಯತೇ ಹಿ ಮದ್ವಂಶೇ ಪುರುಷೋ ರಾಕ್ಷಸಾಧಮ ನಿಹನಿಷ್ಯತಿ ಸಂಗ್ರಾಮೇ ತ್ವಾಂ ಕುಲಾಧಮ ದುರ್ಮತೇ*

_ಹಿಂದೆ ಅನರಣ್ಯನನ್ನು  ಎದುರಿಸಿ ಅವನನ್ನು ಕೊಲ್ಲುವ ಸಂದರ್ಭದಲ್ಲಿ ಅವನು ರಾವಣನಿಗೆ ಹೀಗೆ ಶಪಿಸಿದ್ದನು. ಈಗೇನೋ ಮಾಯಾಬಲದಿಂದ ನನ್ನೆದುರು ಗೆದ್ದು ನನ್ನನ್ನು ಕೊಲ್ಲಬಹುದು. ಆದರೆ ಮುಂದೆ ನನ್ನ ವಂಶದಲ್ಲಿಯೇ ನಿನ್ನನ್ನು ಕೊಲ್ಲುವನೊಬ್ಬನು ಹುಟ್ಟಿಬರುತ್ತಾನೆ. ಹಾಗಾಗಿ ನನಗೆ ಸಾಟಿಯಾಗುವವರು ಯಾರೂ ಇಲ್ಲ ಎಂಬ ಭ್ರಮೆ ಬಿಡು ಎನ್ನುವನು. ಅದನ್ನು ರಾವಣನು ಈ ಸಮಯದಲ್ಲಿ ನೆನಪಿಸಿಕೊಳ್ಳುತ್ತಾನೆ.ಮುಂದೆ ಇನ್ನೊಂದಷ್ಟು ಘಟನೆ ಹಾಗೂ ಶಾಪಗಳನ್ನು ನೆನಪಿಸಿಕೊಳ್ಳುತ್ತಾನೆ._



http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩