ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*जहातु नैनं कथमर्थसिद्धि: संशय्य कर्णादिषु तिष्ठते य: । असाधुयोगा हि जयान्तराया: प्रमाथिनीनां विपदां पदानि ।।*

‌  _ವ್ಯಾಸರ ಮಾತು. ಈ ಧೃತರಾಷ್ಟ್ರನು ಹೇಗೆ ತಾನೇ ಸಂಪತ್ತನ್ನು ಶಾಶ್ವತವಾಗಿ ಉಳಿಸಿಕೊಂಡಾನು? ಏಕೆಂದರೆ ಕರ್ಣ-ದುರ್ಯೋಧನ- ಶಕುನಿಯವರನ್ನು ನಂಬಿ ಅವನು ಕೆಡಬಹುದೇ ಹೊರತು ಉದ್ಧಾರವಾಗಲಾರ. ಲೋಕದಲ್ಲಿ ಹೀಗೆ ಕಂಡುಬರುತ್ತದೆ. ದುರ್ಜನರ ಅಥವಾ ದುಷ್ಟ ವಿಚಾರಿಗಳ ಸಂಗವು ಜಯಕ್ಕೆ ವಿಘ್ನವಾಗಿ ಇರುತ್ತದೆ. ಅದು ವಿಪತ್ತುಗಳ ಹೆಬ್ಬಾಗಿಲೂ ಹೌದು. ಧೃತರಾಷ್ಟ್ರನು ತನ್ನ ಹಾಗೂ ರಾಜ್ಯದ ಶ್ರೇಯಸ್ಸನ್ನು ನಿಜವಾಗಿ ಬಯಸುವನಾದರೆ ಇಂತಹ ದುಷ್ಟರ ಸಂಗವನ್ನು ಈಗಲೇ ಬಿಡಬೇಕು. ಇಲ್ಲದೆ ಹೋದರೆ ವಿಪತ್ತುಗಳು ಅವನಿಗೆ ಹೆಜ್ಜೆ ಹೆಜ್ಜೆಗೆ ಎದುರಾಗುವವು. ಲೋಕದಲ್ಲಿ ಒಂದು ಮಾತಿದೆ- ದುರ್ಜನರ ಸಂಗ ಅಭಿಮಾನ ಭಂಗ ಎಂದು. ನಾವು ಜಯವನ್ನು ಅಥವಾ ಶ್ರೇಯಸ್ಸನ್ನು ಸಂಪಾದಿಸಲು ಬಯಸುವವರಾದರೆ  ನಮ್ಮ ಯಶಸ್ಸಿಗೆ ತಡೆ ಒಡ್ಡುವ ಸಂಗತಿಗಳನ್ನು ಬಿಡಬೇಕು. ಅದು ಒಳಗಿನ ವಿಚಾರಗಳಾಗಲೀ ಅಥವಾ ಹೊರಗಿನ ಅವಿಚಾರಿಗಳಾಗಲೀ ಅವೆರಡೂ ತ್ಯಾಜ್ಯವೇ. ಇಲ್ಲದಿದ್ದರೆ ಹಿಂದೆ ನಾವು ಸಾಕಿ ಸಲಹಿದ ಅಥವಾ ಬೆಳೆಸಿದ ದುಷ್ಟತನ ಅಥವಾ ದುಷ್ಟರೇ ಮುಂದಿನ ಏಳಿಗೆಗೆ ಅಡ್ಡಗಾಲು ಆಗುತ್ತಾರೆ‌. ವಿಪತ್ತಿನ ಹೆಜ್ಜೆಗಳನ್ನು ಅಸಾಧುಗಳ ಸಂಗದಲ್ಲೇ ಗುರುತಿಸಿ ದೂರ ಹೋಗುವವನು ನಿರ್ವಿಘ್ನವಾಗಿ ಗುರಿಯನ್ನು ತಲುಪುವನು. ಉಳಿದವರು ಅಲ್ಲೇ ಉಳಿಯುವರೇ ಹೊರತು ಮುಂದೆ ಹೋಗಲಾರರು. ಪ್ರಕೃತ ರಾಜನು ನಿಮ್ಮಂತಹ ಸಜ್ಜನರನ್ನು ದೂರ ಮಾಡಿ ದುಷ್ಟರನ್ನು ಹತ್ತಿರ ಇಟ್ಟುಕೊಂಡು ತನ್ನ ವಿನಾಶವನ್ನು ತಾನೇ ಬಯಸುತ್ತಿದ್ದಾನೆ ಎಂಬ ಭಾವ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩