ರಾಮಾಯಣ ೧೦೭

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೭

*ದೃಷ್ಟೋ ದೋಷೋ ಹಿ ಯೋಸ್ಮಾಭಿಃ ಪುರಾ ಮಂತ್ರವಿನಿರ್ಣಯೇ ಹಿತೇಷ್ವನಭಿರಕ್ತೇನ ಸೋಯಮಾಸಾದಿತಸ್ತ್ವಯಾ*
_ಕುಂಭಕರ್ಣನ ಮಾತು. ರಾವಣಾ, ಹಿಂದೆ ಮಂತ್ರಾಲೋಚನೆ ಮಾಡುವಾಗ  ಯಾವ ವಿಪತ್ತು ಮುಂದೆ ಬರಬಹುದೆಂದು ಊಹಿಸಿದ್ದೆವೋ ಅದೇ ಈಗ ಒದಗಿದೆ. ನನ್ನ ಬುದ್ಧಿವಾದವನ್ನು ಅಲಕ್ಷಿಸಿ ನೀನಾಗಿ ಸಂಕಟವನ್ನು ತಂದುಕೊಂಡಿರುವೆ. ಪಾಪಕರ್ಮದ ಫಲ‌ ನಿನ್ನ ಪಾಲಿಗೆ ಬೇಗ ಸಿಕ್ಕಿದೆ. ದುಷ್ಕಾರ್ಯ ಮಾಡಿದವನು ನರಕದಲ್ಲಿ ಬೀಳಲೇಬೇಕು. ಸೀತೆಯನ್ನು ಅಪಹರಿಸುವಾಗ ನೀನು ಇದರ ಪರಿಣಾಮ ಏನಾಗಬಹುದೆಂದು ಯೋಚಿಸಿದ್ದೆಯ? ಯುಕ್ತಾಯುಕ್ತಗಳನ್ನು ನೋಡದೇ ಕೇವಲ ವೀರ್ಯ ಹಾಗೂ ದರ್ಪದಿಂದ ಇದನ್ನು ನಡೆಸಿ ಈಗ ಅನುಭವಿಸುತ್ತಿರುವೆಯಷ್ಟೇ. ಕುಂಭಕರ್ಣನ ಒಂದೊಂದು ಮಾತೂ ಬಹಳ ಸಮಂಜಸ ಹಾಗೂ ಸಮಯಕ್ಕೆ ಸರಿಯಾಗಿದೆ. ಅಣ್ಣನಿರಲಿ ತಮ್ಮನಿರಲಿ ಅವರ ತಪ್ಪುಗಳನ್ನು ಹೀಗೆ ಖಂಡಿಸುವ ಮನೋಭಾವ ಬಹಳ ಕಡಿಮೆ ಜನರಲ್ಲಿದೆ. ಹೆಚ್ಚಿನವರು ತಮ್ಮವರು ಮಾಡಿದ ಅಕೃತ್ಯಗಳನ್ನೂ ಸಮರ್ಥನೆ ಮಾಡಿಕೊಳ್ಳುತ್ತಾರೆ._

*ಯಃ ಪಶ್ಚತ್ಪೂರ್ವಕಾರ್ಯಾಣಿ ಕುರ್ಯಾದೈಶ್ವರ್ಯಮಾಸ್ಥಿತಃ ಪೂರ್ವಂ ಚೋತ್ತರಕಾರ್ಯಾಣಿ ನ ಸ ವೇದ ನಯಾನಯೌ*

_ಈ ಮಾತು ತುಂಬಾ ಸುಂದರವಾಗಿದೆ. ಯಾರು ತನ್ನ ಐಶ್ವರ್ಯದ ಮದದಿಂದ ಮೊದಲು ಮಾಡಬೇಕಾದ್ದನ್ನು ಕಡೆಗೂ, ಕಡೆಗೆ ಮಾಡಬೇಕಾದ್ದನ್ನು ಮೊದಲು ಮಾಡುವನೋ ಅವನಿಗೆ ನೀತಿ-ಅನೀತಿಗಳೆರಡೂ ತಿಳಿದಿಲ್ಲವೆಂದೇ ಭಾವಿಸಬೇಕು. ನೀನು ನೀತಿಶಾಸ್ತ್ರವನ್ನು ಬಹಳ ಚೆನ್ನಾಗಿ ಕಲಿತವನು. ಆದರೆ ನೀನು ಅಪಹರಿಸುವ ಮುನ್ನ ಅಪಾಯವನ್ನು ಆಲೋಚಿಸಲೇ ಇಲ್ಲ ಏಕೆ? ನೀನು ಶಕ್ತಿಯ ಮೇಲೆ ಮಾತ್ರ ನಂಬಿಕೆ ಇಟ್ಟು ಬೇರೇನನ್ನೂ ಆಲೋಚಿಸಲಿಲ್ಲ ಏಕೆ?_

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩