ರಾಮಾಯಣ ೧೦೦

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೧೦೦

*ವಿಷ್ಣೋರ್ಭಾಗಮಮೀಮಾಂಸ್ಯಮಾತ್ಮಾನಂ ಪ್ರತ್ಯನುಸ್ಮರನ್*

_ರಾವಣನ ದಾಳಿಯಿಂದ ಪ್ರಜ್ಞೆ ತಪ್ಪಿದ್ದ ಲಕ್ಷ್ಮಣನು ನಿಧಾನಕ್ಕೆ ಚೇತರಿಸಿಕೊಂಡನು. ಶ್ರೀಮನ್ನಾರಾಯಣನ ಅಚಿಂತ್ಯವಾದ ಅಂಶವೇ ತಾನೆಂಬುದನ್ನು ಸ್ಮರಿಸಿಕೊಂಡನು. ಇಲ್ಲಿ ವಾಲ್ಮೀಕಿಗಳ ಸ್ಪಷ್ಟವಾದ ಉಲ್ಲೇಖ ಇದೆ. ಲಕ್ಷ್ಮಣನು ಶೇಷನ ಅಥವಾ ವಿಷ್ಣುವಿನ ಆಯುಧಗಳ ಅಂಶ ಅಲ್ಲ. ಕೆಲವರ ಪ್ರತಿಪಾದನೆ ಹಾಗೂ ಇದೆ. ಆದರೆ ವಾಲ್ಮೀಕಿಗಳ ಮಾತು ನಾರಾಯಣನ ಅಂಶವೇ ಇವನು ಎಂಬುದು._

*ತಚ್ಛ್ರುತ್ವಾ ರಾಘವೋ ವಾಕ್ಯಂ ವಾಯುಪುತ್ರೇಣ ಭಾಷಿತಮ್ ಆರುರೋಹ ಮಹಾಶೂರೋ ಬಲವಂತಂ ಮಹಾಕಪಿಮ್*

_ಅನತಿಕಾಲದಲ್ಲಿ ಚೇತರಿಸಿಕೊಂಡ ರಾವಣನು ಯುದ್ಧೋನ್ಮುಖನಾದನು. ಆಗ
ನೆಲದಲ್ಲಿ ನಿಂತು ಯುದ್ಧ ಮಾಡುತ್ತಿದ್ದ ರಾಮನನ್ನು ಸಮೀಪಿಸಿದ ಹನುಮನು ತನ್ನ ಹೆಗಲ ಮೇಲೆ ಏರಿ ಯುದ್ಧ ಮಾಡುವಂತೆ ಹೇಳುತ್ತಾನೆ. ಆಗ ರಾಮನು ಅವನಾಸೆಯಂತೆ ಹೆಗಲೇರಿ ರಾವಣನೊಡನೆ ಸೆಣಸಿದನು. ವಿಷ್ಣುವು ಗರುತ್ಮಂತನನ್ನು ಏರುವಂತೆ ರಾಮನು ಮಾರುತಿಯ ಬೆನ್ನೇರಿದನು._

*ಯಶ್ಚೈಷ ಶಕ್ತ್ಯಾಭಿಹತಸ್ತ್ವಯಾದ್ಯ ಇಚ್ಛನ್ ವಿವಾದಂ ಸಹಸಾಭ್ಯುಪೇತಃ ಸ ಏಷ ರಕ್ಷೋಗಣರಾಜ ಮೃತ್ಯುಃ ಸಪುತ್ರದಾರಸ್ಯ ತವಾದ್ಯ ಯುದ್ಧೇ*

_ರಾಮನ ಮಾತು. ಯಾರನ್ನು ನೀನು ಶಕ್ತ್ಯಾಯುಧದಿಂದ ಘಾಸಿಗೊಳಿಸಿದೆಯೋ ಅವನೇ ನಿನ್ನೊಡನೆ ಯುದ್ಧ ಮಾಡಲು ಬಂದಿರುವನೆಂದು ಭಾವಿಸು. ನಿನಗೂ, ನಿನ್ನ ಮಡದಿ ಮಕ್ಕಳಿಗೂ ಮೃತ್ಯುವಾಗಿ ಅವನೇ ಬಂದಿರುವನೆಂದು ತಿಳಿ ಎನ್ನುತ್ತಾನೆ. ಈ ಮಾತಿನಲ್ಲೂ ಲಕ್ಷ್ಮಣನಿಗೂ ತನಗೂ ಅಭೇದವಿಲ್ಲ, ಪ್ರಕೃತ ರೂಪಭೇದವಿದ್ದರೂ ಅಂತತಃ ಒಂದೇ ಎಂಬ ಸತ್ಯ ಇಲ್ಲಿ ಸ್ಪಷ್ಟವಾಗಿ ತಿಳಿಯುತ್ತದೆ._





http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩