ಪ್ರತಿಜ್ಞಾ ಯೌಗಂಧರಾಯಣ ೧೪
🔥 ಪ್ರತಿಜ್ಞಾ ಯೌಗಂಧರಾಯಣ 🔥೧೪
*शक्ता दर्पयितुं स्वहस्तरचिता भूमि: कटप्रच्छदा पर्याप्तो निगलस्वनश्चरणयो: कन्दर्पमालम्बितुम् । क: श्रुत्वा न भवेद्धि मन्मथपटु: प्रत्यक्षतो बन्धने रक्षार्थं परिगण्यमानपुरुषै राजेति शब्दापनम् ।।*
_ಯೌಗಂಧರಾಯಣನ ವ್ಯಂಗ್ಯ ಮಾತು. ಶೃಂಗಾರಲೀಲೆಗಳಿಗೆ ಆಶ್ರಯವಾಗುವುದು ಅಥವಾ ಕಾಮದ ಉತ್ಪತ್ತಿ ಹೆಚ್ಚಾಗಿ ಸುಖಮಯ ಸನ್ನಿವೇಶದಲ್ಲಿ ಉಂಟಾಗುವುದು. ಆದರೆ ನಮ್ಮ ರಾಜನಿಗೆ ಕಾರಾಗೃಹದ ಹುಲ್ಲಿನ ಹಾಸಗೆಯೇ ಪ್ರೇಮವನ್ನು ಹುಟ್ಟಿಸಿದೆ. ಅರಮನೆಯಲ್ಲಿ ಹಂಸತೂಲಿಕಾತಲ್ಪದಲ್ಲಿ ಪವಡಿಸಿದಾಗ ಉಂಟಾಗುವ ಪ್ರೀತಿ ಚುಚ್ಚುತ್ತಿರುವ ಹುಲ್ಲಿನ ಹಾಸಿಗೆಯ ಮೇಲೆ ಉಂಟಾಗಿದೆ. ಮಧುರ ಸಂಗೀತ ಅಥವಾ ಆಲಾಪ ಅಥವಾ ವಾದ್ಯಗಳ ಧ್ವನಿ ಅಥವಾ ಕಾವ್ಯಾದಿಗಳ ಪಠನ-ಶ್ರವಣದಿಂದ ಉಂಟಾಗುವ ಪ್ರೀತಿ ಹೀಗೂ ಹುಟ್ಟುವುದೇ! ಇಲ್ಲಿ ಬೇಡಿಯ ಠಣ್ ಠಣ್ ಎಂಬ ಧ್ವನಿ ಅಥವಾ ಆರಕ್ಷಕರ ನಿಂದನೆಯೇ ಸಂಗೀತ. ಅಂತಹ ಸಂಗೀತ ಕೇಳಿಯೂ ರಾಜನಿಗೆ ಪ್ರೀತಿ ಹುಟ್ಟಿದೆಯಲ್ಲ! ಕಾರಾಗಾರ ಸೇವಕರ *ರಾಜ* ಎಂಬ ವ್ಯಂಗ್ಯದ ಮಾತು ಕೇಳಿ ಮನಸ್ಸು ಕುಗ್ಗಿಹೋಗಬೇಕಾದ ಸ್ಥಳದಲ್ಲಿ ಪ್ರೀತಿಯ ಹೂವು ಅರಳಿ ನಿಂತಿದೆ. ಲೋಕದಲ್ಲಿ ಹೀಗೂ ಆಗುವುದುಂಟೇ? ಬಂಧನದಲ್ಲಿ ಸಿಲುಕಿ ದೇಹ ಹಾಗೂ ಮನಸ್ಸನ್ನು ಕೆಡಿಸಿಕೊಳ್ಳಬೇಕಾದ ಸ್ಥಳದಲ್ಲಿ ಪ್ರೀತಿಯನ್ನು ಆಲಂಗಿಸಿ ರಮಿಸುತ್ತಿರುವ ನಮ್ಮ ರಾಜನನ್ನು ಕಂಡಾಗ ಅಳುವುದೋ ನಗುವುದೋ ಒಂದೂ ತಿಳಿಯುತ್ತಿಲ್ಲ. ಇದು ನಮ್ಮ ದುರಾದೃಷ್ಟವೋ, ರಾಜಕುವರಿಯ ಅದೃಷ್ಟವೋ ಒಂದೂ ತಿಳಿಯದು. ವತ್ಸರಾಜನಿಗೆ ಮಹಾಸೇನನ ಬಂಧನದಲ್ಲಿರುವಾಗ ವಾಸವದತ್ತೆಯ ಬಗೆಗೆ ಪ್ರೀತಿ ಬೆಳೆದು ತಾನು ರಾಜ್ಯಕ್ಕೆ ಹಿಂತಿರುಗಿ ಬರುವುದಾದರೆ ಅವಳ ಜೊತೆಯೇ ಎಂದಾಗ ಮಹಾಸೇನನ ವ್ಯಂಗ್ಯದ ನುಡಿ. ಪ್ರೀತಿ ಹುಟ್ಟಲು ಕಾಲ- ದೇಶ- ವ್ಯಕ್ತಿ ಯಾವುದೂ ನಿಯಮಿತವಲ್ಲ.ಅದು ದೇಶಕಾಲಾತೀತ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ