ರಾಮಾಯಣ ೭೯

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೯

*ವಾಕ್ಯಮಗ್ರಾಮ್ಯಪದವತ್ಪುಷ್ಕಲಾರ್ಥಂ ವಿಭೀಷಣಃ*

_ಲಂಕೆಯ ನಗರರಕ್ಷಣಾ ವಿಧಾನವನ್ನು ಕಂಡ ವಿಭೀಷಣ ರಾಮನ ಬಳಿ ನಿವೇದಿಸಿದನು. ಹಾಗೆ ಹೇಳುವಾಗ ಗ್ರಾಮ್ಯವಲ್ಲದ ಭಾಷೆಯಲ್ಲಿ ಎಲ್ಲರಿಗೂ ಅರ್ಥವಾಗುವಂತೆ ನುಡಿದನು. ಇದನ್ನು ಕಂಡಾಗ ಹಿಂದೆಯೂ ನೂರಾರು ಭಾಷೆಗಳಿದ್ದುದು ತಿಳಿಯುತ್ತದೆ. ಹನುಮಂತ ಸೀತೆಯ ಬಳಿ ಹೀಗೆ ಭಾಷಾಭೇದದಿಂದ ವ್ಯವಹರಿಸುತ್ತಾನೆ. ಭಾಷಾಶಾಸ್ತ್ರಜ್ಞರ ತರ್ಕ ಅರ್ಥಹೀನ ಎನಿಸುತ್ತದೆ. ಕನ್ನಡ ಅಥವಾ ಯಾವುದೇ ಗ್ರಾಮೀಣ ಭಾಷೆಗಳು ಪರಿವರ್ತನೆ ಮುಂದಿನ ಕಾಲದಲ್ಲಿ ಹೊಂದಿರಬಹುದೇ ಹೊರತು ಸಂಸ್ಕೃತ ಭಾಷೆಯ ಪದಗಳಿಂದೊಡಗೂಡಿ ಅವುಗಳೂ ಅಸ್ತಿತ್ವದಲ್ಲಿದ್ದವು ಎಂದು ಒಪ್ಪಬೇಕಾಗುತ್ತದೆ. ಇಲ್ಲದಿದ್ದರೆ ಹೀಗೆ ಬೇರೆ ಬೇರೆ ಭಾಷೆಯಲ್ಲಿ ವ್ಯವಹಾರ ಸಾಧ್ಯವಾಗುತ್ತಿರಲಿಲ್ಲ._

*ನ ಚೈವ ಮಾನುಷಂ ರೂಪಂ ಕಾರ್ಯಂ ಹರಿಭಿರಾಹವೇ*

_ರಾಮನ ಆಜ್ಞೆ. ನಮ್ಮ ಗುರುತಾಗಿ ನಮ್ಮ ಸೇನೆಯ ಯಾವ ಕಪಿಗಳೂ ಮನುಷ್ಯರ ರೂಪ ತಾಳಬಾರದು.ಕೇವಲ ನಾನು, ಲಕ್ಷ್ಮಣ ವಿಭೀಷಣ ಹಾಗೂ ಅವನ ನಾಲ್ವರು ಸಚಿವರು ಮಾತ್ರ ಮಾನುಷರೂಪದಲ್ಲಿ ಇರುತ್ತೇವೆ. ರಾಕ್ಷಸರು ಯಾರು ಕಪಿಗಳು  ಯಾರೆಂಬ ಗೊಂದಲ ಉಂಟಾಗಬಹುದು ಎಂದು ರಾಮನ ಪೂರ್ವ ನಿರ್ಧಾರ ಇದಾಗಿತ್ತು. ಹನುಮನೇ ಮೊದಲಾದ ಅನೇಕ ವಾನರ ವೀನರು ಕಾಮರೂಪಿಗಳಾಗಿದ್ದರು. ತಮಗೆ ಇಷ್ಟಬಂದ ರೂಪ ಧರಿಸಿ ಎಲ್ಲೆಡೆ ಸಂಚರಿಸುತ್ತಿದ್ದರು. ಒಂದು ವೇಳೆ ರಾಕ್ಷಸರು ಕಪಿಯ ರೂಪ ಧರಿಸಿದರೂ ಉಳಿಯಲಿ ಎಂಬ ಆಶಯವೂ ಇದಾಗಿತ್ತು. ಅವರಿಗೆ ಅದು ಹೀನ ರೂಪವಾದ ಕಾರಣ ಧರಿಸುವುದು ಅಸಾಧ್ಯ. ಯುದ್ಧಕಾಲದ ಸಂಕೇತ ನಿಜ ರೂಪವನ್ನು ಆಶ್ರಯಿಸುವುದು ರಾಮನ ಉಪಾಯಗಳಲ್ಲೊಂದಾಗಿತ್ತು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು