ಮಹಾಭಾರತ ೨೯
🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೯
*ವಿಕ್ರಮೇಣ ಮಹೀಪ್ರಾಪ್ತಾ ಭರತೇನ ಮಹಾತ್ಮನಾ ವಿಕ್ರಮೇಣ ಚ ಲೋಕಾಂಸ್ತ್ರೀಞ್ಜಿತವಾನ್ಪಾಕಶಾಸನಃ*
_ಕರ್ಣ ಮುಂದುವರೆಸುತ್ತಿದ್ದಾನೆ. ಮಹಾತ್ಮನಾದ ಭರತನು ಪರಾಕ್ರಮದಿಂದಲೇ ಭೂಮಿಯನ್ನು ಪಡೆದನು. ಇಂದ್ರನು ಪರಾಕ್ರಮದಿಂದಲೇ ತ್ರಿಭುವನತಲ್ಲಣನಾದನು. ಹಾಗಾಗಿ ವಂಚಿಸುವ ಉಪಾಯ ಬಿಟ್ಟು ಪರಾಕ್ರಮ ಆಶ್ರಯಿಸೋಣ._
*ವಿಕ್ರಮಂ ಚ ಪ್ರಶಂಸಂತಿ ಕ್ಷತ್ರಿಯಸ್ಯ ವಿಶಾಂ ಪತೇ ಸ್ವಕೋ ಹಿ ಧರ್ಮಃ ಶೂರಾಣಾಂ ವಿಕ್ರಮಃ ಪಾರ್ಥಿವರ್ಷಭ*
_ರಾಜನೇ, ಕ್ಷತ್ರಿಯನಿಗೆ ಪರಾಕ್ರಮವೇ ಶ್ರೇಷ್ಠವಾದುದು. ಶೂರರಿಗೆ ಪರಾಕ್ರಮವೇ ಸ್ವಧರ್ಮವು. ಅದನ್ನು ಬಿಟ್ಟು ಏಕೆ ಹೇಡಿಗಳಂತೆ ಯೋಚಿಸುವೆ!_
*ನಹಿ ಸಾಮ್ನಾ ನ ದಾನೇನ ನ ಭೇದೇನ ಚ ಪಾಂಡವಾಃ ಶಕ್ಯಾಃ ಸಾಧಯಿತುಂ ತಸ್ಮಾದ್ವಿಕ್ರಮೇಣೈವ ತಾಞ್ಜಹಿ*
_ಸಾಮದಿಂದಾಗಲಿ, ಭೇದದಿಂದಾಗಲಿ ದಾನದಿಂದಾಗಲಿ ಪಾಂಡವರನ್ನು ವಶಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದುದರಿಂದ ಪರಾಕ್ರಮದಿಂದಲೇ ಪ್ರಯತ್ನಿಸೋಣ. ಪಾಂಡವರ ಬಗೆಗೆ ಕರ್ಣನ ಗ್ರಹಿಕೆ ಸತ್ಯವೇ ಆಗಿದೆ._
ಮುಂದುವರಿಯುವುದು
http://shreenidhiabhyankar.blogspot.in/
🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ