ರಾಮಾಯಣ ೭೫

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೫

*ಸಮಾನಯಧ್ವಂ ಸೈನ್ಯಾನಿ ವಕ್ತವ್ಯಂ ನ ಚ ಕಾರಣಮ್*

_ರಾವಣನು ಸೀತೆಯನ್ನು ವಂಚಿಸಿ ಅವಳ ರೋದನ ಮುಗಿಲುಮುಟ್ಟಿತ್ತು.ಆಗ ಸಚಿವನೊಬ್ಬ ಬಂದು ಪ್ರಹಸ್ತನ ಮುಖ್ಯವಾದ ಕರೆಯೊಂದನ್ನು ಅರುಹುತ್ತಾನೆ. ಒಡನೆಯೇ ಪರಿಸ್ಥಿತಿ ಅರಿತ ರಾವಣನು ರಾಜಸಭೆಗೆ ಹೋಗಿ ಹೀಗೆ ಆದೇಶಿಸುತ್ತಾನೆ. ಸೈನ್ಯವನ್ನೆಲ್ಲಾ ಶೀಘ್ರ ಸಜ್ಜುಗೊಳಿಸಿ ಒಡನೆಯೇ ಬರಲು ಹೇಳಿ. ಕಾರಣವನ್ನು ತಿಳಿಸಬೇಡಿ. ಇದು ರಾಜಕಾರಣದ ಒಂದು ತಂತ್ರ. ಎಂತಹ ವಿಪತ್ತು ಎದುರಾದರೂ ಉಳಿದವರೆದುರು ಅಳುಕನ್ನು ತೋರಿಸಿಕೊಳ್ಳಬಾರದು. ಕೂಡಲೇ ಮುಂದಿನ ಕ್ರಮವನ್ನು ಕೈಗೊಳ್ಳಬೇಕು. ಯುದ್ಧದ ಕಾರಣ ತಿಳಿದರೆ ಸೈನಿಕರು ನಿಂದಿಸಬಹುದು, ಹಿಂಜರಿಯಬಹುದು, ರಾಜನ ಮೇಲೆ ಒಲವಿಲ್ಲದೆ ಅನಾಸಕ್ತಿಯಿಂದ ಸಮರದಲ್ಲಿ ತೊಡಗಬಹುದು. ಹಾಗಾಗಿ ಕಾರಣ ಹೇಳದೇ ದೇಶಕ್ಕಾಗಿ ಹೋರಾಡಿ ಎನ್ನುವುದು ಸೈನಿಕರ ಉತ್ಸಾಹ ವರ್ಧನೆಗೆ ಮುಖ್ಯ ಕಾರಣ. ಉಗ್ರರನ್ನು ತಯಾರು ಮಾಡುವಾಗಲೂ ಹಿಂದೆ ಮುಂದೆ ಏನನ್ನೂ ಹೇಳದೇ ಧರ್ಮದ ಉಳಿವಿಗಾಗಿ ಹೋರಾಡಿ, ಅಪ್ಸರೆಯರು ಸಿಗುವರು ಎಂದೇ ಪ್ರಚೋದಿಸುತ್ತಾರೆ._

*ಅಯುಕ್ತಬುದ್ಧಿಕೃತ್ಯೇನ ಸರ್ವಭೂತವಿರೋಧಿನಾ*

_ಸರಮೆ ಎಂಬ ವಿಭೀಷಣನ ಪತ್ನಿ ಸೀತೆಯನ್ನು ಸಂತೈಸುತ್ತಾ ಆಡುವ ಮಾತು.ರಾಮನಿನ್ನೂ ಸತ್ತಿಲ್ಲ. ಈ ರಾವಣನ ಕಾರ್ಯಗಳೆಲ್ಲವೂ ತುಚ್ಛವಾದವು. ಇವನ ಬುದ್ಧಿಯೂ ವಂಚಿಸುವುದನ್ನೇ ಯೋಚಿಸುತ್ತದೆ. ಸಕಲ ಜೀವಿಗಳಿಗೂ ಇವನು ದ್ರೋಹವನ್ನೇ ಬಗೆಯುತ್ತಾನೆ. ಇಷ್ಟು ಕಾಲ ನಿನಗೆ ತೋರಿದ್ದೆಲ್ಲವೂ ಮಾಯೆ. ಯಾವುದು ನಿಜವಲ್ಲ. ರಾಮ ಕಪಿಗಳೊಡನೆ ಸಾಗರ ದಾಟಿ ಬಂದಿದ್ದಾನೆ. ಅನತಿ ಕಾಲದಲ್ಲೇ ನಿನ್ನನ್ನು ಮುಕ್ತಳನ್ನಾಗಿಸುತ್ತಾನೆ. ಹೆದರದಿರು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩