ಕಿರಾತಾರ್ಜುನೀಯ
🌸 ಕಿರಾತಾರ್ಜುನೀಯದ ಒಂದು ಸಾಯಕ 🌸
*शिवमौपयिकं गरीयसीं फलनिष्पत्तिमदूषितायतिम् । विगणय्य नयन्ति पौरुषं विजितक्रोधरया जिगीषव: ।।*
_ಧರ್ಮಜನ ಮಾತು. ಯಾರು ಕೋಪವನ್ನು ಗೆದ್ದು ಜಯದ ಅಭಿಲಾಷೆ ಹೊಂದಿರುವರೋ ಅವರು ಅದೂಷಿತವಾದ ಉತ್ತಮ ಫಲವನ್ನು ಪಡೆಯುವರು. ಯಾವುದೇ ಪರಿಸ್ಥಿತಿಯಲ್ಲಿ ಕೋಪವನ್ನು ಬಹುಕಾಲ ಕಾಪಿಡಬಾರದು. ಕಾರ್ಯಸಿದ್ಧಿಯು ಕೋಪವನ್ನು ಎಂದಿಗೂ ಆಶ್ರಯಿಸಲಾರದು. ಫಲವು ಹೇಗೆ ದೊರಕುವುದೋ ಎಂಬುದನ್ನು ಬಹಳ ಯೋಚಿಸಿ ಉತ್ತಮ ಉಪಾಯವನ್ನು ಅನುಸರಿಸಿ ಕಾರ್ಯದಲ್ಲಿ ತೊಡಗಿ ಯಶಸ್ಸನ್ನು ಪಡೆಯುತ್ತಾರೆ. ಸಂದಿಗ್ಧ ಫಲವುಳ್ಳ ಕಾರ್ಯದಲ್ಲಿ ಪ್ರವೃತ್ತಿಯನ್ನು ಎಂದಿಗೂ ಮಾಡಲಾರರು. ಕ್ರೋಧವು ಎಂದಿಗೂ ಅಭ್ಯುದಯಕ್ಕೆ ಬಾಧಕ. ಹಾಗಾಗಿ ಮೊದಲು ಅದನ್ನು ತ್ಯಜಿಸು ಯಾವುದನ್ನು ಕೈಗೊಂಡರೆ ಪರಿಣಾಮವು ಸುಖವಾಗಿ ಇರುತ್ತದೋ, ಲಾಭವೂ ದೊರಕುವುದೋ, ಅಂತಹ ಉದ್ಯೋಗದಲ್ಲಿ ಮಾತ್ರ ಬುದ್ಧಿವಂತರು ತೊಡಗುತ್ತಾರೆ. ಭಗವಂತನ ಅನುಗ್ರಹ ಬೇಕೆನ್ನುವನು ಇಂತಹ ಕಾರ್ಯದಲ್ಲಿ ಮಾತ್ರ ತೊಡಗುತ್ತಾನೆ. ಕೋಪದಲ್ಲಿ ಕೈಗೆತ್ತಿಕೊಂಡ ಕಾರ್ಯವು ಸಫಲವಾಗುವುದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಹಾಗಾಗಿ ನೀನು ಕೋಪವನ್ನು ತ್ಯಜಿಸಿ ನಿಧಾನಕ್ಕೆ ಶತ್ರುಗಳ ಅವನತಿಯನ್ನು ಯೋಚಿಸು. ಕೋಪವು ಕ್ಷಣಿಕ ಪರಿಣಾಮಕ್ಕೆ ಮಾತ್ರ ಕಾರಣವಾಗುತ್ತದೆ. ಆದರೆ ಕೋಪ ಬಿಟ್ಟು ಉಪಾಯದಿಂದ ಯೋಚಿಸಿ ಮಾಡಿದ ಕಾರ್ಯ ದೀರ್ಘಕಾಲೀನ ಸುಖವನ್ನು ತಂದುಕೊಡುತ್ತದೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ