ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*अभिवर्षति योनुपालयन् विधिबीजानि विवेकवारिणा । स सदा फलशालिनीं क्रियां शरदं लोक इवाधितिष्ठति ।।*

_ಧರ್ಮರಾಜ ಭೀಮನಿಗೆ ಹೇಳುತ್ತಿದ್ದಾನೆ. ಸಾಹಸ ಮಾಡಿದವನಿಗೂ ಫಲ ದೊರಕುವುದಲ್ಲ,ವಿವೇಕವನ್ನೇಕೆ ಆಶ್ರಯಿಸಬೇಕು ಎಂದರೆ ಅದಕ್ಕೆ ಉತ್ತರ ಇದು. ಕೃಷಿಕರು ಮಳೆಗಾಲದ ಆರಂಭದ ದಿನಗಳಲ್ಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬೀಜವನ್ನು ಬಿತ್ತಿ, ಅದರಲ್ಲಿ ಮೊಳಕೆ ಕಂಡ ಕೂಡಲೇ ಕಳೆಗಳನ್ನು ದೂರ ಮಾಡಿ, ಸಗಣಿ ಮುಂತಾದ ಪೋಷಕಗಳನ್ನು ಕೊಟ್ಟು ನೀರು ಸಿಗುವಂತೆ ಗಮನಿಸುತ್ತಿದ್ದರೆ ಅಂತಹವರು ಆಶ್ವಯುಜ ಅಥವಾ ಕಾರ್ತಿಕ ಮಾಸದಲ್ಲಿ ಫಲಭರಿತ ತೆನೆಗಳನ್ನು ಕಾಣುವರು. ಅದರಂತೆ ನೀತಿಶಾಸ್ತ್ರ ಬಲ್ಲ ಜನರು ಮಾಡುವ ಕೆಲಸಗಳಲ್ಲಿ ಸಂಧಿ ವಿಗ್ರಹ ಯಾನ ದ್ವೈಧೀಭಾವವೇ ಮೊದಲಾದ ಉಪಾಯಗಳನ್ನು ಆಶ್ರಯಿಸಿ ಅದಕ್ಕೆ ಪ್ರತಿಕೂಲವಾದ ವಿಧಿಗಳನ್ನು ನಿವಾರಿಸಿ ನಿಶ್ಚಿತವಾಗಿ ಫಲವನ್ನು ಪಡೆಯುತ್ತಾರೆ. ಹಾಗಾಗಿ ವಿಧಾನವೆಂಬ ಬೀಜಕ್ಕೆ ವಿವೇಕವೆಂಬ ನೀರೆರೆಯುವುದು ತುಂಬಾ ಮುಖ್ಯ. ಬೀಜ ಎಷ್ಟು ಪ್ರಬಲವಾಗಿದ್ದರೂ ಅಂದರೆ ನಮ್ಮ ಸಾಮರ್ಥ್ಯ ಮೇರೆ ಮೀರಿದ್ದರೂ ವಿವೇಕ ಇಲ್ಲದಿದ್ದರೆ ಬೀಜಕ್ಕೆ ನೀರೇ ಇಲ್ಲದಿದ್ದರೆ ಟಿಸಿಲೊಡೆದು ಹೊರಗೆ ಇಣುಕಲಾರದು, ಕಾರ್ಯ ಪೂರ್ಣವಾಗದು. ಏನೇ ಕಾರ್ಯ ಮಾಡುವುದಿದ್ದರೂ ವಿವೇಕವೆಂಬ ಮಂತ್ರ ಜೊತೆಗಿಟ್ಟುಕೊಳ್ಳೋಣ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩