ಪ್ರತಿಜ್ಞಾ ಯೌಗಂಧರಾಯಣ ೧೧

🔥 ಪ್ರತಿಜ್ಞಾ ಯೌಗಂಧರಾಯಣ 🔥೧೧

*पूर्वं तावद् वौरमसायावलेपात् आनीतेस्मिन् स्यात् तु मध्यस्थता मे । युद्धक्लिष्टं संशयस्थं विपन्नं श्रुत्वा त्वेनं संशयं चिन्तयामि ।।*

_ಮಹಾಸೇನನ ಮಾತು. ಕಾರ್ಯ ಆರಂಭಿಸುವಾಗ ಯಾವ ಉತ್ಸಾಹ ಇರುವುದೋ ಕೈಗೂಡಿದಾಗ ಅದೇ ಹೆಚ್ಚಾಗಿ ಉಳಿದಿರುವುದಿಲ್ಲ. ಆಸಕ್ತಿ ಎನ್ನುವುದು ಕ್ಷಣಿಕವಾದುದು. ಹಿಂದೆ ವತ್ಸರಾಜನು ನನ್ನ ಎದುರು ತಲೆಬಾಗುವುದಿಲ್ಲ, ಉಳಿದೆಲ್ಲರೂ ಬಾಗಿದರೂ ಎಂಬ ಕಾರಣಕ್ಕೆ ಅವನ ಅಭಿಮಾನ ಕಂಡು ನನ್ನ ವೈರತ್ವ ಬಲವಾಗಿ ಬೆಳೆದಿದ್ದು ಹೌದು. ಆದರೆ ಯಾವಾಗ ನನ್ನ ಮಂತ್ರಿಗಳು ಇವನನ್ನು ಹಿಡಿದು ತಂದರೋ ಆಗ ಅವನ ಮೇಲಿದ್ದ ವೈರತ್ವ ಕಳಚುತ್ತಾ ಉದಾಸೀನತೆ ಕಂಡುಬರುತ್ತಿದೆ. ಈಗಲಾದರೋ ನನ್ನ ಶತ್ರುವೇ ಆದರೂ ಅವನ ಬಗೆಗೆ ಒಂದಷ್ಟು ಅನುಕಂಪವೂ ಮೂಡುತ್ತಿದೆ. ಯುದ್ಧದಲ್ಲಿ ನನ್ನ ಸೈನಿಕರಿಂದ ಪೀಡಿಸಲ್ಪಟ್ಟಿದ್ದಾನೆ.  ಅವನ ಅವಸ್ಥೆ ನೋಡಿ ಜೀವಿಸಿರುವನೋ ಇಲ್ಲವೋ ಎಂಬ ಸಂಶಯವೂ ಹುಟ್ಟುತ್ತಿದೆ. ಇದನ್ನೆಲ್ಲ ಕೇಳಿ ನನ್ನ ಮನವೂ ಯಾಕೋ ಏನೋ ಸ್ವಲ್ಪ ವ್ಯಥೆಗೊಳಗಾಗುತ್ತಿದೆಯಲ್ಲಾ ಏನಿದು ಅಚ್ಚರಿ.ಯಾರು ಪರಮಶತ್ರು, ಯಾರು ಸತ್ತರೆ ಅಥವಾ ಸೆರೆಸಿಕ್ಕರೆ ಬೆಟ್ಟದಷ್ಟು ಸಂತೋಷ ಎಂದೆಲ್ಲಾ ಎಣಿಸಿದ್ದೆನೋ ಅಂತಹ ವ್ಯಕ್ತಿ ಸಿಕ್ಕಿದ ಕೂಡಲೇ ಭಾವನೆಗಳೇ ಬದಲಾಗಿ ಹೋದವಲ್ಲ.! ನಮ್ಮ ಮನದ ಭಾವನೆಗಳು ಹೇಗೆ ಕ್ಷಣಕ್ಷಣಕ್ಕೆ ಬದಲಾಗುವವು ಎಂಬುದನ್ನು ಕವಿ ಮಹಾಸೇನನ ಮೂಲಕ ತೆರೆದಿಟ್ಟಿದ್ದಾನೆ. ಸ್ಥಾಯೀ ಭಾವಗಳಿಗಿಂತ ಮನುಷ್ಯನಿಗೆ ಸಂಚಾರೀ ಭಾವಗಳೇ ಹೆಚ್ಚಾಗಿರುತ್ತವೆ. ಒಬ್ಬನಲ್ಲಿ ಈ ಕ್ಷಣಕ್ಕೆ ಪ್ರೀತಿ ಮರುಕ್ಷಣಕ್ಕೆ ದ್ವೇಷ ಮುಂದಿನ ಕ್ಷಣ ಉದಾಸೀನತೆ ಹೀಗೆ ಬದಲಾಗುವ ಭಾವಗಳ ಬಂಡಿಯನ್ನೇ ಜೀವನ ಎನ್ನಬಹುದೇನೋ!_

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩