ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸
 
*स्पृहणीयगुणैर्महात्मभि: चरिते वर्त्मनि यच्छतां मन: । विधिहेतुरहेतुरागसां विनिपातोपि सम: समुन्नते: ।।*

_ಧರ್ಮಜನ ಮಾತು. ವಿಮರ್ಶಿಸಿ ಶಾಸ್ತ್ರದ ಮಾತಿನಂತೆ ಕಾರ್ಯದಲ್ಲಿ ತೊಡಗಿದರೂ ಯಶಸ್ಸು ದೊರಕದಿರೆ ಏನು ಫಲ ಎಂದರೆ ಅದರ ಚಿಂತೆ ಬಿಡು. ಏಕೆಂದರೆ ಎಲ್ಲರೂ ಅನುಸರಿಸಲು ಇಚ್ಛಿಸುವ ಧೈರ್ಯ ಶೌರ್ಯ ಔದಾರ್ಯ ವಿನಯವೇ ಮೊದಲಾದ ಗುಣಗಳುಳ್ಳ ಮಹಾತ್ಮರ ಜೀವನದ ಶೈಲಿಯಲ್ಲಿ ನಾವೂ ನಡೆಯಬೇಕು. ಒಂದು ವೇಳೆ ಹಾಗೆ ನ್ಯಾಯವಾದ ಸರಿಯಾದ ದಾರಿಯಲ್ಲಿ ಸಾಗಿದರೂ ಆಕಸ್ಮಿಕವಾಗಿ ಪ್ರಮಾದಗಳು ಜರುಗಿ ಕೆಲಸ ಕೆಟ್ಟರೆ ಅದೂ ನಮ್ಮ ಸಾಫಲ್ಯವೇ ಸರಿ. ವಿಧಿಯು ನಮಗೆ ಅನುಕೂಲಕರವಾಗಿರಲಿ ಇಲ್ಲದಿರಲಿ ನಮ್ಮ ದಾರಿ ಎಂದೂ ತಪ್ಪಬಾರದು. ಅಂತಹ ಸಮಯದ ನಮ್ಮ ಪತನವೂ ಮಹಾ ಅಭ್ಯುದಯದ ಮುನ್ನುಡಿಯೇ ಆಗಿರುತ್ತದೆ.ಅಥವಾ ಅದು ನಮ್ಮ ಏಳಿಗೆಗೆ ಸಮಾನವಾಗಿಯೇ ಇರುತ್ತದೆ. *ಮಹಾಜನೋ ಯೇನ ಗತಾಃ ಸ ಪಂಥಾ* ಎಂಬ ಮಾತಿನಂತೆ ಮಹಾತ್ಮರು ಸಂತರು ಉದಾರಚರಿತರು ನಡೆದ ಹಾದಿಯೇ ನಿಜವಾದ ಹಾದಿ. ಅವರು ಸಫಲರಾಗಿರಲಿ, ವಿಫಲರಾಗಿರಲಿ ಅದು ಲೆಕ್ಕವಲ್ಲ. ಆ ಹಾದಿಯಲ್ಲಿ ಅನೇಕ ವೈಫಲ್ಯಗಳು ನಮಗೂ ಕಾಣಬಹುದು. ಆದರೆ ಕೊನೆಗಾದರೊಮ್ಮೆ ಸಫಲತೆ ಕಂಡೇ ಬರುವುದು. ಸತ್ಯ ಹರಿಶ್ಚಂದ್ರನ ಪ್ರತಿಜ್ಞೆಯ ಬಳಿಕದ ಹಾದಿ ಕಲ್ಲು ಮುಳ್ಳು ಗಳಿಂದ ಕೂಡಿದ್ದರೂ ಕೊನೆಗೊಮ್ಮೆ ಅದು ಮುಂದಿನ ಪೀಳಿಗೆಗೆ ಮಾರ್ಗದರ್ಶಕವಾಯಿತು. ಅಂತೆಯೇ ಮಹಾತ್ಮರ ಗುಣಗಳನ್ನು ಅಳವಡಿಸಿಕೊಂಡು ಅವರು ನಡೆದಂತೆ ಸತ್ಯದ ಧರ್ಮದ ದಾರಿಯಲ್ಲಿ ನಡೆಯೋಣ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩