ಪ್ರತಿಜ್ಞಾ ಯೌಗಂಧರಾಯಣ ೧೦

🔥 ಪ್ರತಿಜ್ಞಾ ಯೌಗಂಧರಾಯಣ 🔥೧೦

*न श्रद्धदाम्युदयनग्रहणं त्वयोक्तं व्यावर्तनं करतलैरिव मन्दरस्य । यस्याहवेषु रिपव: कथयन्ति शौर्यं यौगन्धरायणमतानि च न: स्वनन्ति ।।*

_ಮಹಾಸೇನನ ಆಶ್ಚರ್ಯದ ಮಾತು. ಉದಯನನ್ನು ಹಿಡಿದಿರುವ ವಾರ್ತೆಯಲ್ಲಿ ನಾನು ವಿಶ್ವಾಸ ಇಡಲಾರೆ. ಏಕೆಂದರೆ ಅದು ಮಂದರ ಪರ್ವತವನ್ನು  ಚಕ್ರದಂತೆ ತಿರುಗಿಸುವಂತೆಯೇ ಸರಿ. ಆ ಕೆಲಸ ಹೇಗೆ ಅಸಾಧ್ಯವೋ ಹಾಗೆಯೇ ಉದಯನನ್ನು ಹಿಡಿಯುವುದೂ ಅಸಾಧ್ಯವಾದ ಕಾರ್ಯ. ಯಾರ ಪರಾಕ್ರಮವು ಹಾಗೆ ಹೀಗೆ ಅದ್ಭುತ ಎಂದೆಲ್ಲಾ ಯುದ್ಧಗಳಲ್ಲಿ ಹೊಗಳಲ್ಪಡುವುದೋ ಅಂತಹ ಯೌಗಂಧರಾಯಣನ ಉಪಾಯಗಳು ಅವುಗಳಿಂದಾದ ಪರಿಣಾಮಗಳು ಶತ್ರುಗಳ ಪರಾಭವ ಇವೇ ಸುದ್ದಿಗಳು ಇಂದಿಗೂ ನನ್ನ ಕರ್ಣಗಳಲ್ಲಿ ಅನುರಣಿಸುತ್ತಿವೆ. ಈ ನಾಟಕದಲ್ಲಿ ಉದಯನನು ರಾಜನಾದರೂ ಯೌಗಂಧರಾಯಣನ ಪರಾಕ್ರಮ ಅಥವಾ ತಂತ್ರಗಳ ಬಗೆಗೆ ವರ್ಣನೆ ಹೆಚ್ಚು. ಹಾಗಾಗಿ ಅವನೇ ಮಂತ್ರಿಯಾದರೂ ನಾಯಕನು. ಅವನ ಪ್ರತಿಜ್ಞೆಯೇ ನಾಟಕಕ್ಕೆ ಆಧಾರ. ಅಂತಹ ಯೌಗಂಧರಾಯಣ ಬದುಕಿರುವಾಗ ಅವನ ರಾಜನನ್ನು ಬಂಧಿಸುವುದು ಸಾಮಾನ್ಯ ಕಾರ್ಯವೇ! ತನ್ನ ಮಂತ್ರಿ ಬಂಧಿಸಿದನೆಂದು ಕಂಚುಕಿ ಬಂದು ನಿವೇದಿಸಿದಾಗ ಮಹಾಸೇನನ ಮಾತು. ಕಂಚುಕಿ ತಾನು ವೃದ್ಧ ಮಿಗಿಲಾಗಿ ಬ್ರಾಹ್ಮಣ ಎಂದೂ ಸುಳ್ಳಾಡಿದವನಲ್ಲ ಎಂದೆಲ್ಲಾ ನುಡಿದಾಗ ರಾಜ ನಿಧಾನಕ್ಕೆ ನಂಬುತ್ತಾನೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು