ಪ್ರತಿಜ್ಞಾ ಯೌಗಂಧರಾಯಣ ೧೨

🔥 ಪ್ರತಿಜ್ಞಾ ಯೌಗಂಧರಾಯಣ 🔥೧೨

*अह: समुत्तीर्य निशा प्रतीक्ष्यते शुभे प्रभाते दिवसोनुचिन्त्यते । अनागतार्थान्यशुभानि पश्यतां गतं गतं कालमवेक्ष्य निर्वृति:*

_ಯೌಗಂಧರಾಯಣನ ಮಾತು. ವತ್ಸರಾಜನನ್ನು ಸೆರೆಯಿಂದ ಬಿಡಿಸಲು ಬಂದು ಅಡಗಿ ಒಂದು ದಿನ ಸುಖವಾಗಿ ಶತ್ರುನೆಲೆಯಲ್ಲಿ ಕಳೆದಿದ್ದಾನೆ. ನಾಳೆ ಹೇಗೋ ಏನೋ ಎಂಬ ಚಿಂತೆ ಆವರಿಸುತ್ತಿದೆ. ಯಾವ ತೊಂದರೆಯೂ ಇಲ್ಲದೆ ಹಗಲು ಕಳೆದು ರಾತ್ರಿಗಾಗಿ ನಿರೀಕ್ಷಿಸುತ್ತೇವೆ. ರಾತ್ರಿಯೂ ಕಳೆದು ಶುಭವಾದ ಮುಂಜಾವು ಬಂದಾಗ ಇನ್ನು ಈ ದಿನ ಏನು ಕಾದಿದೆಯೋ ಎಂದು ಚಿಂತಿಸುತ್ತೇವೆ. ಹಾಗೇ ಚಿಂತಿಸಿ ಯಾಕೆ ಮನದ ಶಾಂತಿಯನ್ನು ಕೆಡಿಸಿಕೊಳ್ಳುವುದು! ಹಿಂದೆ ನಡೆದ ಉತ್ತಮ ಕಾಲದ ಕಮವರಿಕೆಯಲ್ಲಿ ಮನದ ಶಾಂತಿಯನ್ನು ಹಾಗೆಯೇ ಉಳಿಸಿಕೊಳ್ಳೋಣ. ಮಾನವನ ಸ್ವಭಾವವೇ ಹಾಗೆ. ವರ್ತಮಾನದಲ್ಲಿ ಅವನು ಚಿಂತಿಸುವುದು ಕಡಿಮೆ. ಒಂದೋ ಭೂತದ ಚಿಂತೆ ಇಲ್ಲದಿದ್ದರೆ ಭವಿಷ್ಯದ ಚಿಂತೆ. ಭೂತವು ದುಃಖಕರವಾಗಿದ್ದರೆ ಅಯ್ಯೋ ಹೀಗಾಯ್ತಲ್ಲ ಎಂದು ದುಃಖಿಸುತ್ತಾನೆ. ಭೂತ ಸುಖಮಯವಾಗಿದ್ದರೆ ಮುಂದೆ ಏನಾಗುವುದೋ ಎಂದು ಆತಂಕಪಡುತ್ತಾನೆ. ಹಿಂದೆ ನಡೆದ ಮಧುರ ಕ್ಷಣಗಳನ್ನು ನೆನಪಿಸಿಕೊಂಡು ಅಥವಾ ವರ್ತಮಾನದ ಸಹಜತೆಯನ್ನು ಅರಿತು ಮನಸ್ಸನ್ನು ಶಾಂತಿಯಿಂದ ಇರುವಂತೆ ನೋಡಿಕೊಳ್ಳಬೇಕು. *ಅಶಾಂತಸ್ಯ ಕುತಃ ಸುಖಮ್* ಎಂಬಂತೆ ಸುಖವು ಶ್ರೀಮಂತಿಕೆಯಲ್ಲೋ, ಕಾಮದಲ್ಲೋ, ದ್ವೇಷದಲ್ಲೋ, ಮೆರೆಯುವುದರಲ್ಲೋ ಇರುವುದಿಲ್ಲ. ಮನದ ಶಾಂತತೆಯೇ ನಿಜವಾದ ಸುಖ.ಅದಕ್ಕಾಗಿ ಯಾವಾಗಲೂ ವರ್ತಮಾನದಲ್ಲೇ ಇರಬೇಕು. ಒಂದು ವೇಳೆ ವರ್ತಮಾನ ಕೆಟ್ಟದಿದ್ದರೆ ಭೂತದ ಸುಖದ ಘಳಿಗೆ ನೆನೆದು ಸಂತೋಷಿಸಬೇಕು. ಇರುವ ಭಾಗ್ಯವ ನೆನೆದು ಸಂತೋಷದಿಂದ ಶಾಂತಿಯಿಂದ ಇರುವುದೇ ಜೀವನದ ದೊಡ್ಡ ಯಶಸ್ಸು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩