ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ 🌸

*मतिभेदतमस्तिरोहिते गहने कृत्यविधौ विवेकिनाम् । सुकृत: परिशुद्ध आगम: कुरुते दीप इवार्थदर्शनम् ।।*

_ಧರ್ಮಜನ ಪ್ರೀತಿಯ ಮಾತು. ತಮ್ಮ ಭೀಮಾ, ವಿಮರ್ಶಿಸಿ ಹೆಜ್ಜೆ ಇಡಬೇಕೆಂದು ಹೇಳಿದೆ. ಅದಕ್ಕೆ ಉಪಾಯವನ್ನೂ ಹೇಳುವೆನು. ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎಂದು ಬುದ್ಧಿಗೆ ನಿಲುಕದೇ ಅಜ್ಞಾನ ಅಥವಾ ಭ್ರಮೆ ಎಂಬ ಅಂಧಕಾರದಲ್ಲಿ ಸಿಲುಕಿದ್ದಾಗ , ವಿವೇಕಿಗಳು ನೀತಿಶಾಸ್ತ್ರಕ್ಕನುಸಾರವಾಗಿ ಮಾಡುವ ಕಾರ್ಯಗಳನ್ನು ನೋಡಿ ನಾವೂ ಅದೇ ಶಾಸ್ತ್ರವೆಂಬ ದೀಪದ ಬೆಳಕಿನಲ್ಲಿ ಸಾಗಬೇಕಾಗುತ್ತದೆ. ಶಾಸ್ತ್ರದ ಅಧ್ಯಯನ ಅಥವಾ ಅವಲೋಕನ ಹೇಗಿರಬೇಕು ಎಂದರೆ ಪರಿಶುದ್ಧಃ ಅಂದರೆ ಯಾವ ಪೂರ್ವಾಗ್ರಹವೂ ಕೂಡಿರಬಾರದು. ನಮ್ಮ ದೇವರೇ ಶ್ರೇಷ್ಠ, ನಮ್ಮ ಧರ್ಮವೇ ಪರ, ನಮ್ಮ ಶಾಸ್ತ್ರವೊಂದೇ ಸರಿಯಾದ ಬೋಧಕ ಇತ್ಯಾದಿ ಪೂರ್ವಾಗ್ರಹಗಳನ್ನು ತೊರೆದು ಮನಸ್ಸನ್ನು ಶುದ್ಧವಾಗಿಸಿ ವೇದವನ್ನೋ ಶಾಸ್ತ್ರವನ್ನೋ ಅವಲೋಕಿಸಿದಾಗ ಸರಿಯಾದ ದಾರಿ ಸುಲಭವಾಗಿ ಕಂಡುಬರುತ್ತದೆ. ಜಿಪಿಸ್ ಸಿಗಲು ಹೇಗೆ ನೆಟ್ವರ್ಕ್ ಸರಿಯಾಗಿ ಇರಬೇಕೋ ಇಲ್ಲೂ ಅದರಂತೆ ಸರಿಯಾದ ಬೋಧಕರು ಹಾಗೂ ಪರಿಶುದ್ಧ ಮನ ಎರಡೂ ಇರಬೇಕು. ಕೋಣೆಯಲ್ಲಿ ಕತ್ತಲಿದ್ದಾಗ ಕಣ್ಣಿಗೆ ಏನೇನೂ ಕಾಣದು. ಅಂದಾಜು ಮಾಡಬಹುದಷ್ಟೇ. ಶಾಸ್ತ್ರದ ಬೆಳಕು ಇಲ್ಲದಿದ್ದಾಗ ಕತ್ತಲೆ ಕೋಣೆಯಲ್ಲಿ ನಡೆದಂತೆಯೇ ಸರಿ. ಸರಿಯಾಗಿಯೂ ನಡೆಯಬಹುದು, ಬಿದ್ದು ತಾಗಿ ಕೈ ಕಾಲು ಮುರಿಯಲೂಬಹುದು. ಅದೇ ಮನೆಯ ಮಧ್ಯಭಾಗದಲ್ಲಿ ಉತ್ತಮ ಬತ್ತಿ ಹಾಗೂ ಎಣ್ಣೆಯಿಂದ ದೀಪವನ್ನು ಬೆಳಗಿಸಿದಾಗ ಕತ್ತಲನ್ನು ಕಳೆದು ಮನೆಯ ಎಲ್ಲೆಡೆ ಬೆಳಕನ್ನು ತರುತ್ತದೆ. ಅದರಂತೆಯೇ ಮನವು ವಿಮರ್ಶೆಗೆ ಯಾವುದು ಸಾಧನವೆಂದು ಅರಿಯದೇ ತೊಳಲಾಡುತ್ತಿದ್ದಾಗ ಶುದ್ಧ ಮನದಿಂದ ಅಭ್ಯಸಿಸಿದ ಶಾಸ್ತ್ರವೆಂಬ ದೀಪವು ಮನದ ಅಜ್ಞಾನ ಭ್ರಮೆಗಳನ್ನು ಕಳೆದು ಯಥಾರ್ಥವನ್ನು ಸತ್ಯವನ್ನು ತೋರುತ್ತದೆ. ನೀನೂ ಶಾಸ್ತ್ರವನ್ನು ಅರಿತು ಮುಂದಡಿ ಇಡು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩