ರಾಮಾಯಣ ೭೮

📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೭೮

*ದ್ವಿಧಾ ಭಜ್ಯೇಯಮಪ್ಯೇವಂ ನ  ನಮೇಯಂ ತು ಕಸ್ಯಚಿತ್ ಏಷ ಮೇ ಸಹಜೋ ದೋಷಃ ಸ್ವಭಾವೋ ದುರತಿಕ್ರಮಃ*

_ಮಾಲ್ಯವಂತನ‌ ಮಾತಿಗೆ ಕಿಡಿಯಾದ ರಾವಣ ಹೀಗೆ ನುಡಿಯುತ್ತಾನೆ. ರಾಮನು ಕೇವಲ ಮಾನವ. ಅವನಿಗೆ ಹೆದರುವುದೆಂದರೆ ಏನು? ನನ್ನೆದುರು ದೇವತೆಗಳೇ ಹೆದರುತ್ತಾರೆ.ಹಾಗಾಗಿ ಸೀತೆಯನ್ನು ಬಿಟ್ಟುಕೊಡಲಾರೆ. ಲಕ್ಷ್ಮಿಯಂತಿರುವ ಕೈಯಲ್ಲಿ ಕಮಲವೊಂದಿರದ ಆ ಮುಗುದೆಯನ್ನು ತಂದಿರುವುದು ಯಾರಿಗೋ ಹಿಂತಿರುಗಿಸಲು ಅಲ್ಲ. ಈ ರಾವಣ ಸೆಟೆದು ನಿಂತು ಎರಡು ಸೀಳಾಗಿ ಹೋದೇನೇ ಹೊರತು ಇನ್ನೊಬ್ಬನಿಗೆ ಎಂದಿಗೂ ತಲೆಬಾಗಲಾರ. ಇದು ನನ್ನ ಹುಟ್ಟು ಗುಣ. ಹುಟ್ಟುಗುಣವನ್ನು ಮೀರಲು ಯಾರಿಗೂ ಸಾಧ್ಯವಿಲ್ಲ. ರಾವಣ ಈ ಸಮಯದಲ್ಲಿ ಹೀಗೆ ನುಡಿದರೂ ಹಿಂದೆ ವಾಲಿಯ ಎದುರು, ಕಾರ್ತವೀರ್ಯಾರ್ಜುನನೆದುರು ಪ್ರಾಣ ಭೀತಿಯಿಂದ ತಲೆ ಬಾಗಿದ್ದನು.ಆದರೀಗ ವಿನಾಶ ಕಾಲ.ಹಾಗಾಗಿ ವಿಪರೀತ ಬುದ್ಧಿ ಅಷ್ಟೇ ‌_

*ಪಾಪಂ ನಾಶಯತಿ ಹ್ಯೇನಂ ಸ್ವಸ್ಯ ರಾಷ್ಟ್ರಸ್ಯ ರಾಕ್ಷಸೈಃ*

_ರಾವಣ ಮಾತು ಕೇಳಿದ ಮಾಲ್ಯವಂತನು ತನ್ನ ಮನದಲ್ಲಿ ಹೀಗೆ ಯೋಚಿಸುತ್ತಾನೆ. ಇದೆಲ್ಲವೂ ಈತನ ದುಷ್ಕೃತ್ಯದ ಪರಿಪಾಕ.‌ ಇವನ ಪಾಪವು ಇವನನ್ನೂ ರಾಷ್ಟ್ರದ ಪ್ರಜೆಗಳಾದ ರಾಕ್ಷಸರನ್ನೂ ನಾಶ ಮಾಡುತ್ತದೆ. ಹೇಳಿ ಪ್ರಯೋಜನವಿಲ್ಲ. ರಾಜನ ಆಯ್ಕೆ ನಮ್ಮ ಕೈಯಲ್ಲೇ ಇರುತ್ತದೆ. ಯಾರದೋ ಮರ್ಜಿಗೋ ಮುಲಾಜಿಗೋ ದುಡ್ಡಿಗೋ ಪದವಿಗೋ ಉದ್ಯೋಗಕ್ಕೋ ಆಸೆ ಪಟ್ಟು ಕೆಟ್ಟ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಆಮೇಲೆ ಬಹಳ ಕಾಲ ಕೆಟ್ಟ ಆಡಳಿತ ನೋಡುತ್ತಾ ನಾವೇ ವಿನಾಶ ಹೊಂದಬೇಕಾಗುತ್ತದೆ. ಆದ್ದರಿಂದ ಆಯ್ಕೆಯ ಕಾಲದಲ್ಲಿ ಜಾಗರೂಕತೆಯಿಂದ ಆಯ್ಕೆ ಮಾಡಬೇಕು._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩