ಪ್ರತಿಜ್ಞಾ ಯೌಗಂಧರಾಯಣ ೯

🔥 ಪ್ರತಿಜ್ಞಾ ಯೌಗಂಧರಾಯಣ 🔥೯

*अदत्तेत्यागता लज्जा दत्तेति व्यथितं मन: । धर्मस्नेहान्तरे न्यस्ता दु:खिता: खलु मातर: ।।*

_ಮಹಾಸೇನನ ಮಾತು. ಪತ್ನಿಯೊಡನೆ ಮಗಳ ಮದುವೆಯ ಬಗೆಗೆ ಮಾತನಾಡುವಾಗ ಅವಳ ಇಂಗಿತವರಿತಂತೆ ನುಡಿಯುವ ಮಾತು. ಮಗಳು ಎದೆಯೆತ್ತರ ಬೆಳೆದು ನಿಂತಿದ್ದಾಳೆ. ವಿವಾಹದ ವಯಸ್ಸು ಬಂದಾಗಿದೆ. ಇನ್ನೂ ಮದುವೆ ಮಾಡಿ ಕೊಟ್ಟಿಲ್ಲ ಎಂದು ನಾಚಿಕೆ ಪಡುವಳು ಅಮ್ಮ. ಜನರು ಏನನ್ನುವರೋ ಎಂಬ ಭಯವೂ ಅವಳನ್ನು ಕಾಡುತ್ತಿದೆ. ಇದು ಸ್ತ್ರೀ ಸಹಜ ಲಜ್ಜೆಯಲ್ಲ. ಜನರ ಉಪಹಾಸಕ್ಕೆ ಕಾರಣವಾಗುವ ಭಯದಿಂದ ಹುಟ್ಟಿದ ಲಜ್ಜೆ. ಆದರೆ ಮದುವೆ ಬೇಗ ಮಾಡಿ ಕೊಟ್ಟರೆ ಮಗಳು ದೂರ ಹೋಗುವಳಲ್ಲಾ, ಕಣ್ಣೆದುರು ಬೆಳೆದ ಕೂಸು ಬೇರೆಡೆ ಹೇಗೆ ಬದುಕುವುದೋ ಎಂಬ ಚಿಂತೆ ಮನವನ್ನು ಕಾಡುವುದು. ಹೀಗೆ ಧರ್ಮ ಮತ್ತು ಸ್ನೇಹಗಳ ನಡುವೆ ಸಿಕ್ಕಿ ಹಾಕಿಕೊಂಡ ಅಮ್ಮಂದಿರ ಮೃದು ಮನವು ಶೋಕಕ್ಕೆ ಒಳಗಾಗುತ್ತದೆ. ಸರಿಯಾದ ಸಮಯದಲ್ಲಿ ಪ್ರಾಪ್ತ ವಯಸ್ಸಿನಲ್ಲಿ ಮಗಳನ್ನು ವಿವಾಹ ಮಾಡಿಕೊಡುವುದು ಧರ್ಮ. ಹೊತ್ತು ಹೆತ್ತು ಅತ್ತೂ ಕರೆದು ಸಾಕಿ ಸಲಹಿದ ಮುದ್ದಿನ ಮಗಳ ಮೇಲಿನ ಅತಿಯಾದ ಪ್ರೀತಿಯೇ ಸ್ನೇಹ. ಇವೆರಡರ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳುವುದೆಂಬ ಗೊಂದಲವು ಕಾಡಿ ದುಃಖಿಸುವುದು ತಾಯಿಯ ಕರುಳು. ಈಗಲೂ ಮಹಾಸೇನನ ಮಡದಿಯ ಅವಸ್ಥೆ ಅದೇ ಆಗಿದೆ._

http://shreenidhiabhyankar.blogspot.in/

📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩