ರಾಮಾಯಣ ೧೨೬
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ-೧೨೬
*ಸ ಬ್ರಹ್ಮಕೋಶಂ ರಜತಾಲಯಂ ಚ ಶಕ್ರಾಲಯಂ ರುದ್ರಶರಪ್ರಮೋಕ್ಷಮ್ ಹಯಾನನಂ ಬ್ರಹ್ಮಶಿರಶ್ಚದೀಪ್ತಂ ದದರ್ಶ ವೈವಸ್ವತಕಿಂಕರಾಶ್ಚ. ವಜ್ರಾಲಯಂ ವೈಶ್ರವಣಾಲಯಂಚ ಸೂರ್ಯಪ್ರಭಂ ಸೂರ್ಯನಿಬಂಧನಂ ಚ ಬ್ರಹ್ಮಾಸನಂ ಶಂಕರಕಾರ್ಮುಕಂ ಚ ದದರ್ಶ ನಾಭಿಂ ಚ ವಸುಂಧರಾಯಾಃ*
_ಮಾರುತಿಯು ಜಾಂಬವನ ಮಾತಿನಂತೆ ತ್ರಿಕೂಟದಿಂದ ಹಿಮಾಲಯದೆಡೆಗೆ ವಾಯು ಮಾರ್ಗದಲ್ಲಿ ಸಾಗಿ ಹೋದನು. ಆ ಹಿಮಾಲಯದಲ್ಲಿ ನಾನಾ ಕ್ಷೇತ್ರಗಳನ್ನು ಕಂಡು ನಮಿಸಿದನು. ಬ್ರಹ್ಮಕೋಶವೆಂಬ ಬ್ರಹ್ಮನ ಸ್ಥಾನ, ರಜತಾಲಯವೆಂಬ ರಜತನಾಭಿಯ ಸ್ಥಾನ, ಇಂದ್ರನ ಆಶ್ರಮ ( ಹಿಂದೆ ತಪಸ್ಸು ಮಾಡಿದ ಸ್ಥಳ) ರುದ್ರ ಶರ ಪ್ರಮೋಕ್ಷ ಸ್ಥಾನ, ( ತ್ರಿಪುರಾಸುರ ಸಂಹಾರ ಕಾಲದಲ್ಲಿ ರುದ್ರನು ಶರವನ್ನು ಪ್ರಯೋಗಿಸಿದರು ಜಾಗ) ಹಯಗ್ರೀವ ತಪಸ್ಸು ಮಾಡಿದ ಜಾಗ, ಬ್ರಹ್ಮಕಪಾಲ ಸ್ಥಾನ, ಅಲ್ಲಿ ಸೇವೆ ಮಾಡಲು ಬಂದಿದ್ದ ಯಮಕಿಂಕರರನ್ನೂ , ಬ್ರಹ್ಮನು ಇಂದ್ರನಿಗೆ ವಜ್ರಾಯುಧ ಕೊಟ್ಟ ಸ್ಥಾನ, ಕುಬೇರನ ತಪದ ಸ್ಥಾನ, ಸೂರ್ಯಸ್ಥಾನ, ಪಿನಾಕವೆಂಬ ಶಿವಧನುಸ್ಸಿನ ಸ್ಥಾನ,ಭೂನಾಭಿ ಎಂಬ ಪ್ರಾಜಾಪತ್ಯ ಸ್ಥಾನ, ಕೈಲಾಸ, ಈಶ್ವರನ ತಪಃಪೀಠವಾದ ಶಿಲಾತಲ ಇವುಗಳನ್ನೆಲ್ಲ ನೋಡಿ ಕೈ ಮುಗಿದನು. ಬಹುಶಃ ಭೂನಾಭಿ ಎಂಬ ಪ್ರದೇಶವು ಉಪಗ್ರಹಾಧಾರಿತ ಚಿತ್ರದಲ್ಲಿ ಭೂಮಿಯು ಒಂದು ಹೆಣ್ಣೆಂಬ ಕಲ್ಪನೆ ಮಾಡಿಕೊಂಡರೆ ಅದರ ಹೊಕ್ಕುಳಿನಂತೆ ಅದು ಕಂಡೀತು! ಕವಿ ಯಾತ್ರೆಯ ಉದ್ದೇಶದ ಬಗ್ಗೆ ನಮಗೆಲ್ಲ ತಿಳಿಹೇಳುತ್ತಿದ್ದಾನೆ. ಒಂದು ಸ್ಥಳಕ್ಕೆ ಹೋದ ಮೇಲೆ ಅಲ್ಲಿಯ ಎಲ್ಲಾ ಪವಿತ್ರ ಪ್ರದೇಶಗಳನ್ನು ಸಂದರ್ಶಿಸಿ ಹೋಗಬೇಕು. ಅಲ್ಲಿಯ ಮಹತ್ವ ಅರಿತು ಅದೇ ತಕ್ಕನಾದ ಪೂಜಾದಿಳನ್ನು ನಡೆಸಿ ಪುನೀತರಾಗಬೇಕು. ಇಲ್ಲದಿದ್ದರೆ ಯಾತ್ರೆ ಹೋಗಿ ಗಮ್ಮತ್ತು ಮಾಡಲೆಂದು ಹೋದ ಜಾತ್ರೆಯಾದೀತು. ಬಹುಶಃ ಇಲ್ಲಿ ಹೇಳಿರುವ ಹಾಗೂ ನಾವು ಪ್ರಕೃತ ಕಾಣುತ್ತಿರುವ ಬ್ರಹ್ಮಕಪಾಲ ಬೇರೆಬೇರೆಯದೇನೋ! ಇವುಗಳ ನಡುವೆ ಆ ಓಷಧಿಪರ್ವತವು ಕಂಗೊಳಿಸುತ್ತಿತ್ತು._
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಎಲ್ಲಾ ಲೇಖನಗಳಿಗೆ ಅವಲೋಕಿಸಿ
http://shreenidhiabhyankar.blogspot.in/
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ