ಕಿರಾತಾರ್ಜುನೀಯ

🌸 ಕಿರಾತಾರ್ಜುನೀಯದ ಒಂದು ಸಾಯಕ‌ 🌸

*परिणामसुखे गरीयसी व्यथकेस्मिन्वचसि क्षतौजसाम् | अतिवीर्यवतीव भेषजे बहुरल्पीयसि दृश्यते गुण: ||*

_ಮಾತಿನ ಬಗೆಗೆ ಭೀಮನ ಒಂದು ಒಳ್ಳೆಯ ಮಾತು. ದ್ರೌಪದಿಯ ಉತ್ತೇಜಕ ಹಿತವಚನಗಳು ನಮ್ಮ ಪಾಲಿಗೆ ನಿಜಕ್ಕೂ ಬಡಿದೆಬ್ಬಿಸುವಂತಹವು. ಅವಳಾಡಿದ ಮಾತುಗಳು ಕೆಲವೇ ಆದರೂ ಅವುಗಳಲ್ಲಿನ ಸತ್ವ ಅಮೂಲ್ಯವಾದುದು. ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಮಹಾಪರಿಣಾಮಕಾರಿಯಾದ ಔಷಧವನ್ನು ಅಲ್ಪ ಪ್ರಮಾಣದಲ್ಲಿ ನೀಡಿದರೂ ಹೇಗೆ ಅದು ಅವನ ಶೀಘ್ರ ಚೇತರಿಕೆಗೆ ಕಾರಣವಾಗುವುದೋ ಹಾಗೆಯೇ ಕೃಷ್ಣೆಯ ಮಾತುಗಳು ನಮ್ಮ ಪಾಲಿಗೆ ಅದೇಶ ನೀಡಬೇಕಾದ ನಿನಗೆ ಅಮೂಲ್ಯವಾಗಿವೆ. ಅವಳ ಮಾತಿನಂತೆ ಕೃತಿ ಮಾಡಿದಲ್ಲಿ ಅದರ ಪರಿಣಾಮ ಮಹತ್ತಾಗಿರುತ್ತದೆ.ಅದು ಸುಖ ಹೇತುವೂ ಹೌದು. ದುಃಖದಿಂದ ಕೂಡಿರುವ ಶಕ್ತಿಹೀನರಾಗಿರುವ ನಮಗೆ ಅವಳ ಮಾತು ಶೋಕ ಮರೆಸಿ ವೀರ್ಯ ಮೆರೆಸುವ ಶಕ್ತಿ ಹೊಂದಿದೆ. ಹಾಗಾಗಿ ಅಣ್ಣ ಧರ್ಮಜ, ಸಣ್ಣವಳಾದರೂ ಅವಳ ಮಾತು ಸಣ್ಣದಲ್ಲ ಎಂಬ ಸಂಗತಿ ನೆನಪಿಡು. ನಮ್ಮ ಮಾತು ಹೇಗಿರಬೇಕೆಂದು ಕವಿ ಭೀಮನ ಮೂಲಕ ಹೇಳಿಸಿದ್ದಾನೆ. ಎಷ್ಟು ಹೊತ್ತು, ಎಷ್ಟು ವಾಕ್ಯ ಮಾತಾಡಿದೆವು ಎನ್ನುವುದಕ್ಕಿಂತ ನಮ್ಮ ಮಾತು ಎಷ್ಟು ಸತ್ವಯುತ, ಎಷ್ಟು ಪರಿಣಾಮಕಾರಿ ಅನ್ನುವುದು ಮುಖ್ಯವಾಗುತ್ತದೆ. ವ್ಯಾಸರ ಬ್ರಹ್ಮಸೂತ್ರಗಳು ಆಕಾರದಲ್ಲಿ ಸಣ್ಣದಾದರೂ ಅವುಗಳ ಅರ್ಥ ಅಪಾರ. ಹಾಗೆಯೇ ನಾವು ಕೆಲವೇ ಕೆಲವು ಮಾತಾಡಿದರೂ ಎದುರಿರುವ ಮೇಲೆ ಮಹತ್ತಾದ ಪರಿಣಾಮ ಬೀರುವಂತಿರಬೇಕು. ಅಷ್ಟು ಮಹತ್ವ ಮಾತಿಗೆ ನೀಡಬೇಕು. ಇಲ್ಲದಿದ್ದರೆ ಬೋರ್ಕಲ್ಲ ಮೇಲೆ ನೀರು ಸುರಿದಂತೆ ಬಹಳ ಹೊತ್ತಿನ ಮಾತೂ ವ್ಯರ್ಥವಾಗುವುದು. *ಜಿಹ್ವೇ ಪ್ರಮಾಣಂ ಜಾನೀಹಿ*ಎಂಬ ಶ್ಲೋಕ ಇದನ್ನೇ ಪುಷ್ಟೀಕರಿಸುತ್ತದೆ. ನಾವು ನಮ್ಮ ಮಾತಿನಲ್ಲಿ ಪ್ರಮಾಣವನ್ನು ಪರಿಣಾಮವನ್ನು ಗಮನಿಸಿ ಆಡೋಣ._

ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩